IPL 2020: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ಗೆ 10 ರನ್ ಗಳ ಗೆಲುವು

 ಅಬುದಾಭಿ ಶೇಕ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2020 ಆವೃತ್ತಿಯ 21 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್  ತಂಡವು 10 ರನ್ ಗಳ ಗೆಲುವು ಸಾಧಿಸಿದೆ.

Last Updated : Oct 8, 2020, 12:01 AM IST
IPL 2020: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ಗೆ 10 ರನ್ ಗಳ ಗೆಲುವು  title=
Photo Courtsey : Twitter

ನವದೆಹಲಿ:  ಅಬುದಾಭಿ ಶೇಕ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2020 ರ ಆವೃತ್ತಿಯ 21ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್  ತಂಡವು 10 ರನ್ ಗಳ ಗೆಲುವು ಸಾಧಿಸಿದೆ.

IPL 2020: ಸಾಮಾಜಿಕ ಮಾಧ್ಯಮದಲ್ಲಿ ರಾಹುಲ್ ದ್ರಾವಿಡ್‌ಗೆ ಪ್ರಶಂಸೆಯ ಮಹಾಪೂರ, ಕಾರಣ...!

ಮೊದಲು ಟಾಸ್ ಗೆದ್ದ ಕೋಲ್ಕತ್ತಾ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು, ತ್ರಿಪಾಠಿ ಅವರು ಗಳಿಸಿದ 81 ರನ್ ಗಳ ನೆರವಿಂದ 20 ಓವರ್ ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 167 ರನ್ ಗಳಿಸಿತು. ಚೆನ್ನೈ ಪರವಾಗಿ ಅತ್ಯುತ್ತಮ ಬೌಲಿಂಗ್ ದಾಳಿ ಮಾಡಿದ ಬ್ರಾವೋ ಮೂರು ವಿಕೆಟ್ ಗಳನ್ನು ಕಬಳಿಸಿದರು.

168 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಚೆನ್ನೈ ತಂಡವು ಉತ್ತಮ ಆರಂಭವನ್ನೇ ಕಂಡಿತು, ಶೇನ್ ವಾಟ್ಸನ್ ಅವರ ಅರ್ಧಶತಕ (50)ಹಾಗೂ ಅಂಬಟಿ ರಾಯಡು ಅವರ( 30) ಬ್ಯಾಟಿಂಗ್ ನಿಂದಾಗಿ ಇನ್ನೇನು ಗೆಲುವಿನ ಕಡೆ ವಾಲುತ್ತದೆ ಎನ್ನುವಷ್ಟರಲ್ಲಿ ಈ ಇಬ್ಬರು ಆಟಗಾರರ ವಿಕೆಟ್ ಗಳು ಉರುಳಿದವು. ತದನಂತರ ಬಂದಂತಹ ಧೋನಿ ಹಾಗೂ ಸ್ಯಾಮ್ ಕರಣ್ ಪಂದ್ಯವನ್ನು ಗೆಲುವಿನ ದಡ ಸೇರಿಸುತ್ತಾರೆ ಎನ್ನುವಷ್ಟರಲ್ಲಿ ಅವರ ವಿಕೆಟ್ ಗಳು ಬೇಗನೆ ಪತನಗೊಂಡವು.

IPL 2020: ಐಸಿಸಿ ನಿಯಮಗಳನ್ನು ಉಲ್ಲಂಘಿಸಿದ ವಿರಾಟ್ ಕೊಹ್ಲಿ ಬಗ್ಗೆ ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯಿಸಿದ್ದು ಹೀಗೆ

ಒಂದೆಡೆ ಉತ್ತಮ ಬ್ಯಾಟಿಂಗ್ ಕ್ರಮಾಂಕವನ್ನು ಹೊಂದಿದ್ದರು ಕೂಡ ಚೆನ್ನೈ ತಂಡದ ಆಟಗಾರರು ಕೊನೆಯಲ್ಲಿ ವೇಗದ ಆಟಕ್ಕೆ ಒಗ್ಗಲಿಲ್ಲ, ಕೊನೆಗೆ ರವಿಂದ್ರ ಜಡೇಜಾ ಪ್ರಯತ್ನ ಪಟ್ಟರೂ ಸಹಿತ ಅದು ಗೆಲುವಿನ ದಡ ಮುಟ್ಟುವಲ್ಲಿ ಸಾಕಾಗಲಿಲ್ಲ. ಕೊನೆಗೆ 20 ಓವರ್ ಗಳಲ್ಲಿ ಚೆನ್ನೈ ತಂಡವು 5 ವಿಕೆಟ್ ನಷ್ಟಕ್ಕೆ 157 ರನ್ ಗಳನ್ನು ಮಾತ್ರಗಳಿಸಲು ಶಕ್ತವಾಯಿತು.

ಕೋಲ್ಕತ್ತಾ ಪರವಾಗಿ ಆಂಡ್ರ್ಯೂ ರಸೆಲ್ ಹಾಗೂ ಶಿವಂ ಮಾವಿ ಅವರನ್ನು ಹೊರತು ಪಡಿಸಿದರೆ ಉಳಿದೆಲ್ಲ ಬೌಲರ್ ಗಳು ಪ್ರತಿ ಓವರ್ ಗೆ ಸರಾಸರಿ 7 ರನ್ ಗಳಂತೆ ನೀಡುವ ಮೂಲಕ ಚೆನ್ನೈ ತಂಡದ ರನ್ ಗತಿಗೆ ಕಡಿವಾಣ ಹಾಕಿದರು.
 

Trending News