ಇಂಡೋನೇಷ್ಯಾ ಓಪನ್ ಫೈನಲ್: ಬೆಳ್ಳಿಗೆ ತೃಪ್ತಿ ಪಟ್ಟ ಪಿ.ವಿ.ಸಿಂಧು

ಜಕಾರ್ತಾದ ಇಸ್ತೋರಾ ಸೆನಾಯನ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಇಂಡೋನೇಷ್ಯಾ ಓಪನ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಆಟಗಾರ್ತಿ ಅಕಾನೆ ಯಮಗುಚಿ ವಿರುದ್ಧ 21-15, 21-16 ಅಂತರದಲ್ಲಿ ರಲ್ಲಿ ಪಿ.ವಿ ಸಿಂಧು ಸೋಲನ್ನು ಅನುಭವಿಸಿದ್ದಾರೆ. ಆ ಮೂಲಕ ಬೆಳ್ಳಿ ಪದಕಕ್ಕೆ ಸಮಾಧಾನ ಪಡಬೇಕಾಯಿತು.

Last Updated : Jul 21, 2019, 04:53 PM IST
ಇಂಡೋನೇಷ್ಯಾ ಓಪನ್ ಫೈನಲ್: ಬೆಳ್ಳಿಗೆ ತೃಪ್ತಿ ಪಟ್ಟ ಪಿ.ವಿ.ಸಿಂಧು   title=
photo courtesy: twitter

ನವದೆಹಲಿ: ಜಕಾರ್ತಾದ ಇಸ್ತೋರಾ ಸೆನಾಯನ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಇಂಡೋನೇಷ್ಯಾ ಓಪನ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಆಟಗಾರ್ತಿ ಅಕಾನೆ ಯಮಗುಚಿ ವಿರುದ್ಧ 21-15, 21-16 ಅಂತರದಲ್ಲಿ ರಲ್ಲಿ ಪಿ.ವಿ ಸಿಂಧು ಸೋಲನ್ನು ಅನುಭವಿಸಿದ್ದಾರೆ. ಆ ಮೂಲಕ ಬೆಳ್ಳಿ ಪದಕಕ್ಕೆ ಸಮಾಧಾನ ಪಡಬೇಕಾಯಿತು.

ಜಪಾನಿನ ಯಮಗುಚಿ ಮೊದಲ ಗೇಮ್‌ನಲ್ಲಿ 3-0 ಮುನ್ನಡೆ ಸಾಧಿಸಿದ್ದರು, ಆದರೆ ಸಿಂಧು 8-11 ರಿಂದ ಹಿನ್ನಡೆ ಸಾಧಿಸಿದರು. ಅಲ್ಲಿಂದ ಜಪಾನಿನ ಆಟಗಾರ್ತಿ ಹಿಂತಿರುಗಿ ನೋಡಲೇ ಇಲ್ಲ ಎಂದು ಹೇಳಬಹುದು. ಎರಡನೇ ಪಂದ್ಯವು ಮೊದಲಿನಿಂದಲೂ ನಿಕಟ ಸ್ಪರ್ಧೆಯೊಂದಿಗೆ ಇದೇ ರೀತಿ ಹೊಂದಿತ್ತು, ಅಲ್ಲಿ ಸಿಂಧು ಮೊದಲು ಕೆಲವು ಅಂಕಗಳನ್ನು ಕಳೆದುಕೊಂಡು ನಂತರ ಅದನ್ನು 4-4ರಂತೆ ಮಾಡಲು ಹೋರಾಡಿದರು.ಆದರೆ ಜಪಾನಿನ ಯಮಗುಚಿ ಐದು ಅಂಕಗಳ ಗೆಲುವಿನೊಂದಿಗೆ ಮುನ್ನಡೆ ಕಾಯ್ದುಕೊಂಡರು.

ಜಪಾನಿನ ಯಮಗುಚಿ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ ಆಟಗಾರ್ತಿ ಟೈ ಜು ಯಿಂಗ್ ಅವರನ್ನು ಸೋಲಿಸಿ ಫೈನಲ್ ಗೆ ಲಗ್ಗೆ ಇಟ್ಟಿದ್ದರು.ಇನ್ನೊಂದೆಡೆಗೆ ಪಿವಿ ಸಿಂಧು ಚೀನಾದ ಚೆನ್ ಯು ಫೆ ಅವರನ್ನು 21-19, 21-10 ಅಂತರದಲ್ಲಿ ಸೋಲಿಸುವ ಮೂಲಕ ಫೈನಲ್ ಗೆ ತಲುಪಿದ್ದರು. 

Trending News