Indian Premier League 2024 RCB vs KKR: ಇಂದು ಮಾರ್ಚ್ 29 ರಂದು ಆರಂಭಗೊಳ್ಳಲಿರುವ ಐಪಿಎಲ್ 2024 ರ 10 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಲಿದೆ. ಎರಡೂ ತಂಡಗಳು ಪ್ರಸ್ತುತ ಈ ಬಹುನಿರೀಕ್ಷಿತ RCB v KKR ಪಂದ್ಯಕ್ಕೆ ತಮ್ಮ ಸಿದ್ಧತೆಗಳಿಗೆ ಅಂತಿಮ ಸ್ಪರ್ಶ ನೀಡುತ್ತಿವೆ.
RCB ಮತ್ತು KKR ನಡುವೆ ನಡೆಯಲಿರುವ IPL 2024 ರ ಬಹು ನಿರೀಕ್ಷಿತ ಪಂದ್ಯದಲ್ಲಿ, ಕ್ರಿಕೆಟ್ ಜಗತ್ತಿನ ಕೆಲವು ದೊಡ್ಡ ತಾರೆಗಳ ನಡುವೆ ಪೈಪೋಟಿ ನಡೆಯಲಿದೆ. ಮಿಚೆಲ್ ಸ್ಟಾರ್ಕ್, ಸುನಿಲ್ ನರೈನ್ ಮತ್ತು ಆಂಡ್ರೆ ರಸೆಲ್ ಅವರಂತಹ ಆಟಗಾರರು ಕೆಕೆಆರ್ ತಂಡವನ್ನು ಮುನಡೆಸುತ್ತಿದ್ದರೆ, ಆರ್‌ಸಿಬಿಯ ಜವಾಬ್ದಾರಿ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಹೆಗಲ ಮೇಲಿರಲಿದೆ.
ನಿಜವಾದ ಸ್ಪರ್ಧೆ ಗೌತಮ್ ಗಂಭೀರ್ vs ವಿರಾಟ್ ಕೊಹ್ಲಿ ನಡುವೆ ಎಂದ ದಿನೇಶ್ ಕಾರ್ತಿಕ್: ಏತನ್ಮಧ್ಯೆ, RCB ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್, ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ನಡುವಿನ ನೈಜ ಪಂದ್ಯ ಇದಾಗಿರುವ ಸಾಧ್ಯತೆ ಇದೆ ಎಂದು ತಮಾಷೆಯಾಗಿ ಹೇಳಿದ್ದಾರೆ. ಕಾರ್ತಿಕ್ ಅವರ ಈ ತಮಾಷೆಯ ಕಾಮೆಂಟ್ ಐಪಿಎಲ್ 2023 ರ ಸಂದರ್ಭದಲ್ಲಿ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ನಡುವಿನ ವಿವಾದಕ್ಕೆ ಮತ್ತೊಮ್ಮೆ ಕಿಡಿ ಹೊತ್ತಿಸುವುದಂತೂ ನಿಜ.
ಕಳೆದ ಋತುವಿನಲ್ಲಿ, ಮಾಜಿ ಭಾರತೀಯ ಓಪನರ್ ಲಖನೌ ಸೂಪರ್ ಜೈಂಟ್ಸ್ (LSG) ಗೆ ಮಾರ್ಗದರ್ಶಕರಾಗಿದ್ದಾಗ, ಕೊಹ್ಲಿ, ನವೀನ್ ಉಲ್ ಹಕ್ ಮತ್ತು ಗಂಭೀರ್ ನಡುವೆ ತೀವ್ರ ವಾಗ್ವಾದ ನಡೆದಿತ್ತು, ಇದು ಹಲವಾರು ತಿಂಗಳುಗಳ ಕಾಲ ಚರ್ಚೆಯಲ್ಲಿತ್ತು. ಇದೀಗ ಆರ್‌ಸಿಬಿ ವಿರುದ್ಧ ಕೆಕೆಆರ್ ಪಂದ್ಯಕ್ಕೂ ಮುನ್ನ ಅದು ಮತ್ತೆ ಮರುಕಳಿಸಲಿದೆ.
ಆರ್‌ಸಿಬಿಯ ಪಂದ್ಯದ ಮುನ್ನೋಟದಲ್ಲಿ ಮಾತನಾಡಿದ ದಿನೇಶ್ ಕಾರ್ತಿಕ್ “ವಿರಾಟ್ ಕೊಹ್ಲಿ ವಿರುದ್ಧ ಗೌತಮ್ ಗಂಭೀರ್ (ನಗುತ್ತಾ). ಮಿಚೆಲ್ ಸ್ಟಾರ್ಕ್ ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ ನಡುವಿನ ಪಂದ್ಯವೂ ಕುತೂಹಲ ಮೂಡಿಸಲಿದೆ. ನನ್ನ ಮತ್ತು ವರುಣ್ ಚಕ್ರವರ್ತಿ ನಡುವಿನ ಪಂದ್ಯವು ತುಂಬಾ ಆಸಕ್ತಿದಾಯಕವಾಗಿರುತ್ತದೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ-IPL 2024: Mumbai Indians ನಾಯಕತ್ವ ವಿವಾದ, Hardik Pandya ಮೇಲೆ ಚಪ್ಪಲಿ-ಬಕೆಟ್ ಎಸೆದ ಕ್ರಿಕೆಟ್ ಅಭಿಮಾನಿಗಳು!
RCB ಹಂಚಿಕೊಂಡಿರುವ ವಿಡಿಯೋವನ್ನು ಇಲ್ಲಿ ನೋಡಿ
It’s a blockbuster Friday night! 🤩 Get ready for #RCBvKKR at Namma Chinnaswamy stadium. 🏟️ DK, Siraj, Mayank and Coach Griff preview the game, on @bigbasket_com presents Game Day! 📹
Download the Big Basket App now. 📱#PlayBold #ನಮ್ಮRCB #IPL2024 #RCBvKKR pic.twitter.com/sFKkUc8UMq
— Royal Challengers Bengaluru (@RCBTweets) March 29, 2024
KKR ಹೈದರಾಬಾದ್ ವಿರುದ್ಧದ ಮೊದಲ ಗೆಲುವಿನ ನಂತರ ನಡೆಯುತ್ತಿರುವ IPL 2024 ನಲ್ಲಿ ತಮ್ಮ ಗೆಲುವಿನ ಆಟ ಮುಂದುವರಿಸಲು ಬಯಸುತ್ತದೆ, ಆದರೆ RCB ಕೂಡ ಪಂಜಾಬ್ ಕಿಂಗ್ಸ್ (PBKS) ವಿರುದ್ಧ 4 ವಿಕೆಟ್ ಜಯದೊಂದಿಗೆ ಪಂದ್ಯಕ್ಕೆ ಮಾರಲಿದೆ, ಹೀಗಾಗಿ ಎರಡೂ ತಂಡಗಳು ಇಂದು ಬೆಂಗಳೂರಿನಲ್ಲಿ ಗೆಲುವಿನ ನಿರೀಕ್ಷೆಯಲ್ಲಿವೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ