ಟಿ20 ಸರಣಿಗಾಗಿ ಭಾರತ ಜಿಂಬಾಬ್ವೆ ಪ್ರವಾಸ: ಪಂದ್ಯ ನಡೆಯುವ ಸ್ಥಳ, ಯಾವಾಗ, ವೇಳಾಪಟ್ಟಿ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

India vs Zimbabwe T20 Series 2024: ಜಿಂಬಾಬ್ವೆ ಕ್ರಿಕೆಟ್ ಮಂಡಳಿ ಮಂಗಳವಾರ ಈ ವಿಷಯವನ್ನು ಪ್ರಕಟಿಸಿದೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಬಳಿಕ ಈ ಸರಣಿಯನ್ನು ಆಯೋಜಿಸಲಾಗುತ್ತಿದೆ.

Written by - Bhavishya Shetty | Last Updated : Feb 7, 2024, 12:10 PM IST
    • ಭಾರತ ತಂಡ ಜುಲೈ 6 ರಿಂದ ಯುವ ಆಟಗಾರರೊಂದಿಗೆ ಜಿಂಬಾಬ್ವೆ ಪ್ರವಾಸ
    • ಜಿಂಬಾಬ್ವೆ ಕ್ರಿಕೆಟ್ ಮಂಡಳಿ ಮಂಗಳವಾರ ಈ ವಿಷಯವನ್ನು ಪ್ರಕಟಿಸಿದೆ
    • ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್
ಟಿ20 ಸರಣಿಗಾಗಿ ಭಾರತ ಜಿಂಬಾಬ್ವೆ ಪ್ರವಾಸ: ಪಂದ್ಯ ನಡೆಯುವ ಸ್ಥಳ, ಯಾವಾಗ, ವೇಳಾಪಟ್ಟಿ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ title=
India Zimbabwe T20 Series

India vs Zimbabwe T20 Series 2024: T20 ವಿಶ್ವಕಪ್ ಈ ವರ್ಷದ ಜೂನ್‌’ನಲ್ಲಿ ಪ್ರಾರಂಭವಾಗಲಿದೆ. ಟೂರ್ನಿಯ ಮೊದಲ ಪಂದ್ಯ ಜೂನ್ 1 ರಂದು ನಡೆಯಲಿದ್ದು, ಪ್ರಶಸ್ತಿ ಪಂದ್ಯ ಜೂನ್ 29 ರಂದು ಆಯೋಜನೆಯಾಗಿದೆ. ಈ ಟೂರ್ನಿ ಮುಗಿದ ತಕ್ಷಣ ಭಾರತ ಜಿಂಬಾಬ್ವೆ ಪ್ರವಾಸ ಕೈಗೊಳ್ಳಬೇಕಿದೆ. ಭಾರತ ತಂಡ ಜುಲೈ 6 ರಿಂದ ಯುವ ಆಟಗಾರರೊಂದಿಗೆ ಜಿಂಬಾಬ್ವೆ ಪ್ರವಾಸದಲ್ಲಿದ್ದು, ಅಲ್ಲಿ ಉಭಯ ತಂಡಗಳ ನಡುವೆ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ.

ಇದನ್ನೂ ಓದಿ: Rose Day 2024: ಈ ಐದು ಬಗೆಯ ಗುಲಾಬಿಗಳ ಅರ್ಥವೇನು ಗೊತ್ತಾ.. ಆ ಹೂವು ಕೊಟ್ರೆ ಪ್ರೀತಿಗೆ ಗ್ರೀನ್ ಸಿಗ್ನಲ್!

ಜಿಂಬಾಬ್ವೆ ಕ್ರಿಕೆಟ್ ಮಂಡಳಿ ಮಂಗಳವಾರ ಈ ವಿಷಯವನ್ನು ಪ್ರಕಟಿಸಿದೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಬಳಿಕ ಈ ಸರಣಿಯನ್ನು ಆಯೋಜಿಸಲಾಗುತ್ತಿದೆ.

ಈ ಸರಣಿಯಲ್ಲಿ ಭಾರತದ ಪ್ರಮುಖ ಆಟಗಾರರು ಭಾಗವಹಿಸುವ ಸಾಧ್ಯತೆ ತೀರಾ ಕಡಿಮೆ. ಸರಣಿಯ ಎಲ್ಲಾ ಐದು ಪಂದ್ಯಗಳು ಜುಲೈ 6, 7, 10, 13 ಮತ್ತು 14 ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿವೆ.

ಪತ್ರಿಕಾ ಪ್ರಕಟಣೆ ಹೊರಡಿಸಿರುವ ಜಿಂಬಾಬ್ವೆ ಕ್ರಿಕೆಟ್, 'ಜಿಂಬಾಬ್ವೆ ಕ್ರಿಕೆಟ್ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜುಲೈನಲ್ಲಿ ಐದು ಪಂದ್ಯಗಳ ಟಿ 20 ಅಂತರರಾಷ್ಟ್ರೀಯ ಸರಣಿಗೆ ಜಿಂಬಾಬ್ವೆ ಭಾರತವನ್ನು ಆತಿಥ್ಯ ವಹಿಸಲಿದೆ. ಈ ಸರಣಿಯು ಹರಾರೆಯಲ್ಲಿ ಜುಲೈ 6 ರಿಂದ 14ರವರೆಗೆ ನಡೆಯಲಿದೆ” ಎಂದು ಹೇಳಿಕೊಂಡಿದೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾತನಾಡಿ, 'ಜಾಗತಿಕ ಕ್ರಿಕೆಟ್ ಸಮುದಾಯಕ್ಕೆ ಕೊಡುಗೆ ನೀಡುವಲ್ಲಿ ಬಿಸಿಸಿಐ ಯಾವಾಗಲೂ ಪ್ರಮುಖ ಪಾತ್ರ ವಹಿಸುತ್ತದೆ. ಜಿಂಬಾಬ್ವೆಯನ್ನು ಮರುನಿರ್ಮಾಣ ಮಾಡಲು ಇದು ಸಮಯ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಈ ಸಮಯದಲ್ಲಿ ಜಿಂಬಾಬ್ವೆ ಕ್ರಿಕೆಟ್‌’ಗೆ ನಮ್ಮ ಬೆಂಬಲದ ಅಗತ್ಯವಿದೆ. ಜಿಂಬಾಬ್ವೆ ಕ್ರಿಕೆಟ್‌’ಗೆ ಬೆಂಬಲ ನೀಡುವ ನಮ್ಮ ಭರವಸೆಯು ಅಂತರಾಷ್ಟ್ರೀಯ ವೇದಿಕೆಯಲ್ಲಿ ಕ್ರಿಕೆಟ್‌’ನ ಬೆಳವಣಿಗೆ ಮತ್ತು ಸಮೃದ್ಧಿಯ ಹಂಚಿಕೆಯ ದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದರು.

ಭಾರತ ಪ್ರವಾಸದ ಬಗ್ಗೆ ತಮ್ಮ ಉತ್ಸುಕತೆಯನ್ನು ವ್ಯಕ್ತಪಡಿಸಿದ ಜಿಂಬಾಬ್ವೆ ಕ್ರಿಕೆಟ್ ಅಧ್ಯಕ್ಷ ತವೆಂಗ್ವಾ ಮುಕುಹ್ಲಾನಿ, 'ಜುಲೈನಲ್ಲಿ ಟಿ20 ಅಂತಾರಾಷ್ಟ್ರೀಯ ಸರಣಿಗಾಗಿ ಭಾರತಕ್ಕೆ ಆತಿಥ್ಯ ವಹಿಸಲು ಸಂತೋಷವಾಗುತ್ತಿದೆ. ಈ ವರ್ಷ ತವರು ನೆಲದಲ್ಲಿ ಇದು ನಮ್ಮ ಅತಿದೊಡ್ಡ ಅಂತರರಾಷ್ಟ್ರೀಯ ಸರಣಿಯಾಗಿದೆ. ಭಾರತ ತಂಡದ ಪ್ರವಾಸದಿಂದ ಜಿಂಬಾಬ್ವೆ ದೊಡ್ಡ ಮೊತ್ತದ ಆದಾಯವನ್ನು ಗಳಿಸುತ್ತದೆ” ಎಂದಿದ್ದಾರೆ.

ಸಂಪೂರ್ಣ ವೇಳಾಪಟ್ಟಿ

ಪಂದ್ಯ ದಿನಾಂಕ ಸಮಯ
1 ಟಿ20 ಜುಲೈ 6 ಮಧ್ಯಾಹ್ನ 1 ಗಂಟೆಗೆ
2 ಟಿ20 ಜುಲೈ 7 ಮಧ್ಯಾಹ್ನ 1 ಗಂಟೆಗೆ
3 ಟಿ20 ಜುಲೈ 10 6 ಗಂಟೆಗೆ
4 ಟಿ20 ಜುಲೈ 13 ಮಧ್ಯಾಹ್ನ 1 ಗಂಟೆಗೆ
5 ಟಿ20 ಜುಲೈ 14 ಮಧ್ಯಾಹ್ನ 1 ಗಂಟೆಗೆ

ಇದನ್ನೂ ಓದಿ: ಊಟ ಮಾಡಿ ಮಲಗುವ ಮೊದಲು ಈ ಹಣ್ಣುಗಳನ್ನು ತಿನ್ನಬಾರದು!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News