ನವದೆಹಲಿ: IPL 15th Season Update - IPL 15ನೇ ಆವೃತ್ತಿಯ ಕುರಿತು ಒಂದು ಹೊಸ ಅಪ್ಡೇಟ್ ಪ್ರಕಟಗೊಂಡಿದ್ದು, ಮುಂದಿನ ಸೀಸನ್ ನಲ್ಲಿ ಎರಡು ಹೊಸ ತಂಡಗಳನ್ನು ನೀವು IPL ನಲ್ಲಿ ಆಡುವುದನ್ನು ನೋಡಬಹುದಾಗಿದೆ. ಇವುಗಳಲ್ಲಿನ ಒಂದು ತಂಡಕ್ಕೆ ಮಂಗಳವಾರ BCCI ಟೆಂಡರ್ ಜಾರಿಗೊಳಿಸಿದೆ. ಟೆಂಡರ್ ಖರೀದಿಸಲು ಅಕ್ಟೋಬರ್ 5 ಕೊನೆಯ ದಿನಾಂಕ ಎಂದು ನಿಗದಿಪಡಿಸಲಾಗಿದೆ. BCCI ಪ್ರಕಾರ ಈ ಟೆಂಡರ್ ಡಾಕ್ಯೂಮೆಂಟ್ ಮೌಲ್ಯವನ್ನು 10 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಇದರಲ್ಲಿ ತಂಡವನ್ನು ಖರೀದಿಸಲು ಅರ್ಹತೆ, ಬಿಡ್ಡಿಂಗ್ ಪ್ರಕ್ರಿಯೆ, ಪ್ರಸ್ತಾವಿತ ಹೊಸ ತಂಡಗಳ ಹಕ್ಕುಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಇರಲಿದೆ. BCCI ಬಿಡ್ ಸಲ್ಲಿಸಲು ಇಚ್ಛೆ ವ್ಯಕ್ತಪಡಿಸುವ ಯಾವುದೇ ಕಂಪನಿಯು ಟೆಂಡರ್ ಅಥವಾ ITT ಆಹ್ವಾನವನ್ನು ಸ್ವೀಕರಿಸಬೇಕು.
ಇದನ್ನೂ ಓದಿ-IPL 2021: ಈ ದಿನಾಂಕದಿಂದ UAEಯಲ್ಲಿ IPL ಆರಂಭ! ಫೈನಲ್ ಡೇಟ್ ಕೂಡ ಫಿಕ್ಸ್ !
IPL ಹೊಸ ತಂಡಗಳ ಬೇಸ್ ಪ್ರೈಸ್ 2000 ಕೋಟಿ
ಮಾಹಿತಿಯ ಪ್ರಕಾರ, ಮಂಡಳಿಯು ಒಂದು ತಂಡದ ಮೂಲ ಬೆಲೆಯನ್ನು ಸುಮಾರು 2 ಸಾವಿರ ಕೋಟಿ ನಿಗದಿಪಡಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಮಂಡಳಿಗೆ 2 ತಂಡಗಳಿಂದ ಸುಮಾರು 5 ಸಾವಿರ ಕೋಟಿ ಆದಾಯ ಹರಿದು ಬರಲಿದೆ. ಮುಂದಿನ ಋತುವಿನಿಂದ, 60 ಪಂದ್ಯಗಳ ಬದಲು 74 ಪಂದ್ಯಗಳನ್ನು ಆಡಲಾಗುವುದು. ಪ್ರಸಕ್ತ ಋತುವಿನ ಉಳಿದ 31 ಪಂದ್ಯಗಳು ಯುಎಇಯಲ್ಲಿ ಸೆಪ್ಟೆಂಬರ್ 19 ರಿಂದ ನಡೆಯಲಿದೆ. ಇದರ ಹರಾಜು ಪ್ರಕ್ರಿಯೆಯನ್ನು ಐಪಿಎಲ್ ಆಡಳಿತ ಮಂಡಳಿಯ ಇತ್ತೀಚಿನ ಸಭೆಯಲ್ಲಿ ಅಂತಿಮಗೊಳಿಸಲಾಗಿದೆ. ಹೆಸರಿನ ಉಲ್ಲೇಖ ಮಾಡದೆ ಇರುವ ಷರತ್ತಿನ ಮೇಲೆ PTI ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿರುವ BCCI ಮೂಲವೊಂದು ಮೊದಲು ಎರಡು ಹೊಸ ತಂಡಗಳ ಬೇಸ್ ಪ್ರೈಸ್ (IPL Team Base Price) ಅನ್ನು 1700 ಕೋಟಿ ಪ್ರತಿ ತಂಡ ನಿಗದಿಪಡಿಸಲು ಚಿಂತನೆ ನಡೆದಿದ್ದು, ಆದರೆ ಇದೀಗ ಒಂದು ತಂಡದ ಮೂಲ ಬೆಲೆಯನ್ನು 2000 ಕೋಟಿ ರೂ. ನಿಗದಿಪಡಿಸಲಾಗುವುದು ಎಂದು ಹೇಳಿದೆ.
ಇದನ್ನೂ ಓದಿ-IPL 2021- ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್, ಉಳಿದ ಐಪಿಎಲ್ ಪಂದ್ಯ ಇಂಗ್ಲೆಂಡ್‌ನಲ್ಲಿ ನಡೆಯುವ ಸಾಧ್ಯತೆ
ಮಂಡಳಿಗೆ ಸಂಬಂಧಿಸಿದ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ವಾರ್ಷಿಕ ರೂ. 3000 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟು ಹೊಂದಿರುವ ಕಂಪನಿಗಳಿಗೆ ಹೊಸ ತಂಡವನ್ನು ಖರೀದಿಸಲು ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ (IPL Bidding Process) ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ಇದು ಮಾತ್ರವಲ್ಲ, ಬಿಸಿಸಿಐ ತಂಡವನ್ನು ಖರೀದಿಸಲು ಒಂದಕ್ಕಿಂತ ಹೆಚ್ಚು ಕಂಪನಿಗಳ ಗುಂಪನ್ನು ಅನುಮೋದಿಸಲು ಮಂಡಳಿ ಚಿಂತನೆ ನಡೆಸುತ್ತಿದೆ. ಮೂರು ಕಂಪನಿಗಳು ಒಗ್ಗೂಡಿ ಒಂದು ತಂಡಕ್ಕೆ ಬಿಡ್ ಮಾಡಲು ಬಯಸಿದರೆ, ಬಿಸಿಸಿಐಗೆ ಅದರಿಂದ ಯಾವುದೇ ಸಮಸ್ಯೆ ಇರುವುದಿಲ್ಲ. ಮಂಡಳಿಯು ಈ ಮೂಲಕ ಹೆಚ್ಚಿನ ಆದಾಯವನ್ನು ಪಡೆಯಬಹುದೆಂದು ನಿರೀಕ್ಷಿಸಿದೆ.
ಇದನ್ನೂ ಓದಿ-ತಾಲಿಬಾನ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರೀದಿ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.