ಐಪಿಎಲ್ 2018 :ಬೆಂಗಳೂರು ವಿರುದ್ದ ರಾಜಸ್ಥಾನಕ್ಕೆ ಭರ್ಜರಿ ಗೆಲುವು

     

Updated: Apr 16, 2018 , 02:06 PM IST
ಐಪಿಎಲ್ 2018 :ಬೆಂಗಳೂರು ವಿರುದ್ದ ರಾಜಸ್ಥಾನಕ್ಕೆ ಭರ್ಜರಿ ಗೆಲುವು

ಬೆಂಗಳೂರು: ಮೊದಲು ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಬೆಂಗಳೂರಿಗೆ ತನ್ನ ಲೆಕ್ಕಾಚಾರವನ್ನೆಲ್ಲಾ ರಾಜಸ್ತಾನ್ ತಂಡವು ತಲೆಕೆಳಗಾಗಿ ಮಾಡಿತು.

ಸಂಜು ಸ್ಯಾಮ್ಸನ್ ರ ಭರ್ಜರಿ ಬ್ಯಾಟಿಂಗ್ ನಿಂದ ರಾಜಸ್ಥಾನವು ಉತ್ತಮ ಮೊತ್ತವನ್ನು ಪೇರಿಸಿತು. ಕೇವಲ 45 ಎಸೆತಗಳಲ್ಲಿ  2 ಬೌಂಡರಿ 10 ಸಿಕ್ಸರ್ ಗಳೊಂದಿಗೆ ಅಜೇಯ 92 ರನ್ ಗಳಿಸಿದರು.ಆ ಮೂಲಕ ರಾಜಸ್ತಾನ್ ತಂಡವು ಕೇವಲ ನಾಲ್ಕು ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿತು.ಆರಂಭದಲ್ಲಿ ಅಜಿಂಕೆ ರಹಾನೆ 36 ರನ್ ಗಳ ಮೂಲಕ ತಂಡಕ್ಕೆ ಭದ್ರಬುನಾಧಿಯನ್ನು ಹಾಕಿದರು.

ನಂತರ 217 ರನ್ ಗಳ ರಾಜಸ್ತಾನ್ ತಂಡದ ಗುರಿಯನ್ನು ಬೆನ್ನತ್ತಿದ ಬೆಂಗಳೂರು ತಂಡವು ಉತ್ತಮ ಹೋರಾಟ ನೀಡಿದರು ಸಹಿತ ಗೆಲುವಿನ ಗುರಿಯನ್ನ ತಲುಪಲು ವಿಫಲವಾಯಿತು. ವಿರಾಟ್ ಕೊಹ್ಲಿ ಯವರ 57 ಮತ್ತು  ಮನದೀಪ್ 47 ರನ್ ಗಳ ನೆರವಿನಿಂದ 20 ಓವರ್ ಗಳಲ್ಲಿ  ಆರು ವಿಕೆಟ್ ಕಳೆದುಕೊಂಡು 198 ರನ್ ಗಳಿಸಿತು.