India vs Pakistan T20 World Cup Live Score: ಆರಂಭಿಕ ಬ್ಯಾಟ್ಸ್ಮನ್ ಗಳ ವೈಫಲ್ಯ, ಸಂಕಷ್ಟದಲ್ಲಿ ಭಾರತ ತಂಡ

ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಪಾಕ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾಗಿದೆ.

Written by - Zee Kannada News Desk | Last Updated : Oct 24, 2021, 08:17 PM IST
  • ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಪಾಕ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾಗಿದೆ.
India vs Pakistan T20 World Cup Live Score: ಆರಂಭಿಕ ಬ್ಯಾಟ್ಸ್ಮನ್ ಗಳ ವೈಫಲ್ಯ, ಸಂಕಷ್ಟದಲ್ಲಿ ಭಾರತ ತಂಡ title=
file photo

ನವದೆಹಲಿ: ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಪಾಕ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾಗಿದೆ.

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಪಾಕಿಸ್ತಾನ್ ತಂಡವು ತನ್ನ ಮಾರಕ ಬೌಲಿಂಗ್ ದಾಳಿಯಿಂದಾಗಿ ಭಾರತಕ್ಕೆ ಆಘಾತ ನೀಡಿದೆ.ಪಾಕಿಸ್ತಾನದ ಪರವಾಗಿ ಪರಿಣಾಮಕಾರಿ ಬೌಲಿಂಗ್ ದಾಳಿ ನಡೆಸಿದ ಶಾಹಿನ್ ಆಫ್ರಿದಿ ಭಾರತದ ಆರಂಭಿಕ ಆಟಗಾರರಾದ ಕೆ.ಎಲ್ ರಾಹುಲ್ (3) ರೋಹಿತ್ ಶರ್ಮಾ(0) ಅವರ ವಿಕೆಟ್ ಕಬಳಿಸುವ ಮೂಲಕ ಪಾಕಿಸ್ತಾನವು ಮೇಲುಗೈ ಸಾಧಿಸುವಂತೆ ಮಾಡಿದರು.

ಇದನ್ನೂ ಓದಿ: ಸುಭಾಶ್ರೀ ಸಾವು: ಸರ್ಕಾರದ ಮೇಲೆ ನಂಬಿಕೆ ಕಳೆದುಹೋಗಿದೆ- ಮದ್ರಾಸ್ ಹೈಕೋರ್ಟ್

ಇನ್ನೊಂದೆಡೆಗೆ ತಳ ಊರುವ ಸೂಚನೆ ತೋರಿಸುತ್ತಿದ್ದ ಸೂರ್ಯ ಕುಮಾರ್ ಅವರು 11 ರನ್ ಗಾಳಗಿದ್ದಾಗ ಹಸನ್ ಅಲಿ ಅವರಿಗೆ ವಿಕೆಟ್ ಒಪ್ಪಿಸಿದರು, ಸದ್ಯ ಭಾರತ ತಂಡವು 7.3 ಓವರ್ ಗಳಲ್ಲಿ 41 ರನ್ ಗಳಿಸಿದೆ.ಕ್ರಿಸ್ ನಲ್ಲಿ  ವಿರಾಟ್ ಕೊಹ್ಲಿ  21, ರಿಷಬ್ ಪಂತ್ 5 ರನ್ ಗಳಿಸಿ ಆಟವಾಡುತ್ತಿದ್ದಾರೆ.

ಇದನ್ನೂ ಓದಿ-T20 World Cup, Ind vs Pak: ಪಾಕ್ ವಿರುದ್ಧ ಜೈತ್ರಯಾತ್ರೆ ಮುಂದುವರೆಸುವುದೇ ಭಾರತ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News