ಪರ್ತ್: ನಾಯಕ ವಿರಾಟ್ ಕೊಹ್ಲಿ ಅವರ ಶತಕದೊಂದಿಗೆ ಸುಸ್ಥಿತಿಯಲ್ಲಿದ್ದ ಭಾರತ ತಂಡ ನಂತರ ಕುಸಿತ ಕಂಡು 283ಕ್ಕೆ ಆಲೌಟ್ ಆಗಿದೆ, ಆ ಮೂಲಕ ಭಾರತ ಮೊದಲ ಇನ್ನಿಂಗ್ ನಲ್ಲಿ 43 ರನ್ ಗಳ ಹಿನ್ನಡೆಯನ್ನು ಅನುಭವಿಸಿದೆ.
End of the Indian innings. Pant scores 36, #TeamIndia 283. Nathan Lyon picks 5. Australia lead by 43 runs #AUSvIND pic.twitter.com/yY7VMV9EsQ
— BCCI (@BCCI) December 16, 2018
ಭಾರತ ಒಂದೆಡೆ ತನ್ನ ವಿಕೆಟ್ ಗಳು ಉರುಳುತ್ತಿದ್ದರು ಸಹಿತ ಅದ್ಯಾವುದಕ್ಕೂ ನಾಯಕ ಕೊಹ್ಲಿ ತಲೆಕೆಡಿಸಿಕೊಳ್ಳದೆ ಎಂದಿನ ಆಟವನ್ನು ಮುಂದುವರಿಸಿ ಶತಕವನ್ನು ಗಳಿಸಿದರು, 123 ರನ್ ಗಳಿಸಿದ್ದ ಕೊಹ್ಲಿ ಪ್ಯಾಟ್ ಕಮಿನ್ಸ್ ಅವರ ಬೌಲಿಂಗ್ ನಲ್ಲಿ ಸಂಶಯಾಸ್ಪದವಾದ ಕ್ಯಾಚ್ ಗೆ ಬಲಿಯಾದರು. ಇದಾದ ನಂತರ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ರಿಷಬ್ ಪಂತ್ ಸಹ ನಾಥನ್ ಲೈನ್ ಅವರಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದಂತ ಯಾವುದೇ ಭಾರತದ ಆಟಗಾರನು ಸಹ ಎರಡಂಕಿ ಮೊತ್ತವನ್ನು ದಾಟಲಿಲ್ಲ
ಇನ್ನೊಂದೆಡೆ ಆಸಿಸ್ ನ ನಾಥನ್ ಲೈನ್ ಅವರು ಐದು ಭಾರತದ ಐದು ವಿಕೆಟ್ ಗಳನ್ನು ಕಬಳಿಸುವ ಮೂಲಕ ಮಾರಕವಾಗಿ ಪರಿಣಮಿಸಿದರು.