India-South Africa T20: ದ.ಆಫ್ರಿಕಾಗೆ ಮಾರಕವಾಗುತ್ತಾರಾ ಭಾರತದ ಈ ಕ್ರಿಕೆಟ್‌ ಆಟಗಾರ?

ವೇಗದ ಬೌಲರ್ ಡೆತ್ ಓವರ್‌ಗಳಲ್ಲಿ ಮಾರಕ ಯಾರ್ಕರ್‌ಗಳನ್ನು ಹೊಡೆಯುವುದರಲ್ಲಿ ನಿಪುಣರರಾಗಿದ್ದಾರೆ. ಇತ್ತೀಚೆಗೆ, ಇವರು ಐಪಿಎಲ್‌ 2022ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಅದರ ಆಧಾರದ ಮೇಲೆ ಈ ಬೌಲರ್‌ನ್ನು ಟೀಮ್ ಇಂಡಿಯಾದ ಆಯ್ಕೆಗಾರರು ಟಿ20 ಟೂರ್ನಿಗೆ ಆಯ್ಕೆ ಮಾಡಿದ್ದಾರೆ.  

Written by - Bhavishya Shetty | Last Updated : May 31, 2022, 03:28 PM IST
  • ಭಾರತ-ದಕ್ಷಿಣ ಆಫ್ರಿಕಾ ಟಿ-20 ಅಂತಾರಾಷ್ಟ್ರೀಯ ಸರಣಿ
  • 'ಡೆತ್ ಓವರ್' ಸ್ಪೆಷಲಿಸ್ಟ್ ಅರ್ಷದೀಪ್ ಸಿಂಗ್ ಆಯ್ಕೆ
  • ದ.ಆಫ್ರಿಕಾಗೆ ಮಾರಕವಾಗಲಿದ್ದಾರೆ ಅರ್ಷದೀಪ್ ಸಿಂಗ್
India-South Africa T20: ದ.ಆಫ್ರಿಕಾಗೆ ಮಾರಕವಾಗುತ್ತಾರಾ ಭಾರತದ ಈ ಕ್ರಿಕೆಟ್‌ ಆಟಗಾರ?  title=
Arshdeep Singh

India-South Africa T20: ಜೂನ್ 9 ರಿಂದ ಜೂನ್ 19ರವರೆಗೆ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಐದು ಪಂದ್ಯಗಳ T20 ಸರಣಿ ನಡೆಯಲಿದೆ. ಈ ಟಿ-20 ಅಂತಾರಾಷ್ಟ್ರೀಯ ಸರಣಿಗೆ ಆಯ್ಕೆಗಾರರು ಅತ್ಯಂತ ಅಪಾಯಕಾರಿ ವೇಗದ ಬೌಲರ್‌ಗೆ ಅವಕಾಶ ನೀಡಿದ್ದಾರೆ.

ವೇಗದ ಬೌಲರ್ ಡೆತ್ ಓವರ್‌ಗಳಲ್ಲಿ ಮಾರಕ ಯಾರ್ಕರ್‌ಗಳನ್ನು ಹೊಡೆಯುವುದರಲ್ಲಿ ನಿಪುಣರರಾಗಿದ್ದಾರೆ. ಇತ್ತೀಚೆಗೆ, ಇವರು ಐಪಿಎಲ್‌ 2022ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಅದರ ಆಧಾರದ ಮೇಲೆ ಈ ಬೌಲರ್‌ನ್ನು ಟೀಮ್ ಇಂಡಿಯಾದ ಆಯ್ಕೆಗಾರರು ಟಿ20 ಟೂರ್ನಿಗೆ ಆಯ್ಕೆ ಮಾಡಿದ್ದಾರೆ.

ಇದನ್ನು ಓದಿ: 'ಹಾರ್ದಿಕ್ ಪಾಂಡ್ಯ ಭವಿಷ್ಯದ ಭಾರತ ಕ್ರಿಕೆಟ್ ತಂಡದ ನಾಯಕ'

ಮೊದಲ ಬಾರಿಗೆ ಟೀಮ್ ಇಂಡಿಯಾದಲ್ಲಿ 'ಡೆತ್ ಓವರ್' (ಅಂತಿಮ ಓವರ್) ಸ್ಪೆಷಲಿಸ್ಟ್ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರನ್ನು ಆಯ್ಕೆ ಮಾಡಲಾಗಿದೆ. ಅರ್ಷದೀಪ್ ಸಿಂಗ್ ಅವರು 13 ಐಪಿಎಲ್ ಪಂದ್ಯಗಳಲ್ಲಿ ಕೇವಲ 10 ವಿಕೆಟ್‌ಗಳನ್ನು ಪಡೆದಿರಬಹುದು. ಆದರೆ ಪರ್ಯಾಯವಾಗಿ 'ವೈಡ್ ಯಾರ್ಕರ್‌ಗಳು' ಮತ್ತು 'ಬ್ಲಾಕ್-ಹೋಲ್‌ಗಳು' ಬೌಲ್ ಮಾಡುವ ಅವರ ಸಾಮರ್ಥ್ಯವು ಅವರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ತಂದುಕೊಟ್ಟಿದೆ ಎನ್ನಬಹುದು. 

ಡೆತ್ ಓವರ್‌ಗಳಲ್ಲಿ ಅತ್ಯುತ್ತಮ ಬೌಲರ್ ಎಂದೇ ಖ್ಯಾತಿ: 
ಐಪಿಎಲ್ 2022ರಲ್ಲಿ ಅರ್ಷದೀಪ್ ಸಿಂಗ್ ಪಂಜಾಬ್ ಕಿಂಗ್ಸ್‌ ತಂಡದ ಪರವಾಗಿ ಆಡಿದ್ದರು. ಅಷ್ಟೇ ಅಲ್ಲದೆ, ಅರ್ಷದೀಪ್ ಸಿಂಗ್ ಅವರ ಎಕಾನಮಿ ರೇಟ್ 7.31 ಆಗಿದೆ. ಈ ಹಂತದಲ್ಲಿ ಎಲ್ಲಾ ಬೌಲರ್‌ಗಳಿಗೆ ಹೋಲಿಸಿದರೆ ಇದು ಅತ್ಯುತ್ತಮ ರನ್‌ರೇಟ್‌ ಎನ್ನಬಹುದು. ಇನ್ನು ಅರ್ಷದೀಪ್‌ ಅವರು ಡೆತ್ ಓವರ್‌ಗಳಲ್ಲಿ ಯಾರ್ಕರ್‌ಗಳ ಮೂಲಕ ಅದ್ಭುತವಾಗಿ ಬೌಲಿಂಗ್ ಮಾಡುತ್ತಾರೆ. 

ಒತ್ತಡದ ಪರಿಸ್ಥಿತಿಗಳಲ್ಲಿ ಸ್ಥಿರವಾದ ಬೌಲಿಂಗ್‌: 
ಒತ್ತಡದ ಪರಿಸ್ಥಿತಿಯಲ್ಲೂ ಅರ್ಷದೀಪ್ ಸಿಂಗ್ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅರ್ಷದೀಪ್ ಸಿಂಗ್ ಒತ್ತಡದ ಸಂದರ್ಭದಲ್ಲೂ ಶಾಂತವಾಗಿ, ಡೆತ್ ಓವರ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ. ಇದು ಅರ್ಷದೀಪ್ ಅವರು ಟೀಮ್ ಇಂಡಿಯಾವನ್ನು ಸೇರ್ಪಡೆಗೊಳ್ಳಲು ಸಹಕಾರಿಯಾಗಿದೆ ಎನ್ನಬಹುದು. 

ಇದನ್ನು ಓದಿ: Tilak Varma IPL 2022: ವಿರಾಟ್ ಕೊಹ್ಲಿಗೆ ಮಾರಕವಾಗಬಹುದು 19ರ ಹರೆಯದ ಈ ಆಟಗಾರ ..! ಶೀಘ್ರದಲ್ಲೇ ಸಿಗಲಿದೆ ಅವಕಾಶ

ಭಾರತದ ಟಿ20 ಅಂತಾರಾಷ್ಟ್ರೀಯ ತಂಡ ಇಂತಿದೆ:
ಕೆ.ಎಲ್‌ ರಾಹುಲ್ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಉಪನಾಯಕ, ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿ.ಕೀ), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್ , ರವಿ ಬಿಷ್ಣೋಯ್ , ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್ ಮತ್ತು ಉಮ್ರಾನ್ ಮಲಿಕ್.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News