KKR vs RCB: IPL 2024 ರ 10 ನೇ ಪಂದ್ಯದಲ್ಲಿ ಇಂದು (ಮಾರ್ಚ್ 29) ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿವೆ. ಆರ್ಸಿಬಿ ತಂಡ ಈ ಪಂದ್ಯವನ್ನು ತನ್ನ ತವರು ಮೈದಾನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದೆ. ಕೋಲ್ಕತ್ತಾ ತಂಡದ (sunil narine current teams) ಸ್ಟಾರ್ ಬೌಲರ್ ಸುನಿಲ್ ನರೈನ್ ಈ ಪಂದ್ಯದಲ್ಲಿ ಆಡಿದ ಕೂಡಲೇ ತಮ್ಮ ಹೆಸರಿನಲ್ಲಿ ಐತಿಹಾಸಿಕ ಸಾಧನೆ ಸೇರ್ಪಡೆಯಾಗಿದೆ. ಟಿ20 ಮಾದರಿಯಲ್ಲಿ 500 ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಿದ ವಿಶ್ವದ ನಾಲ್ಕನೇ ಕ್ರಿಕೆಟಿಗ ಎಂಬ ಖ್ಯಾತಿಗೆ ಅವರು ಭಾಜನರಾಗಿದ್ದಾರೆ.
ಸುನಿಲ್ ನರೈನ್ ಗೆ ಈ ಪಂದ್ಯ ವಿಶೇಷವಾಗಿದೆ
ಕೋಲ್ಕತ್ತಾ ಮತ್ತು ಬೆಂಗಳೂರು ನಡುವಿನ ಐಪಿಎಲ್ ಪಂದ್ಯವು ಸ್ಪಿನ್ನರ್ ಸುನಿಲ್ ನರೈನ್ ಅವರಿಗೆ ತುಂಬಾ ವಿಶೇಷವಾಗಿದೆ, ಏಕೆಂದರೆ ಇದು ಟಿ 20 ಸ್ವರೂಪದಲ್ಲಿ ಅವರ 500 ನೇ ಪಂದ್ಯವಾಗಿದೆ. ಅವರು ಇದುವರೆಗೆ 499 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳಲ್ಲಿ ಅವರ ಹೆಸರಿನಲ್ಲಿ 536 ವಿಕೆಟ್ಗಳಿವೆ. 500 ಅಥವಾ ಅದಕ್ಕಿಂತ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ ಆಟಗಾರರ ಪಟ್ಟಿಯಲ್ಲಿ ಸುನಿಲ್ ನರೈನ್ ನಾಲ್ಕನೇ ಆಟಗಾರರಾಗಿದ್ದಾರೆ. ಇದಕ್ಕೂ ಮುನ್ನ ಕೀರಾನ್ ಪೊಲಾರ್ಡ್, ಡ್ವೇನ್ ಬ್ರಾವೋ ಮತ್ತು ಶೋಯೆಬ್ ಮಲಿಕ್ ಈ ಸಾಧನೆ ಮಾಡಿದ್ದಾರೆ. ಪೊಲಾರ್ಡ್ ಕ್ರಿಕೆಟ್ನ ಈ ಶಾರ್ಟ್ ಫಾರ್ಮ್ ಆವ್ರ್ತ್ತಿಯಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರಾಗಿದ್ದಾರೆ. ಅವರ ಹೆಸರಿಗೆ 660 ಪಂದ್ಯಗಳಿವೆ.
ಇದು ನರೈನ್ ಟಿ20 ವೃತ್ತಿಜೀವನ
2011 ರಲ್ಲಿ ಪಾದಾರ್ಪಣೆ ಮಾಡಿದ ನಂತರ, ನರೈನ್ (sunil narine dates joine) T20 ಸ್ವರೂಪದಲ್ಲಿ ಚೆಂಡು ಮತ್ತು ಬ್ಯಾಟ್ ಎರಡರಲ್ಲೂ ಅನೇಕ ದೊಡ್ಡ ಸಾಧನೆಗಳನ್ನು ಮಾಡಿದ್ದಾರೆ. ಇದುವರೆಗೆ ಅವರು ಈ ಮಾದರಿಯಲ್ಲಿ ಒಟ್ಟು 536 ವಿಕೆಟ್ಗಳನ್ನು ಪಡೆದಿದ್ದಾರೆ (sunil narine wickets) ಮತ್ತು ಈ ವಿಷಯದಲ್ಲಿ ಡ್ವೇನ್ ಬ್ರಾವೊ (625) ಮತ್ತು ರಶೀದ್ ಖಾನ್ (566) ಮಾತ್ರ ಹಿಂದೆ ಇದ್ದಾರೆ. ನರೈನ್ ಅವರ ಎಕಾನಮಿ ರೇಟ್ 6.10 ಆಗಿದೆ, ಇದು ಅವರ T20 ವೃತ್ತಿಜೀವನದಲ್ಲಿ 2000 ಕ್ಕೂ ಹೆಚ್ಚು ಎಸೆತಗಳನ್ನು ಬೌಲ್ ಮಾಡಿದ ಆಟಗಾರರಲ್ಲಿ ಎರಡನೇ ಅತ್ಯುತ್ತಮ ಆಗಗಾರರಾಗಿದ್ದಾರೆ. ಸ್ಯಾಮ್ಯುಯೆಲ್ ಬದ್ರಿ ಅವರ 197 ಪಂದ್ಯಗಳ ವೃತ್ತಿಜೀವನದಲ್ಲಿ 6.08 ರ ಅತ್ಯುತ್ತಮ ಏಕಾನಾಮಿ ರೇಟ್ ಹೊಂದಿದ್ದಾರೆ. ಆಫ್-ಸ್ಪಿನ್ನರ್ ನರೈನ್ ಅವರು ತಮ್ಮ ವೃತ್ತಿಜೀವನದಲ್ಲಿ 30 ಮೇಡನ್ ಓವರ್ಗಳನ್ನು ಬೌಲ್ ಮಾಡಿದ್ದಾರೆ, ಇದು ಪುರುಷರ T20 ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠವಾಗಿದೆ.
ಇದನ್ನೂ ಓದಿ-IPL 2024: ಅಸಲಿ ಪಂದ್ಯ RCB vs KKR ಮಧ್ಯೆ ಅಲ್ಲ, ಈ ಇಬ್ಬರ ನಡುವೆ ಎಂದು Dinesh Kathik ಹೇಳಿದ್ಯಾಕೆ?
ಟಿ20ಯಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರು
ಕೀರಾನ್ ಪೊಲಾರ್ಡ್ - 660 ಪಂದ್ಯಗಳು
ಡ್ವೇನ್ ಬ್ರಾವೋ - 573 ಪಂದ್ಯಗಳು
ಶೋಯೆಬ್ ಮಲಿಕ್ - 542 ರನ್
ಸುನಿಲ್ ನರೈನ್ - 500 ಪಂದ್ಯಗಳು
ಆಂಡ್ರೆ ರಸೆಲ್ - 483 ಪಂದ್ಯಗಳು
ಬ್ಯಾಟ್ನಿಂದಲೂ ಅದ್ಭುತ ಸಾಧನೆ ಮಾಡಿದ್ದಾರೆ (sunil narine highest score in ipl)
ನರೈನ್ ಬ್ಯಾಟ್ ಬೀಸುವ ಸಾಮರ್ಥ್ಯ ಕೂಡ ಹೊಂದಿದ್ದಾರೆ. ಸುನಿಲ್ ನರೈನ್ T20 ನಲ್ಲಿ ಪವರ್ಪ್ಲೇನಲ್ಲಿ 155.05 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಮಾಡುತ್ತಾರೆ. ಪುರುಷರ T20 ಕ್ರಿಕೆಟ್ನಲ್ಲಿ ಮೊದಲ ಆರು ಓವರ್ಗಳಲ್ಲಿ 1000 ಕ್ಕೂ ಹೆಚ್ಚು ಎಸೆತಗಳನ್ನು ಎದುರಿಸಿದ ಬ್ಯಾಟ್ಸ್ಮನ್ಗಳಲ್ಲಿ ಇದು ನಾಲ್ಕನೇ ಅತ್ಯುತ್ತಮ ಸ್ಟ್ರೈಕ್ ರೇಟ್ ಆಗಿದೆ. 35 ವರ್ಷದ ಆಟಗಾರ ಟಿ20 ವಿಶ್ವಕಪ್ ಸೇರಿದಂತೆ ಟಿ20 ಕ್ರಿಕೆಟ್ನಲ್ಲಿ ಇದುವರೆಗೆ 10 ಪ್ರಶಸ್ತಿಗಳನ್ನು ಗೆದ್ದಿದ್ದಾರೆ, ಅವರ ಮುಂದೆ ಬ್ರಾವೊ (17), ಪೊಲಾರ್ಡ್ (16) ಮತ್ತು ಮಲಿಕ್ (15) ಮಾತ್ರ ಇದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ