ಚೆನ್ನೈ: ಎಂ.ಎ ಚಿದಂಬರಂ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಟೆಸ್ಟ್ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಮೊದಲ ದಿನದಾಂತ್ಯಕ್ಕೆ ಮೂರು ವಿಕೆಟ್ ನಷ್ಟಕ್ಕೆ 263 ರನ್ ಗಳಿಸಿದೆ.
ಇದನ್ನೂ ಓದಿ: ಈ ತಂತ್ರದಿಂದಲೇ ಕೊಹ್ಲಿಯನ್ನು ಔಟ್ ಮಾಡುವುದಾಗಿ ಹೇಳಿದ ಇಂಗ್ಲೆಂಡ್ ತಂಡ...!
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡಕ್ಕೆ ಆರಂಭದಲ್ಲಿ ಆಘಾತ ಎದುರಾಯಿತು ತಂಡದ ಮೊತ್ತ 63 ಆಗಿದ್ದಾರೆ ರೋರಿ ಬರ್ನ್ಸ್ ಹಾಗೂ ಡೆನಿಯಲ್ ಲಾರೆನ್ಸ್ ಅವರ ವಿಕೆಟ್ ಗಳನ್ನು ಕಳೆದುಕೊಂಡಿತು. ಇದಾದ ನಂತರ ನೆಲೆಯೂರಿದ ದೊಮಿನಿಕ್ ಸಿಬ್ಲೆ ಹಾಗೂ ಜೊಯ್ ರೂಟ್ (Joe Root) ಕ್ರಮವಾಗಿ 87 ಹಾಗೂ 128 ರನ್ ಗಳನ್ನು ಗಳಿಸುವ ಮೂಲಕ ಇಂಗ್ಲೆಂಡ್ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.
Jasprit Bumrah breaks the solid 200-run stand between Dom Sibley and Joe Root, and it's stumps in Chennai!
England lose their opener for 87.#INDvENG | https://t.co/gnj5x4GOos pic.twitter.com/jt868a591f
— ICC (@ICC) February 5, 2021
ಇನ್ನೊಂದೆಡೆಗೆ ಜೋಯ್ ರೂಟ್ ಸತತ ಮೂರು ಟೆಸ್ಟ್ ಗಳಲ್ಲಿ ಹ್ಯಾಟ್ರಿಕ್ ಶತಕ ಗಳಿಸಿದ ಕೀರ್ತಿಗೆ ಪಾತ್ರರಾದರು. ಇದಕ್ಕೂ ಮೊದಲು ಅವರು ಶ್ರೀಲಂಕಾ ವಿರುದ್ಧ 228 ಹಾಗೂ 186 ರನ್ ಗಳನ್ನು ಗಳಿಸಿದ್ದರು.
Three hundreds in three consecutive Tests for Joe Root, in 2021:
💥 228 v Sri Lanka
💥 186 v Sri Lanka
💥 100* v India (today) pic.twitter.com/pVEy0s8qSD— ICC (@ICC) February 5, 2021
ಇದನ್ನೂ ಓದಿ: VIDEO: ಆಂಗ್ಲರ ನೆಲದಲ್ಲಿ ಚೊಚ್ಚಲ ಶತಕ ಸಿಡಿಸಿ ಪತ್ನಿ ಅನುಷ್ಕಾ ನೆನೆದ ವಿರಾಟ್ ಕೊಹ್ಲಿ
ಇನ್ನೊಂದೆಡೆಗೆ ಭಾರತದ ಪರವಾಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಎರಡು ಹಾಗೂ ರವಿಚಂದ್ರನ್ ಅಶ್ವಿನ್ ಒಂದು ವಿಕೆಟಗಳನ್ನು ಪಡೆದುಕೊಂಡರು. ಭಾರತದಲ್ಲಿ ಈಗ ಕೊರೊನಾ ನಂತರ ಮೊದಲ ಬಾರಿಗೆ ಕ್ರಿಕೆಟ್ ಪಂದ್ಯವು ನಡೆಯುತ್ತಿದೆ.ಇನ್ನೊಂದೆಡೆಗೆ ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ಹಲವು ಅನುಭವಿ ಆಟಗಾರರ ಅನುಪಸ್ಥಿತಿಯ ನಡೆಯೂ ಕೂಡ ಸರಣಿಯನ್ನು 2-1 ರಿಂದ ವಶಪಡಿಸಿಕೊಂಡು ದಾಖಲೆ ನಿರ್ಮಿಸಿತ್ತು. ಈಗ ಸ್ವದೇಶದಲ್ಲಿ ನಡೆಯುತ್ತಿರುವ ಈ ಟೆಸ್ಟ್ ಸರಣಿಯಲ್ಲಿಯೂ ಕೂಡ ಭಾರತ ತಂಡ ಉತ್ತಮ ಪ್ರದರ್ಶನದ ನಿರೀಕ್ಷೆಯನ್ನು ಹೊಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.