Punjab vs Hyderabad: ಸನ್ ರೈಸರ್ಸ್ ಹೈದರಾಬಾದ್ ಗೆ 9 ವಿಕೆಟ್ ಗಳ ಜಯ

 ಎಂ.ಎ.ಚಿದಂಬರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ  ಐಪಿಎಲ್  2021 ಟೂರ್ನಿಯ 14 ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಬಾದ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 9 ವಿಕೆಟ್ ಗಳ ಜಯವನ್ನು ಸಾಧಿಸಿದೆ.

Last Updated : Apr 21, 2021, 07:34 PM IST
  • ಎಂ.ಎ.ಚಿದಂಬರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2021 ಟೂರ್ನಿಯ 14 ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಬಾದ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 9 ವಿಕೆಟ್ ಗಳ ಜಯವನ್ನು ಸಾಧಿಸಿದೆ.
Punjab vs Hyderabad: ಸನ್ ರೈಸರ್ಸ್ ಹೈದರಾಬಾದ್ ಗೆ  9 ವಿಕೆಟ್ ಗಳ ಜಯ  title=
Photo Courtesy: Twitter

ನವದೆಹಲಿ:  ಎಂ.ಎ.ಚಿದಂಬರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ  ಐಪಿಎಲ್  2021 ಟೂರ್ನಿಯ 14 ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಬಾದ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 9 ವಿಕೆಟ್ ಗಳ ಜಯವನ್ನು ಸಾಧಿಸಿದೆ.

ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ದುಕೊಂಡ ಪಂಜಾಬ್ ತಂಡವು ಆರಂಭದಲ್ಲಿಯೇ ತಂಡದ ಮೊತ್ತ 15 ರನ್ ಗಳಾಗಿದ್ದಾಗಿ ನಾಯಕ ಕೆ.ಎಲ್.ರಾಹುಲ್ ಅವರ ವಿಕೆಟ್ ನ್ನು ಕಳೆದುಕೊಂಡಿತು.ಇದಾದ ನಂತರ ಚೇತರಿಸಿಕೊಳ್ಳದ ಪಂಜಾಬ್ ತಂಡವು 82 ರನ್ ಗಳಾಗುವಷ್ಟರಲ್ಲಿ 6 ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಇದನ್ನೂ ಓದಿ: Delhi vs Punjab: ದೆಹಲಿ ಕ್ಯಾಪಿಟಲ್ಸ್ ಗೆ ಗೆಲುವು ತಂದಿತ್ತ ಶಿಖರ್ ಧವನ್

ಕೊನೆಗೆ 19.4 ಓವರ್ ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 120 ರನ್ ಗಳಿಗೆ ಆಲೌಟ್ ಆಯಿತು.ಪಂಜಾಬ್ ತಂಡದ ಪರವಾಗಿ ಮಾಯಾಂಕ್ ಅಗರವಾಲ್ ಹಾಗೂ ಶಾರುಖ್ ಖಾನ್ ಗಳಿಸಿದ 22 ರನ್ ಗಳೆ ಅಧಿಕ ವೈಯಕ್ತಿಕ ಮೊತ್ತವಾಗಿತ್ತು.

ಇನ್ನೊಂದೆಡೆಗೆ ಈ ಗುರಿಯನ್ನು ಬೆನ್ನತ್ತಿದ ಹೈದರಾಬಾದ್ (Sunrisers Hyderabad) ತಂಡವು ಕೇವಲ ಒಂದು ವಿಕೆಟ್ ನಷ್ಟಕ್ಕೆ 18.4 ಓವರ್ ಗಳಲ್ಲಿ ಗೆಲುವಿನ ದಡವನ್ನು ಸೇರಿತು. ಜಾನಿ ಬೇರ್ ಸ್ಟೋ 63, ಡೇವಿಡ್ ವಾರ್ನರ್ 37 ರನ್ ಗಳಿಸಿ ತಂಡಕ್ಕೆ ನೆರವಾದರು. ಹೈದರಬಾದ್ ಪರವಾಗಿ ಖಾಲೀದ್ ಅಹಮದ್ ಮೂರು ವಿಕೆಟ್ ಗಳನ್ನು ಕಬಳಿಸಿದರು.

 ಇದನ್ನೂ ಓದಿ: IPL 2021: ದೆಹಲಿ ಕ್ಯಾಪಿಟಲ್ಸ್ ಬೌಲರ್ ಅನ್ರಿಕ್ ನಾರ್ಟ್ಜೆ ಗೆ ಕೊರೊನಾ ಧೃಢ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News