IND vs NZ, 1st T20 : ಪಾಂಡ್ಯ ಅಪಾಯಕಾರಿ ನಡೆ : 6 ತಿಂಗಳ ನಂತ್ರ ಟೀಂಗೆ ಎಂಟ್ರಿ ಈ ಅಪಾಯಕಾರಿ ಆಟಗಾರ!

IND vs NZ, 1st T20 : ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ಕೆ ಮಾಡಿಕೊಂಡು. ಕಿವೀ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದಾರೆ.

Written by - Channabasava A Kashinakunti | Last Updated : Jan 27, 2023, 07:54 PM IST
  • ಮೊದಲ ಟಿ20 ಪಂದ್ಯಕ್ಕೆ ಪಾಂಡ್ಯ ಅಪಾಯಕಾರಿ ನಡೆ
  • 6 ತಿಂಗಳ ಬಳಿಕ ದಿಢೀರ್ ಎಂಟ್ರಿ ಈ ಮಾರಕ ಆಟಗಾರನ
  • ವಿನಾಶವನ್ನುಂಟು ಮಾಡ್ತಾನೆ ಈ ಆಟಗಾರ
IND vs NZ, 1st T20 : ಪಾಂಡ್ಯ ಅಪಾಯಕಾರಿ ನಡೆ : 6 ತಿಂಗಳ ನಂತ್ರ ಟೀಂಗೆ ಎಂಟ್ರಿ ಈ ಅಪಾಯಕಾರಿ ಆಟಗಾರ! title=

IND vs NZ, 1st T20 : ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ಕೆ ಮಾಡಿಕೊಂಡು. ಕಿವೀ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದಾರೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯ ರಾಂಚಿಯ ಜೆಎಸ್‌ಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಅಪಾಯಕಾರಿ ಹೆಜ್ಜೆಯನ್ನಿಟ್ಟು ಮ್ಯಾಚ್ ವಿನ್ನರ್ ಒಬ್ಬರನ್ನು 6 ತಿಂಗಳ ನಂತರ ಟೀಂ ಇಂಡಿಯಾ ಟಿ20 ತಂಡದ ಪ್ಲೇಯಿಂಗ್ ಇಲೆವೆನ್‌ಗೆ ಕರೆ ತಂದಿದ್ದಾರೆ.

ಮೊದಲ ಟಿ20 ಪಂದ್ಯಕ್ಕೆ ಪಾಂಡ್ಯ ಅಪಾಯಕಾರಿ ನಡೆ

ಭಾರತ ಕ್ರಿಕೆಟ್ ತಂಡದ ಈ ಮ್ಯಾಚ್ ವಿನ್ನರ್ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಭಯ ಹುಟ್ಟಿಸಲಿದ್ದಾರೆ. ಈ ಮ್ಯಾಚ್ ವಿನ್ನರ್ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಗೆ ಎಂಟ್ರಿ ಕೊಟ್ಟಿರುವುದರಿಂದ ನ್ಯೂಜಿಲೆಂಡ್ ತಂಡದಲ್ಲೂ ಭೀತಿ ಆವರಿಸಿದೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ದೊಡ್ಡ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಟೀಂ ಇಂಡಿಯಾ ಕ್ಯಾಪ್ಟನ್ ಪಾಂಡ್ಯ 6 ತಿಂಗಳ ನಂತರ ಟಿ20 ತಂಡಕ್ಕೆ ಮಾರಕ ಸ್ಪಿನ್ನರ್ ಕುಲದೀಪ್ ಯಾದವ್ ಗೆ ಇದ್ದಕ್ಕಿದ್ದಂತೆ ಎಂಟ್ರಿ ಕೊಟ್ಟಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕುಲದೀಪ್ ಯಾದವ್ ಏಕಾಂಗಿಯಾಗಿ ಭಾರತವನ್ನು ಗೆಲ್ಲಿಸಬಹುದು.

ಇದನ್ನೂ ಓದಿ : Team India : ಈ ಫ್ಲಾಪ್ ಆಟಗಾರನನ್ನು ತಂಡದಿಂದ ಕೈಬಿಟ್ಟ ಕ್ಯಾಪ್ಟನ್ ಪಾಂಡ್ಯ!

6 ತಿಂಗಳ ಬಳಿಕ ದಿಢೀರ್ ಎಂಟ್ರಿ ಈ ಮಾರಕ ಆಟಗಾರನ

ಕುಲದೀಪ್ ಯಾದವ್ ನ್ಯೂಜಿಲೆಂಡ್ ತಂಡದ ಬ್ಯಾಟಿಂಗ್ ಲೈನ್‌ಅಪ್ ಅನ್ನು ನಾಶಪಡಿಸಬಹುದು. ಕುಲದೀಪ್ ಯಾದವ್ ತಮ್ಮ ಕೊನೆಯ ಟಿ20 ಪಂದ್ಯವನ್ನು 7 ಆಗಸ್ಟ್ 2022 ರಂದು ವೆಸ್ಟ್ ಇಂಡೀಸ್ ವಿರುದ್ಧ ಲಾಡರ್‌ಹಿಲ್ (ಯುಎಸ್‌ಎ) ನಲ್ಲಿ ಆಡಿದರು. ಈ ಪಂದ್ಯದಲ್ಲಿ ಕುಲದೀಪ್ ಯಾದವ್ 3 ವಿಕೆಟ್ ಪಡೆದರು. ಕುಲದೀಪ್ ಯಾದವ್ ವೆಸ್ಟ್ ಇಂಡೀಸ್ ವಿರುದ್ಧ ಲಾಡರ್‌ಹಿಲ್‌ನಲ್ಲಿ (ಯುಎಸ್‌ಎ) ಟಿ20 ಪಂದ್ಯ ಆಡಿದ ನಂತರ ಟಿ20 ತಂಡದಿಂದ ಹೊರಗುಳಿದಿದ್ದರು. ಆದರೆ ಇದೀಗ ಚೀನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ 6 ತಿಂಗಳ ನಂತರ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ದಂಗೆ ಸೃಷ್ಟಿಸಲು ಸಿದ್ಧರಾಗಿದ್ದಾರೆ.

ವಿನಾಶವನ್ನುಂಟು ಮಾಡ್ತಾನೆ ಈ ಆಟಗಾರ

ಕುಲದೀಪ್ ಯಾದವ್ 8 ಟೆಸ್ಟ್ ಪಂದ್ಯಗಳಲ್ಲಿ 34 ವಿಕೆಟ್ ಪಡೆದಿದ್ದಾರೆ. ಕುಲದೀಪ್ ಯಾದವ್ 78 ಏಕದಿನ ಪಂದ್ಯಗಳಲ್ಲಿ 130 ವಿಕೆಟ್ ಹಾಗೂ 25 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 44 ವಿಕೆಟ್ ಪಡೆದಿದ್ದಾರೆ. ಕುಲದೀಪ್ ಯಾದವ್ 59 ಐಪಿಎಲ್ ಪಂದ್ಯಗಳಲ್ಲಿ 61 ವಿಕೆಟ್ ಪಡೆದಿದ್ದಾರೆ. ಕುಲದೀಪ್ ಯಾದವ್ ಆಗಮನದಿಂದ ನ್ಯೂಜಿಲೆಂಡ್ ತಂಡದಲ್ಲಿ ಆತಂಕದ ವಾತಾವರಣವಿದೆ. ಕುಲದೀಪ್ ಯಾದವ್ ಬ್ಯಾಟ್ಸ್‌ಮನ್‌ಗಳಿಗೆ ವಿಕೆಟ್-ಟು-ವಿಕೆಟ್ ಬೌಲಿಂಗ್‌ನೊಂದಿಗೆ ರನ್ ಗಳಿಸುವ ಅವಕಾಶವನ್ನು ವಿರಳವಾಗಿ ನೀಡುತ್ತಾರೆ. ಕುಲದೀಪ್ ಯಾದವ್ ವಿಕೆಟ್ ಟೇಕರ್ ಬೌಲರ್. ಕುಲದೀಪ್ ಯಾದವ್ ಬತ್ತಳಿಕೆಯಲ್ಲಿ ಪ್ರತಿ ಬಾಣಕ್ಕೂ ತಿರುಗು ಬಾಣವಿದೆ, ಅದು ಎದುರಾಳಿ ತಂಡಕ್ಕೆ ಭಯ ಹುಟ್ಟಿಸಲಿದೆ.

ಇದನ್ನೂ ಓದಿ : Team India : 2023 ರ ಏಕದಿನ ವಿಶ್ವಕಪ್ ಮುನ್ನ ಟೀಂ ಇಂಡಿಯಾಗೆ ಎದುರಾಗಿದೆ ದೊಡ್ಡ ಸವಾಲು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News