RCB ಸೋಲಿನ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ಸ್ಟಾರ್‌ ಕ್ರಿಕೆಟರ್‌... 17 ವರ್ಷಗಳ ಐಪಿಎಲ್​ ಕೆರಿಯರ್‌ಗೆ ಭಾವುಕ ವಿದಾಯ

Dinesh Karthik Retirement: ಭಾರತದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಐಪಿಎಲ್ʼನಿಂದ ನಿವೃತ್ತಿ ಹೊಂದಿದ್ದಾರೆ.  

Written by - Chetana Devarmani | Last Updated : May 23, 2024, 08:42 AM IST
  • ಭಾರತದ ಸ್ಟಾರ್ ವಿಕೆಟ್ ಕೀಪರ್ ನಿವೃತ್ತಿ
  • ಸ್ಟಾರ್‌ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್
  • 17 ವರ್ಷಗಳ ಐಪಿಎಲ್​ ಕೆರಿಯರ್‌ಗೆ ಭಾವುಕ ವಿದಾಯ
RCB ಸೋಲಿನ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ಸ್ಟಾರ್‌ ಕ್ರಿಕೆಟರ್‌... 17 ವರ್ಷಗಳ ಐಪಿಎಲ್​ ಕೆರಿಯರ್‌ಗೆ ಭಾವುಕ ವಿದಾಯ  title=

Dinesh Karthik IPL Retirement: ಭಾರತದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ಅವರ ಐಪಿಎಲ್ ಕೆರಿಯರ್ ಅಂತ್ಯಗೊಂಡಿದೆ. ಕಾರ್ತಿಕ್ ತಮ್ಮ ಕೊನೆಯ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮೈದಾನಕ್ಕಿಳಿದರು. ಈ ಸೀಸನ್‌ ಆರಂಭಕ್ಕೂ ಮುನ್ನವೇ ದಿನೇಶ್ ಕಾರ್ತಿಕ್ ಇದು ಅವರ ಕೊನೆಯ ಐಪಿಎಲ್ ಎಂದು ಘೋಷಿಸಿದ್ದರು. ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧದ ಸೋಲಿನ ನಂತರ ಐಪಿಎಲ್ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.

IPL 2024 ರ ಎಲಿಮಿನೇಟರ್ ಪಂದ್ಯದಲ್ಲಿ RCB ಸೋಲಿನ ನಂತರ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ನಿವೃತ್ತಿ ಘೋಷಿಸಿದ್ದಾರೆ. ಐಪಿಎಲ್ ನಿಂದ ದಿನೇಶ್ ಕಾರ್ತಿಕ್ ನಿವೃತ್ತಿ ಘೋಷಿಸಿದ್ದಾರೆ. ಪಂದ್ಯದ ನಂತರ ಅವರು ತಮ್ಮ ಸಹ ಆಟಗಾರರಿಂದ ಗೌರವ ವಂದನೆ ಸ್ವೀಕರಿಸಿದರು.  

ಇದನ್ನೂ ಓದಿ:  ಸೋತು ಗೆದ್ದರೂ ಒಲಿಯಲಿಲ್ಲ RCB ಫೈನಲ್‌ಗೆ ಹೋಗುವ ಅದೃಷ್ಟ..! RRಗೆ ಆಲ್‌ ದಿ ಬೆಸ್ಟ್‌, ಮುಂದಿನ ಸಲ ಕಪ್‌ ನಮ್ದೆ.. 

ರಾಜಸ್ಥಾನಕ್ಕೆ ಗೆಲ್ಲುತ್ತಿದ್ದಂತೆ 38 ವರ್ಷದ ದಿನೇಶ್ ಕಾರ್ತಿಕ್ ವಿರಾಟ್ ಕೊಹ್ಲಿಯನ್ನು ತಬ್ಬಿಕೊಂಡರು. ರಾಜಸ್ಥಾನದ ವಿರುದ್ಧ 4 ವಿಕೆಟ್‌ಗಳ ಸೋಲಿನ ನಂತರ, RCB ಆಟಗಾರರು ದಿನೇಶ್ ಕಾರ್ತಿಕ್‌ಗೆ ಭಾವನಾತ್ಮಕ ವಿದಾಯ ಹೇಳಿದರು. 

 

 

ದಿನೇಶ್ ಕಾರ್ತಿಕ್ ತಮ್ಮ IPL ವೃತ್ತಿಜೀವನವನ್ನು 2008 ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ (ದೆಹಲಿ ಕ್ಯಾಪಿಟಲ್ಸ್) ನೊಂದಿಗೆ ಪ್ರಾರಂಭಿಸಿದರು. 2010 ರವರೆಗೆ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಆಡಿದರು. ಕಿಂಗ್ಸ್ XI ಪಂಜಾಬ್ (ಈಗ ಪಂಜಾಬ್ ಕಿಂಗ್ಸ್, 2011), ಮುಂಬೈ ಇಂಡಿಯನ್ಸ್ (2012-13), ದೆಹಲಿ (2014), ರಾಯಲ್ ಚಾಲೆಂಜರ್ಸ್ ಬೆಂಗಳೂರು (2015), ಗುಜರಾತ್ ಲಯನ್ಸ್ (2016-17), ಕೋಲ್ಕತ್ತಾ ನೈಟ್ ರೈಡರ್ಸ್ (2018-21) ತಂಡಗಳಲ್ಲಿ ಆಡಿದ್ದಾರೆ. 2022 ರಲ್ಲಿ ಮತ್ತೆ RCB ಮರಳಿದ್ದರು.

ದಿನೇಶ್ ಕಾರ್ತಿಕ್ ಮುಂಬೈ ಇಂಡಿಯನ್ಸ್‌ ತಂಡದಲ್ಲಿದ್ದಾಗ 2013 ರಲ್ಲಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದರು. ದಿನೇಶ್ ಕಾರ್ತಿಕ್ ನಾಯಕತ್ವದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಆಫ್‌ ಪ್ರವೇಶಿಸಿತ್ತು. ದಿನೇಶ್ ಕಾರ್ತಿಕ್ 257 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 135.36 ಸ್ಟ್ರೈಕ್ ರೇಟ್‌ನಲ್ಲಿ 4842 ರನ್ ಸಿಡಿಸಿದ್ದಾರೆ. 

ಇದನ್ನೂ ಓದಿ:  ದಿನೇಶ್ ಕಾರ್ತಿಕ್ ಔಟ್ ನೀಡಿಲ್ಲವೆಂದು ಮೈದಾನದಲ್ಲೇ ಥರ್ಡ್ ಅಂಪೈರ್ ವಿರುದ್ಧ ಕಿಡಿಕಾರಿದ ಕುಮಾರ್ ಸಂಗಕ್ಕಾರ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News