ನವದೆಹಲಿ: ಭಾನುವಾರದಂದು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ರಾಯಲ್ ಚಾಲೆಂಜರ್ಸ್ ತಂಡದ ವಿರುದ್ಧ 9 ವಿಕೆಟ್ಗಳ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಬೆಂಗಳೂರು ತಂಡವು ಆರಂಭದಲ್ಲಿಯೇ ನಾಯಕ ವಿರಾಟ್ ಕೊಹ್ಲಿ ಅವರ ವಿಕೆಟ್ ಕಳೆದುಕೊಳ್ಳುವ ಮೂಲಕ ಆಘಾತವನ್ನು ಎದುರಿಸಿತು.ಇದಾದ ನಂತರ ತಂಡವು ಸಂಕಷ್ಟದಿಂದ ಪಾರಾಗಲೇ ಇಲ್ಲ.ಬೆಂಗಳೂರು ಪರವಾಗಿ ಪಡಿಕಲ್ ಗಳಿಸಿದ 22 ರನ್ ಗಳೇ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿದೆ.
ಇದನ್ನೂ ಓದಿ: KKR vs RCB: ಆರ್‌ಸಿಬಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಸವಾಲು, ಗೆಲುವು ಯಾರಿಗೆ..?
ಕೊಲ್ಕತ್ತಾ (Kolkata Knight Riders) ತಂಡದ ಪರಾವಾಗಿ ಮಾರಕ ಬೌಲಿಂಗ್ ದಾಳಿ ನಡೆಸಿದ ವರುಣ್ ಚಕ್ರವರ್ತಿ (3-13) ಮತ್ತು ಆಂಡ್ರೆ ರಸೆಲ್ (3-9) ಅವರು ಬೆಂಗಳೂರು ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ನಾಯಕ ವಿರಾಟ್ ಕೊಹ್ಲಿ (5) ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಪ್ರಸಿದ್ ಕೃಷ್ಣ ಅವರಿಂದ ಎಲ್‌ಬಿಡಬ್ಲ್ಯೂಗೆ ವಿಕೆಟ್ ಒಪ್ಪಿಸಿದಾಗ ತಂಡದ ಬ್ಯಾಟಿಂಗ್ ಪತನ ಆರಂಭವಾಯಿತು.ಕೊನೆಗೆ 19 ಓವರ್ ಗಳಲ್ಲಿ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡು 92 ರನ್ನಗಳನ್ನು ಮಾತ್ರ ಗಳಿಸಲು ಯಶಸ್ವಿಯಾಯಿತು.
𝘼 𝘽𝙍𝙄𝙇𝙇𝙄𝘼𝙉𝙏 𝘼𝙇𝙇-𝙍𝙊𝙐𝙉𝘿 𝙋𝙀𝙍𝙁𝙊𝙍𝙈𝘼𝙉𝘾𝙀 🔥#KKRvRCB #KKR #AmiKKR #KorboLorboJeetbo #আমিKKR pic.twitter.com/Q1Udnr3Q9v
— KolkataKnightRiders (@KKRiders) September 20, 2021
ಇದನ್ನೂ ಓದಿ: IPL 2021: ಬಯೋ-ಬಬಲ್‌ನಲ್ಲಿ ಕರೋನಾ ಪ್ರವೇಶಿಸಿದ್ದು ಹೇಗೆ? ಇಲ್ಲಿಗೆ ಮಹತ್ವದ ಮಾಹಿತಿ
ಈ ಸುಲಭ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ತಂಡವು ಇನ್ನೂ ಹತ್ತು ಓವರ್ ಗಳು ಬಾಕಿ ಇರುವಂತೆಯೇ ಕೇವಲ ಒಂದು ವಿಕೆಟ್ ನಷ್ಟಕ್ಕೆ 94 ರನ್ ಗಳನ್ನು ಗಳಿಸುವ ಮೂಲಕ ಗೆಲುವಿನ ದಡ ಸೇರಿತು.ಕೊಲ್ಕತ್ತಾ ತಂಡದ ಪರವಾಗಿ ಶುಬ್ಮನ್ ಗಿಲ್ ಹಾಗೂ ವೆಂಕಟೇಶ್ ಅಯ್ಯರ್ ಕ್ರಮವಾಗಿ 48 ಹಾಗೂ 41 ರನ್ ಗಳನ್ನು ಗಳಿಸುವ ಮೂಲಕ ಗೆಲುವಿಗೆ ಕಾರಣಕರ್ತರಾದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.