Arshdeep Singh : ಏಷ್ಯಾ ಕಪ್ ಟಿ20 ತಂಡಕ್ಕೆ ಅರ್ಷ್‌ದೀಪ್ ಸಿಂಗ್ ಆಯ್ಕೆಗೆ ಕೆ.ಶ್ರೀಕಾಂತ್ ಒತ್ತಾಯ!

ಈಗ ಭಾರತ ತಂಡದ ಮಾಜಿ ಆಟಗಾರ ಕೆ.ಶ್ರೀಕಾಂತ್ ಭಾರತ ತಂಡಕ್ಕೆ ಭರ್ಜರಿ ಸಲಹೆ ನೀಡಿದ್ದಾರೆ.

Written by - Channabasava A Kashinakunti | Last Updated : Aug 5, 2022, 03:48 PM IST
  • ಈ ಆಟಗಾರನ ಸೇರ್ಪಡೆಗಾಗಿ ವಿನಂತಿ
  • ನಂಬರ್ ಒನ್ ಆಟಗಾರರಾಗುತ್ತಾರೆ!
  • ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಅರ್ಷದೀಪ್
Arshdeep Singh : ಏಷ್ಯಾ ಕಪ್ ಟಿ20 ತಂಡಕ್ಕೆ ಅರ್ಷ್‌ದೀಪ್ ಸಿಂಗ್ ಆಯ್ಕೆಗೆ ಕೆ.ಶ್ರೀಕಾಂತ್ ಒತ್ತಾಯ! title=

India vs West Indies : ಟಿ20 ವಿಶ್ವಕಪ್‌ಗೆ ಸಿದ್ಧವಾಗಲು ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ ತಂಡ ಐದು ಟಿ20 ಪಂದ್ಯಗಳ ಸರಣಿಯನ್ನು ಆಡುತ್ತಿದೆ. ಟೀಂ ಇಂಡಿಯಾ ಹಲವು ಮ್ಯಾಚ್ ವಿನ್ನರ್ ಆಟಗಾರರನ್ನು ಹೊಂದಿದೆ. ಈಗ ಭಾರತ ತಂಡದ ಮಾಜಿ ಆಟಗಾರ ಕೆ.ಶ್ರೀಕಾಂತ್ ಭಾರತ ತಂಡಕ್ಕೆ ಭರ್ಜರಿ ಸಲಹೆ ನೀಡಿದ್ದಾರೆ. ಅದೇ ವೇಳೆ ಯಾವುದೇ ಸಂದರ್ಭದಲ್ಲಿ ಟಿ20 ವಿಶ್ವಕಪ್‌ಗೆ ಸ್ಟಾರ್ ಆಟಗಾರನನ್ನು ಸೇರಿಸಿಕೊಳ್ಳಬೇಕೆಂಬ ಬೇಡಿಕೆಯೂ ಬಂದಿದೆ.

ಈ ಆಟಗಾರನ ಸೇರ್ಪಡೆಗಾಗಿ ವಿನಂತಿ

ಈ ಬಗ್ಗೆ ಮಾತನಾಡಿದ ಭಾರತ ತಂಡದ ಮಾಜಿ ಆಯ್ಕೆಗಾರ ಹಾಗೂ ಆಟಗಾರ ಕೆ.ಶ್ರೀಕಾಂತ್, 'ಅರ್ಷದೀಪ್ ಸಿಂಗ್ ಅವರನ್ನು ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಬೇಕು. ಹಾಗಾಗದಿದ್ದರೆ ನಂತರ ಟೀಂ ಇಂಡಿಯಾ ಪಶ್ಚಾತ್ತಾಪ ಪಡುತ್ತದೆ. ಅರ್ಷದೀಪ್ ಸಿಂಗ್ ಟಿ20 ಪಂದ್ಯಗಳಲ್ಲಿ ಅದ್ಭುತ ಆಟ ಪ್ರದರ್ಶಿಸುತ್ತಿದ್ದಾರೆ. ವೇಗದ ಬೌಲರ್ ಪ್ರತಿ ಓವರ್‌ಗೆ 6.52 ರನ್‌ಗಳ ಎಕಾನಮಿ ದರದಲ್ಲಿ 4 ಪಂದ್ಯಗಳಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿದ್ದಾರೆ ಮತ್ತು ತಮ್ಮ ಆಟದಿಂದ ಎಲ್ಲರನ್ನೂ ಮೆಚ್ಚಿಸಿದ್ದಾರೆ ಎಂದರು.

ಇದನ್ನೂ ಓದಿ : Virat Kohli : ಕೊಹ್ಲಿ ನಾಯಕತ್ವ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಬಿಸಿಸಿಐ ಅಧಿಕಾರಿ!

ನಂಬರ್ ಒನ್ ಆಟಗಾರರಾಗುತ್ತಾರೆ!

ಮುಂದುವರೆದು ಮಾತನಾಡಿದ ಶ್ರೀಕಾಂತ್, 'ಅರ್ಷದೀಪ್ ಸಿಂಗ್ ಟಿ20ಯಲ್ಲಿ ಭವಿಷ್ಯದ ವಿಶ್ವ ನಂ 1 ಆಗಲಿದ್ದಾರೆ. ಅದನ್ನು ಗಮನಿಸಿ. ಅವರು ಟಿ20 ವಿಶ್ವಕಪ್ ತಂಡದಲ್ಲಿ ಆಯ್ಕೆ ಮಾಡಬೇಕು. ಚೇತನ್ ಶರ್ಮಾ ಅವರ ಹೆಸರನ್ನು ಸಹ ತೆಗೆದುಕೊಳ್ಳುವಂತೆ ನಾನು ಹೇಳಲು ಬಯಸುತ್ತೇನೆ. 23ರ ಹರೆಯದ ಅರ್ಷದೀಪ್ ಸಿಂಗ್ ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಎರಡನೇ ಟಿ20ಯಲ್ಲಿ ಆತಿಥೇಯರ ವಿರುದ್ಧ ಕೊನೆಯ ಓವರ್‌ನಲ್ಲಿಯೂ ಅವರು ಉತ್ತಮವಾಗಿ ಬೌಲಿಂಗ್ ಮಾಡಿದರು.

ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಅರ್ಷದೀಪ್

ಐಪಿಎಲ್ 2022 ರಲ್ಲಿ ಅರ್ಷದೀಪ್ ಸಿಂಗ್ ಅದ್ಭುತ ಆಟವನ್ನು ಪ್ರದರ್ಶಿಸಿದರು. ಪಂಜಾಬ್ ಕಿಂಗ್ಸ್ ಪರ ಆಡುವಾಗ ಅವರು 14 ಪಂದ್ಯಗಳಲ್ಲಿ 10 ವಿಕೆಟ್ ಪಡೆದರು. ಅವರ ಅಪಾಯಕಾರಿ ಪ್ರದರ್ಶನ ಕಂಡು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದರು. ಅರ್ಷದೀಪ್ ಸಿಂಗ್ ಡೆತ್ ಓವರ್‌ಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುತ್ತಾರೆ, ಇದರ ಹೊರತಾಗಿ ಅವರು ಪವರ್‌ಪ್ಲೇನಲ್ಲಿ ನಿಖರವಾದ ಲೈನ್ ಲೆಂತ್‌ಗೆ ಹೆಸರುವಾಸಿಯಾಗಿದ್ದಾರೆ.

ಇದನ್ನೂ ಓದಿ : ಕೆ.ಎಲ್.ರಾಹುಲ್ ಟೀಮ್ ಇಂಡಿಯಾಗೆ ಅಗತ್ಯವಿಲ್ಲ ಎಂದ್ರಾ ಈ ಆಟಗಾರ...!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News