ಈ ಆಟಗಾರನನ್ನು ತಂಡದ ನಾಯಕನನ್ನಾಗಿ ನೇಮಕ ಮಾಡಲು ಮುಂದಾದ ಆರ್ಸಿಬಿ

2022 ರ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಕೆಲವೇ ವಾರಗಳು ಬಾಕಿಯಿರುವಾಗ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಇನ್ನೂ ಕೂಡ ತಂಡದ ನಾಯಕನನ್ನು ಘೋಷಿಸಿಲ್ಲ, ಆದರೆ ಈಗ ಮೂಲಗಳ ಪ್ರಕಾರ ಫಾಫ್ ಡು ಪ್ಲೆಸಿಸ್ ತಂಡವನ್ನು ಮುನ್ನಡೆಸಲು ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ.

Written by - Zee Kannada News Desk | Last Updated : Mar 1, 2022, 09:41 PM IST
  • 2022 ರ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಕೆಲವೇ ವಾರಗಳು ಬಾಕಿಯಿರುವಾಗ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಇನ್ನೂ ಕೂಡ ತಂಡದ ನಾಯಕನನ್ನು ಘೋಷಿಸಿಲ್ಲ,
  • ಆದರೆ ಈಗ ಮೂಲಗಳ ಪ್ರಕಾರ ಫಾಫ್ ಡು ಪ್ಲೆಸಿಸ್ ತಂಡವನ್ನು ಮುನ್ನಡೆಸಲು ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ.
 ಈ ಆಟಗಾರನನ್ನು ತಂಡದ ನಾಯಕನನ್ನಾಗಿ ನೇಮಕ ಮಾಡಲು ಮುಂದಾದ ಆರ್ಸಿಬಿ  title=

ನವದೆಹಲಿ: 2022 ರ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಕೆಲವೇ ವಾರಗಳು ಬಾಕಿಯಿರುವಾಗ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಇನ್ನೂ ಕೂಡ ತಂಡದ ನಾಯಕನನ್ನು ಘೋಷಿಸಿಲ್ಲ, ಆದರೆ ಈಗ ಮೂಲಗಳ ಪ್ರಕಾರ ಫಾಫ್ ಡು ಪ್ಲೆಸಿಸ್ ತಂಡವನ್ನು ಮುನ್ನಡೆಸಲು ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:IPL 2022: ಕನ್ನಡಿಗನಿಗೆ ಒಲಿದ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವ ಸ್ಥಾನ! 

ಐಪಿಎಲ್ 2022 ಹರಾಜಿನಲ್ಲಿ ಆರ್‌ಸಿಬಿಯಿಂದ 7 ಕೋಟಿ ರೂ.ಗೆ ಖರೀದಿಸಿದ ಡು ಪ್ಲೆಸಿಸ್, 2012 ರಲ್ಲಿ ಸಿಎಸ್‌ಕೆಗೆ ಸೇರಿದಾಗಿನಿಂದ ಸಿಎಸ್‌ಕೆಯ ಅವಿಭಾಜ್ಯ ಅಂಗವಾಗಿದ್ದರು ಮತ್ತು 'ಯೆಲ್ಲೋ ಬ್ರಿಗೇಡ್'ನೊಂದಿಗೆ ಅವರು ಎರಡು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ 93 ಇನ್ನಿಂಗ್ಸ್‌ಗಳಿಂದ 132 ಸ್ಟ್ರೈಕ್ ರೇಟ್‌ನಲ್ಲಿ 2932 ರನ್ ಗಳಿಸಿದ್ದಾರೆ.

ಫಾಫ್ ಅವರು 2020 ರವರೆಗೆ ಎಲ್ಲಾ ಸ್ವರೂಪಗಳಲ್ಲಿ 112 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾವನ್ನು ಮುನ್ನಡೆಸಿದ್ದಾರೆ ಮತ್ತು ಅವರ ನಾಯಕತ್ವದ ಅನುಭವವನ್ನು ಪರಿಗಣಿಸಿ ನಾಯಕತ್ವಕ್ಕೆ ಮಣೆ ಹಾಕಬಹುದು ಎನ್ನಲಾಗಿದೆ.

ಇದನ್ನೂ ಓದಿ: Women's ODI Rankings: ಎರಡನೇ ಸ್ಥಾನ ಉಳಿಸಿಕೊಂಡ ಮಿಥಾಲಿ ರಾಜ್, 20 ನೇ ಸ್ಥಾನದಲ್ಲಿ ಹರ್ಮನ್ಪ್ರೀತ್ ಕೌರ್

ಕೊಹ್ಲಿ (Virat Kohli) ಅವರು ನಾಯಕತ್ವವನ್ನು ತೊರೆದ ನಂತರ ಆರ್ಸಿಬಿಯ ನಾಯಕತ್ವವನ್ನು ಯಾರು ವಹಿಸಿಕೊಳ್ಳುತ್ತಾರೆ ಎನ್ನುವ ವಿಚಾರವಾಗಿ ಚರ್ಚೆ ನಡೆಯುತ್ತಿದೆ.ಆದರೆ ಯಾವಾಗ ಆಟಗಾರರ ಹರಾಜು ಪ್ರಕ್ರಿಯೆ ಮುಗಿಯಿತೋ ಅಂದಿನಿಂದಲೂ ಫಾಫ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ದಿನೇಶ್ ಕಾರ್ತಿಕ್ ಅವರ ಹೆಸರುಗಳು ಕೇಳಿ ಬರುತ್ತಿವೆ.ಆದಾಗ್ಯೂ, ವೈಯಕ್ತಿಕ ಬದ್ಧತೆಗಳಿಂದಾಗಿ ಈ ಋತುವಿನಲ್ಲಿ ಮ್ಯಾಕ್ಸ್‌ವೆಲ್ ಲಭ್ಯತೆ ಅನುಮಾನದಲ್ಲಿದೆ.ಆದ್ದರಿಂದ ಫ್ರಾಂಚೈಸಿ ಫಾಫ್ ಅಥವಾ ಕಾರ್ತಿಕ್‌ಗೆ ಮಣೆ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಾರ್ತಿಕ್ 2015 ರಲ್ಲಿ ಆರ್ಸಿಬಿ ತಂಡದ ಪರವಾಗಿ ಆಡಿದ್ದಾರೆ ಮತ್ತು ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಅನ್ನು ಮುನ್ನಡೆಸಿದ್ದಾರೆ.ಆದರೆ, ಫಾಫ್ ದಕ್ಷಿಣ ಆಫ್ರಿಕಾವನ್ನು ಮುನ್ನಡೆಸಿದ ಅದ್ಭುತ ಅನುಭವವನ್ನು ಹೊಂದಿದ್ದಾರೆ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನೊಂದಿಗೆ ಅವರ ಹಿಂದಿನ ಬ್ಯಾಟಿಂಗ್ ದಾಖಲೆಯೂ ಅದ್ಭುತವಾಗಿದೆ.

ಇದನ್ನೂ ಓದಿ: ದೀಪಾ ಕರ್ಮಾಕರ್ ನ್ನು ಅಮಾನತುಗೊಳಿಸಿದ ಅಂತರಾಷ್ಟ್ರೀಯ ಜಿಮ್ನಾಸ್ಟಿಕ್ ಸಂಸ್ಥೆ

'ನಾವು ಶೀಘ್ರದಲ್ಲೇ ಆ ಹೆಸರನ್ನು ನಿಜವಾಗಿ ಪ್ರಕಟಿಸುತ್ತೇವೆ.ನಮ್ಮೊಂದಿಗೆ ಉತ್ತಮ ಆಯ್ಕೆಗಳಿರುವುದರಿಂದ ಚರ್ಚೆಗಳು ನಡೆಯುತ್ತಿವೆ" ಎಂದು ಮೂಲಗಳು ತಿಳಿಸಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News