ನವದೆಹಲಿ: ಅಹಮದಾಬಾದ್ ನಲ್ಲಿನ ಮೋಟೆರಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಭಾರತದ ವಿರುದ್ಧ ಎಂಟು ವಿಕೆಟ್ ಗಳ ಗೆಲುವನ್ನು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ನಿರ್ಧಾರ ಮಾಡಿದ ಇಂಗ್ಲೆಂಡ್ (England)ತಂಡವು ತನ್ನ ಮಾರಕ ದಾಳಿಯಿಂದಾಗಿ ಭಾರತದ ಆರಂಭಿಕ ವಿಕೆಟ್ ಗಳು ಬೇಗನೆ ಉರುಳಿದವು. ಒಂದು ಹಂತದಲ್ಲಿ 48 ರನ್ ಗಳಾಗಿದ್ದಾಗ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು, ಇಂತಹ ಸಂದರ್ಭದಲ್ಲಿ ಶ್ರೇಯಸ್ ಅಯ್ಯರ್ 67,ರಿಷಬ್ ಪಂತ್ 21,ಹಾಗೂ ಹಾರ್ದಿಕ್ ಪಾಂಡ್ಯ 19 ರನ್ ಗಳಿಸುವ ತಂಡದ ಮೊತ್ತ ನೂರರ ಗಡಿ ದಾಟುವಂತೆ ನೋಡಿಕೊಂಡರು.
ಇದನ್ನೂ ಓದಿ: ಐತಿಹಾಸಿಕ ಟೆಸ್ಟ್ ಗೆಲುವಿನ ನಂತರ ದ್ರಾವಿಡ್ ಗೆ ಮೆಚ್ಚುಗೆಯ ಸುರಿಮಳೆ ಗೈಯುತ್ತಿರುವುದೇಕೆ?
England win 👏
They chase down the target of 125 comfortably and win the first #INDvENG T20I by eight wickets.
Scorecard: https://t.co/c6nwSdBr8j pic.twitter.com/mTYwnbkvYA
— ICC (@ICC) March 12, 2021
ಇಂಗ್ಲೆಂಡ್ ತಂಡದ ಪರ ಜೋಫ್ರಾ ಆರ್ಚರ್ ಮೂರು ವಿಕೆಟ್ ಗಳನ್ನು ತೆಗೆದುಕೊಂಡು ಗಮನ ಸೆಳೆದರು.ಇನ್ನೊಂದೆಡೆಗೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವು ಕೇವಲ ಎರಡು ವಿಕೆಟ್ ಗಳನ್ನು ಕಳೆದುಕೊಂಡು 15.3 ಓವರ್ ಗಳಲ್ಲಿ ಗೆಲುವಿನ ಗಡಿ ದಾಟಿತು. ಇಂಗ್ಲೆಂಡ್ ಪರವಾಗಿ ಜೇಸನ್ ರಾಯ್ 49 ರನ್ ಗಳಿಸುವ ಮೂಲಕ ತಂಡದ ಗೆಲುವಿಗೆ ಕಾರಣಕರ್ತರಾದರು.
ಇದನ್ನೂ ಓದಿ: Australia vs India: 'ಭಾರತ ತಂಡವನ್ನು ಎಂದೆಂದಿಗೂ ಲಘುವಾಗಿ ಪರಿಗಣಿಸಬೇಡಿ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.