IND vs PAK: ಸೇಡಿಗೆ ಸೇಡು.. ಬೌಂಡರಿಗೆ ಬೌಂಡರಿ.. ಟೀಂ ಇಂಡಿಯಾ ಗೆಲ್ಲೋದು ಗ್ಯಾರಂಟಿ..!

ಫಾರ್ಮ್‌ ಕಂಡುಕೊಳ್ಳಲು ಪರದಾಡುತ್ತಿರುವ ಕಿಂಗ್‌ ಕೊಹ್ಲಿಗೆ ಇಂದು 100ನೇ ಟಿ-20 ಸಂಭ್ರಮ. ಹೀಗಾಗಿ ‌ಈ ಮ್ಯಾಚ್‌ ಕಿಂಗ್‌ ಕೊಹ್ಲಿಗೆ ತುಂಬಾ ಅಂದ್ರೆ ತುಂಬಾನೆ ಇಂಪಾರ್ಟೆಂಟ್.‌

Written by - Malathesha M | Edited by - Puttaraj K Alur | Last Updated : Aug 28, 2022, 02:50 PM IST
  • ಇಂದು ಟೀಂ ಇಂಡಿಯಾ ಮತ್ತು ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ
  • ಟಿ-20 ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಳ್ಳುತ್ತಾ ರೋಹಿತ್ ಶರ್ಮಾ ಪಡೆ
  • ಭಾರತ ತಂಡವೇ ಗೆಲ್ಲುವುದು ಪಕ್ಕಾ ಎನ್ನುತ್ತಿದ್ದಾರೆ ಫ್ಯಾನ್ಸ್
IND vs PAK: ಸೇಡಿಗೆ ಸೇಡು.. ಬೌಂಡರಿಗೆ ಬೌಂಡರಿ.. ಟೀಂ ಇಂಡಿಯಾ ಗೆಲ್ಲೋದು ಗ್ಯಾರಂಟಿ..! title=
ಇಂದು ಇಂಡೋ-ಪಾಕ್ ಹೈವೋಲ್ಟೇಜ್ ಮ್ಯಾಚ್

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಕ್ರಿಕೆಟ್‌ ಮ್ಯಾಚ್‌ ಶುರುವಾಗುತ್ತೆ ಅಂದ್ರೆ ಅದು ಬರೀ ಪಂದ್ಯವಾಗಿ ಅಲ್ಲ, ಯುದ್ಧದಂತೆ ಭಾಸವಾಗಿರುತ್ತದೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳು ಎಂದೇ ಬಿಂಬಿತವಾಗಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳು ಇಂದಿಗೂ ಜಗತ್ತಿನ ಗಮನ ಸೆಳೆಯುತ್ತವೆ. ಇಂದು ಕೂಡ ಅಂತಹದ್ದೇ ಹೈವೋಲ್ಟೇಜ್ ಪಂದ್ಯಕ್ಕೆ ದುಬೈ ಸಾಕ್ಷಿಯಾಗಲಿದೆ. ಆದ್ರೆ ಈ ಬಾರಿ ಸೇಡಿಗೆ ಸೇಡು‌ ತೀರಿಸಿಕೊಳ್ಳೋದು ಗ್ಯಾರಂಟಿ, ಭಾರತ ಗೆಲ್ಲೋದು ಪಕ್ಕಾ ಅಂತಿದ್ದಾರೆ ಫ್ಯಾನ್ಸ್.‌

ಅಷ್ಟಕ್ಕೂ ಅಕ್ಟೋಬರ್‌ 24, 2021ಅಂದರೆ ಇಂದಿಗೆ ಬರೋಬ್ಬರಿ 1 ವರ್ಷದ ಹಿಂದೆ ಭಾರತ ಮತ್ತು ಪಾಕಿಸ್ತಾನ ಟಿ-20 ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಅಂದಿನ ಟಿ-20 ವಿಶ್ವಕಪ್‌ ಮ್ಯಾಚ್‌ ಭಾರತಕ್ಕೆ ಕೈಕೊಟ್ಟಿತ್ತು. ಪಾಕಿಸ್ತಾನ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಭಾರತ ತಂಡದ ಅಭಿಮಾನಿಗಳನ್ನು ನೋವಿಗೆ ತಳ್ಳಿತ್ತು. ಆದರೆ ಈಗ ಸೇಡಿಗೆ ಸೇಡು ತೀರಿಸಿಕೊಳ್ಳುವ ಸಮಯ ಬಂದಿದ್ದು, ಇಂದು ನಡೆಯಲಿರುವ ಪಾಕ್‌ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು ಪಕ್ಕಾ ಅಂತಿದ್ದಾರೆ ಫ್ಯಾನ್ಸ್.‌ ಜೊತೆಗೆ ಪಾಕಿಸ್ತಾನಕ್ಕೆ ಹೀನಾಯ ಸೋಲು ಗ್ಯಾರಂಟಿ ಅನ್ನೋ ಮಾತು ಅಭಿಮಾನಿಗಳ ವಲಯದಿಂದ ಕೇಳಿಬರುತ್ತಿದೆ.

ಇದನ್ನೂ ಓದಿ: IND vs Pak: ಇಂಡೋ-ಪಾಕ್ ಪಂದ್ಯಕ್ಕೆ ಅಡ್ಡಿಯಾಗುತ್ತಾ ಮಳೆ! ಸಾಂಪ್ರದಾಯಿಕ ವೈರಿಗಳ ಕದನಕ್ಕೆ ಬೀಳುತ್ತಾ ಬ್ರೇಕ್?

ಕೊಹ್ಲಿ@100..!

ಇಂದಿನ ಮ್ಯಾಚ್ ಕೇವಲ ಪಾಕ್ ವಿರುದ್ಧದ ಪಂದ್ಯವಾಗಿ ನಡೆಯೋದಿಲ್ಲ.‌ ಈ ಮ್ಯಾಚ್‌ ಕಿಂಗ್‌ ಕೊಹ್ಲಿಗೆ ತುಂಬಾ ಅಂದ್ರೆ ತುಂಬಾನೆ ಇಂಪಾರ್ಟೆಂಟ್.‌ ಅತ್ತ ಫಾರ್ಮ್‌ ಕಂಡುಕೊಳ್ಳಲು ಪರದಾಡುತ್ತಿರುವ ಕಿಂಗ್‌ ಕೊಹ್ಲಿಗೆ ಇಂದು 100ನೇ ಟಿ-20 ಸಂಭ್ರಮ. ಕೊಹ್ಲಿ ಪಾಲಿಗೆ ಇದು 100ನೇ ಟಿ-20 ಮ್ಯಾಚ್. ಹೀಗಾಗಿಯೇ ಕಿಂಗ್‌ ಕೊಹ್ಲಿ ಭರ್ಜರಿ ಪ್ರ್ಯಾಕ್ಟಿಸ್‌ ಮಾಡುತ್ತಿದ್ದು, ಎದುರಾಳಿ ತಂಡಕ್ಕೆ ಶಾಕ್‌ ನೀಡಿ ಪಂದ್ಯ ಗೆಲ್ಲಿಸಲು ಸಜ್ಜಾಗಿದ್ದಾರೆ. ಹೈವೋಲ್ಟೇಜ್‌ ಪಂದ್ಯದ ಮಧ್ಯೆ ಸದ್ಯ ಯುಎಇ ಮೈದಾನದಲ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ ವಿರಾಟ್‌ ಕೊಹ್ಲಿ. ಸೆಂಚ್ಯುರಿ ಭಾರಿರಿಸುವ ಮುನ್ಸೂಚನೆಯನ್ನು ಕೊಹ್ಲಿ ಹೀಗೆ ರವಾನಿಸಿದ್ದಾರೆ.

ಬೆಚ್ಚಿದ ಪಾಕ್..?‌

ಭಾರತ ಕ್ರಿಕೆಟ್‌ ತಂಡದ ಭರ್ಜರಿ ಪ್ರಾಕ್ಟಿಸ್‌ ಹಾಗೂ ಪಂದ್ಯಕ್ಕೂ ಮುನ್ನವೇ ಇಷ್ಟೊಂದು ತಾಲೀಮು ನಡೆಸುತ್ತಿರುವುದು ಎದುರಾಳಿಗೆ ಭಯ ಹುಟ್ಟಿಸಿದೆ. ಯಾಕಂದ್ರೆ ಭಾರತ ತಂಡ ತುಂಬಾ ಬಲಶಾಲಿಯಾಗಿದೆ. ಈ ಕಾರಣಕ್ಕೆ ಪಾಕ್‌ಗೆ ಸೋಲು ಕಟ್ಟಿಟ್ಟ ಬುತ್ತಿ ಎನ್ನುತ್ತಿದ್ದಾರೆ ಭಾರತ ತಂಡದ ಅಭಿಮಾನಿಗಳು ಹಾಗೂ 150 ಕೋಟಿ ಭಾರತೀಯರು. ಈ ಹೊತ್ತಲ್ಲಿ ಗೆಲುವಿಗಾಗಿ ಪಾಕಿಸ್ತಾನ ಟೀಂ ಶತಾಯಗತಾಯ ಹೋರಾಟ ನಡೆಸಲಿದ್ದು, ಪಾಕ್‌ನ ಎಲ್ಲಾ ತಂತ್ರಗಳನ್ನು ಧೂಳಿಪಟ ಮಾಡಲು ಭಾರತದ ಆಟಗಾರರು ಸಜ್ಜಾಗಿದ್ದಾರೆ.

ಇದನ್ನೂ ಓದಿ: Asia Cup 2022: ಕಿಂಗ್‌ ಕೊಹ್ಲಿಗೆ ಎಬಿ ಡಿವಿಲಿಯರ್ಸ್ ಸ್ಪೆಷಲ್‌ ವಿಶ್‌, ಕಾರಣ ಕೂಡ ತುಂಬಾ ವಿಶೇಷ!

ಒಟ್ನಲ್ಲಿ ಹೈವೋಲ್ಟೇಜ್‌ ಪಂದ್ಯಕ್ಕೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಸಜ್ಜಾಗಿ ನಿಂತಿವೆ. ಸದ್ಯ ಭಾರತದಲ್ಲಿ ಟೀಂ ಇಂಡಿಯಾ ಗೆಲುವಿಗಾಗಿ ಅಭಿಮಾನಿಗಳು ವಿಶೇಷ ಪೂಜೆ, ಹೋಮ-ಹವಣ ನಡೆಸುತ್ತಿದ್ದಾರೆ. ಇನ್ನೇನು ಕೆಲ ಗಂಟೆಗಳಲ್ಲಿ ಪಂದ್ಯ ಆರಂಭವಾಗಲಿದ್ದು, ಪಾಕಿಸ್ತಾನಕ್ಕೆ ಆಘಾತವಾಗುವುದು ಪಕ್ಕಾ ಎನ್ನಲಾಗುತ್ತಿದೆ. ಆದರೆ ಇದೆಲ್ಲದಕ್ಕೂ ಕನ್ಫರ್ಮ್‌ ಆನ್ಸರ್‌ ಇನ್ನೂ ಸ್ವಲ್ಪ ಹೊತ್ತಿನಲ್ಲೇ ಸಿಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News