India vs England : ಬುಮ್ರಾ ಎಸೆತಕ್ಕೆ ತತ್ತರಿಸಿದ ಆಂಗ್ಲರು, ಟೀಂ ಇಂಡಿಯಾಗೆ ಭರ್ಜರಿ ಗೆಲವು!

ಟೀಂ ಇಂಡಿಯಾ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತ್ತು. ಮೊದಲ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡವು ಕೇವಲ 25 ಓವರ್ 2 ಎಸೆತಕ್ಕೆ ತನ್ನೆಲ್ಲ ವಿಕೆಟ್ ಒಪ್ಪಿಸಿ 110 ರನ್ ಗಳಿಸಿ ಭಾರತಕ್ಕೆ ಶರಣಾದರು.

Written by - Channabasava A Kashinakunti | Last Updated : Jul 12, 2022, 10:57 PM IST
India vs England : ಬುಮ್ರಾ ಎಸೆತಕ್ಕೆ ತತ್ತರಿಸಿದ ಆಂಗ್ಲರು, ಟೀಂ ಇಂಡಿಯಾಗೆ ಭರ್ಜರಿ ಗೆಲವು! title=

India vs England : ಟೀಂ ಇಂಡಿಯಾ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತ್ತು. ಮೊದಲ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡವು ಕೇವಲ 25 ಓವರ್ 2 ಎಸೆತಕ್ಕೆ ತನ್ನೆಲ್ಲ ವಿಕೆಟ್ ಒಪ್ಪಿಸಿ 110 ರನ್ ಗಳಿಸಿ ಭಾರತಕ್ಕೆ ಶರಣಾದರು.

ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಭಾರತ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. 

ಜಸ್ಪ್ರೀತ್ ಬುಮ್ರಾ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನದಲ್ಲಿ 6 ವಿಕೆಟ್ಗಳನ್ನು ಕಬಳಿಸಿದ್ದಾರೆ, ಭಾರತವು ಇಂಗ್ಲೆಂಡ್ ಅನ್ನು 110 ರನ್ಗಳಿಗೆ ಕಟ್ಟಿಹಾಕಿತು. 111 ರನ್‌ಗಳ ಈ ಸುಲಭ ಗುರಿಯನ್ನು ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು 18.4 ಓವರ್‌ಗಳಲ್ಲಿ ಗುರಿ ಮುಟ್ಟಿತು. ಓಪನರ್ ಆಗಿ ಬಂದ ಕ್ಯಾಪ್ಟನ್ ರೋಹಿತ್ ಶರ್ಮಾ 76 ರನ್ ಸಿಡಿಸಿದರೆ, ಶಿಖರ್ ಧವನ್ 31 ರನ್ ಗಳಿಸಿದರು.

ಬುಮ್ರಾ 6 ವಿಕೆಟ್ ಮತ್ತು ಮೊಹಮ್ಮದ್ ಶಮಿ ಮೂರು ವಿಕೆಟ್ ಪಡೆದರು. ಟೀಂ ಇಂಡಿಯಾ ವಿಕೆಟ್ ನಷ್ಟವಿಲ್ಲದೆ 111 ರನ್ ಗಳ ಗುರಿ ತಲುಪಿದ ಟೀಂ ಇಂಡಿಯಾ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಬುಮ್ರಾ ಬಿರುಗಾಳಿ ಬೌಲಿಂಗ್ ಗೆ ಇಂಗ್ಲೆಂಡ್ ಉಡೀಸ್!

ಜಸ್ಪ್ರೀತ್ ಬುಮ್ರಾ ಬೌಲಿಂಗ್ ಗೆ ಇಂಗ್ಲೆಂಡ್ 110 ರನ್ ಗಳಿಗೆ ಆಲೌಟ್ ಆಯಿತು. ಬುಮ್ರಾ 7.2 ಓವರ್‌ಗಳಲ್ಲಿ 19 ರನ್ ನೀಡಿ ಆರು ವಿಕೆಟ್ ಪಡೆದರು. ಇಂಗ್ಲೆಂಡಿನಲ್ಲಿ ಏಕದಿನದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಮೊದಲ ಭಾರತೀಯ ವೇಗದ ಬೌಲರ್ ಆಗಿ ಬುಮ್ರಾ ಎನಿಸಿಕೊಂಡರು. ಇದು ಭಾರತದ ವಿರುದ್ಧ ಇಂಗ್ಲೆಂಡ್‌ನ ಅತ್ಯಂತ ಕಡಿಮೆ ಸ್ಕೋರ್ ಆಗಿದೆ. ಇದು ಬುಮ್ರಾ ಮತ್ತು ಮೊಹಮ್ಮದ್ ಶಮಿಯನ್ನು ಹೆಚ್ಚು ಅಪಾಯಕಾರಿ ಬೌಲರ್ ಎಂದು ಸಾಬೀತು ಪಡಿಸಿದರು. ಶಮಿ ಏಳು ಓವರ್ ಗಳಲ್ಲಿ 31 ರನ್ ನೀಡಿ ಮೂರು ವಿಕೆಟ್ ಪಡೆದರು.

ಕ್ಯಾಪ್ಟನ್ ರೋಹಿತ್ ಶರ್ಮಾ, ಶಿಖರ್ ಧವನ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮಹಮ್ಮದ ಶಮಿ, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ ಕೃಷ್ಣ, ಯಜುವೇಂದ್ರ ಚಾಹಲ್.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News