ಶೆಫಾಲಿ-ಸ್ಮೃತಿ ಅಬ್ಬರಕ್ಕೆ ಮಣಿದ ಬಾಂಗ್ಲಾದೇಶ: ಅಬ್ಬರಿಸಿ ಗೆದ್ದ ಭಾರತ ವನಿತೆಯರ ತಂಡ ಏಷ್ಯಾಕಪ್‌ ಫೈನಲ್‌ ಪ್ರವೇಶ

Women's Asia Cup 2024: ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಇದಾದ ಬಳಿಕ ಭಾರತದ ಬೌಲರ್‌ʼಗಳು ಬಾಂಗ್ಲಾ ಆಟಗಾರರಿಗೆ ದುಸ್ವಪ್ನವಾಗಿ ಕಾಡಿದ್ದು ಸುಳ್ಳಲ್ಲ. 

Written by - Bhavishya Shetty | Last Updated : Jul 26, 2024, 05:49 PM IST
    • ಮಹಿಳಾ ಏಷ್ಯಾ ಕಪ್ 2024ರಲ್ಲಿ ಫೈನಲ್‌ʼಗೆ ಲಗ್ಗೆ ಇಟ್ಟ ಭಾರತ ವನಿತೆಯರ ತಂಡ
    • ಭಾರತದ ವಿರುದ್ಧ ಬಾಂಗ್ಲಾದೇಶ ತಂಡ ಕೇವಲ 80 ರನ್‌ ಗಳಿಸಿತ್ತು
    • ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು
ಶೆಫಾಲಿ-ಸ್ಮೃತಿ ಅಬ್ಬರಕ್ಕೆ ಮಣಿದ ಬಾಂಗ್ಲಾದೇಶ: ಅಬ್ಬರಿಸಿ ಗೆದ್ದ ಭಾರತ ವನಿತೆಯರ ತಂಡ ಏಷ್ಯಾಕಪ್‌ ಫೈನಲ್‌ ಪ್ರವೇಶ  title=
File Photo

Women's Asia Cup 2024: ಮಹಿಳಾ ಏಷ್ಯಾ ಕಪ್ 2024ರಲ್ಲಿ ಭಾರತ ತಂಡ ನಿರೀಕ್ಷೆಗೆ ತಕ್ಕಂತೆ ಬದುಕಿದೆ. ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದ್ದ ಬ್ಲೂ ಆರ್ಮಿ ಸೆಮಿಫೈನಲ್‌ʼನಲ್ಲಿ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಫೈನಲ್‌ʼಗೆ ಲಗ್ಗೆ ಇಟ್ಟಿದೆ. ಭಾರತದ ವಿರುದ್ಧ ಬಾಂಗ್ಲಾದೇಶ ತಂಡ ಕೇವಲ 80 ರನ್‌ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ 10 ವಿಕೆಟ್‌ʼಗಳಿಂದ ಸುಲಭವಾಗಿ ಗೆಲುವು ಸಾಧಿಸಿತು. 

ಇದನ್ನೂ ಓದಿ:  ಫಿಕ್ಸ್ ಆಯ್ತಾ ಡಿಂಪಲ್ ಕ್ವೀನ್ ರಚಿತಾ ರಾಮ್‌ ಮದುವೆ? ಗುಳಿಕೆನ್ನೆ ಚೆಲುವೆಯ ಹುಡುಗ ಯಾರು?

ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಇದಾದ ಬಳಿಕ ಭಾರತದ ಬೌಲರ್‌ʼಗಳು ಬಾಂಗ್ಲಾ ಆಟಗಾರರಿಗೆ ದುಸ್ವಪ್ನವಾಗಿ ಕಾಡಿದ್ದು ಸುಳ್ಳಲ್ಲ. ಟೀಂ ಇಂಡಿಯಾ ಪರವಾಗಿ ರಾಧಾ ಯಾದವ್ ಮತ್ತು ರೇಣುಕಾ ಸಿಂಗ್ ತಲಾ 3 ವಿಕೆಟ್ ಪಡೆದರು. ಇದಲ್ಲದೇ ಪೂಜಾ ಮತ್ತು ದೀಪ್ತಿ ಖಾತೆಗೆ ತಲಾ ಒಂದೊಂದು ವಿಕೆಟ್ ಸೇರಿತ್ತು.

ಶೆಫಾಲಿ-ಸ್ಮೃತಿ ಅಬ್ಬರ:

ಭಾರತದಿಂದ ಅದ್ಭುತ ಬೌಲಿಂಗ್ ಕಂಡುಬಂದಿದ್ದು ಮಾತ್ರವಲ್ಲದೆ, ಇನ್ ಫಾರ್ಮ್ ಶೆಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಬ್ಯಾಟಿಂಗ್‌ʼನಲ್ಲೂ ಅಬ್ಬರಿಸಿದ್ದರು. ಶೆಫಾಲಿ ಅಜೇಯ 26 ರನ್ ಗಳಿಸಿದರೆ, ಸ್ಮೃತಿ ಅಜೇಯ 55 ರನ್ ಗಳಿಸಿದರು. ಮಂಧಾನ ಅವರ ಇನ್ನಿಂಗ್ಸ್‌ʼನಲ್ಲಿ 9 ಬೌಂಡರಿ ಹಾಗೂ ಒಂದು ಸಿಕ್ಸರ್‌ ಬಾರಿಸಿದ್ದರು. ಈ ಇನ್ನಿಂಗ್ಸ್‌ನಿಂದಾಗಿ ಭಾರತ 10 ವಿಕೆಟ್‌ʼಗಳಿಂದ ಪಂದ್ಯವನ್ನು ಗೆಲ್ಲುವ ಮೂಲಕ ಫೈನಲ್‌ʼಗೆ ಪ್ರವೇಶ ನೀಡಿದೆ.

ಗ್ರೂಪ್ ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭಾರತದ ಎದುರು ಸೋತಿತ್ತು. ಇದರಿಂದಾಗಿ ಪಾಕ್ ತಂಡ ಅರ್ಹತೆ ಪಡೆಯಲು ಭಾರತದ ನೆರವು ಪಡೆಯಬೇಕಾಯಿತು. ಗ್ರೂಪ್ ಹಂತದ ಕೊನೆಯ ಪಂದ್ಯವನ್ನು ಟೀಂ ಇಂಡಿಯಾ ಗೆದ್ದು ತನ್ನೊಂದಿಗೆ ಪಾಕಿಸ್ತಾನ ಕೂಡ ಸೆಮಿಫೈನಲ್‌ʼಗೆ ಅರ್ಹತೆ ಪಡೆಯುವಂತೆ ಮಾಡಿದೆ. 

ಇದನ್ನೂ ಓದಿ: ನನ್ನ ಪತಿ ಒಬ್ಬ ಮಹಿಳೆಯಿಂದ ಸುಖ ಪಡೆಯುತ್ತಿರಲಿಲ್ಲ.- ಶಮಿ ವಿರುದ್ಧ ಹಸಿನ್ ಜಹಾನ್ ಮತ್ತೆ ಆರೋಪ!

ಇನ್ನು ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಪಂದ್ಯ ಇನ್ನೇನು ಆರಂಭವಾಗಲಿದೆ. ಶ್ರೀಲಂಕಾವನ್ನು ಸೋಲಿಸುವಲ್ಲಿ ಪಾಕಿಸ್ತಾನ ತಂಡ ಯಶಸ್ವಿಯಾದರೆ ಫೈನಲ್‌ʼನಲ್ಲಿ ಡಬಲ್ ಡೋಸ್ ರೋಚಕತೆ ಸಿಗುವುದು ಪಕ್ಕಾ.  ಜುಲೈ 30 ರಂದು ಫೈನಲ್ ಪಂದ್ಯ ನಡೆಯಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News