Indian Premier League 2024: RR vs RCB: ಪ್ರಸ್ತುತ ವಿಜಯ ರಥವನ್ನೇರಿರುವ ರಾಜಸ್ಥಾನ್ ರಾಯಲ್ಸ್(Rajasthan Royals) ತಂಡ ಒಂದರ ಮೇಲೊಂದರಂತೆ ಸತತ ಗೆಲುವಿನ ಮೂಲಕ ತನ್ನ ಅಭಿಮಾನಿಗಳಿಗೆ ಸಾಕಷ್ಟು ಖುಷಿಗಳನ್ನು ನೀಡುತ್ತಿದೆ. ಏತನ್ಮಧ್ಯೆ ತಂಡದ ಓರ್ವ ಮಹಿಳಾ ಅಭಿಮಾನಿಯ ವಿಡಿಯೋ ಭಾರಿ ವೈರಲ್ ಆಗುತ್ತಿದ್ದು, ಅದನ್ನು ಕಂಡು ಉಳಿದ ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ. ವಿಡಿಯೋ ನೋಡಿ ನಿಮಗೂ ಏನೂ ಅರ್ಥವಾಗುವುದಿಲ್ಲ. (IPL 2024 News In Kannada)
ಯಾವ ಯಾವ ತಂಡಗಳನ್ನು ಸೋಲಿಸಿದೆ RR ತಂಡ?
ಸಂಜು ಸ್ಯಾಮ್ಸನ್ (Sanju Samson) ನೇತೃತ್ವದ RR ತಂಡವು ಪ್ರಸ್ತುತ 4 ಗೆಲುವುಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು ಈ ತಂಡ ಒಂದೇ ಒಂದು ಪಂದ್ಯದಲ್ಲಿ ಸೋತಿಲ್ಲ. ಐಪಿಎಲ್ 2024 ರ ಮೊದಲ ಪಂದ್ಯದಲ್ಲಿ ರಾಜಸ್ಥಾನ ತಂಡವು ಎಲ್ಎಸ್ಜಿ (LSG)ತಂಡವನ್ನು ಸೋಲಿಸಿ, ನಂತರ ದೆಹಲಿ ತಂಡವನ್ನು (Delhi Capitals) ಸೋಲಿಸಿದೆ. ಇದಾದ ಬಳಿಕ ಮುಂಬೈ ತಂಡವನ್ನು (Mumbai Indians) ಅದರ ತವರು ನೆಲದಲ್ಲಿಯೇ ಸೋಲಿಸಿದೆ. ನಿನ್ನೆ ಆರ್ಸಿಬಿಯನ್ನು (Royal Challengers Bengaluru) ಸೋಲಿಸಿರುವ ರಾಜಸ್ಥಾನ್ ರಾಯಲ್ಸ್ ತಂಡ 8 ಅಂಕ ಗಳಿಸಿದೆ. ಇಂದು ಐಪಿಎಲ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ತಂಡ ಮುಂಬೈ ತಂಡವನ್ನು ಎದುರಿಸಲಿದ್ದು, ಎರಡನೇ ಪಂದ್ಯದಲ್ಲಿ ಎಲ್ಎಸ್ಜಿ ತಂಡ ಗುಜರಾತ್ ವಿರುದ್ಧ ಸೆಣಸಲಿದೆ.
ಕ್ಯಾಮೆರಾ ಕಣ್ಣೆದುರಲ್ಲೇ RR ತಂಡಕ್ಕೆ ಧೋಕಾ ಕೊಟ್ಟ ಮಹಿಳಾ ಅಭಿಮಾನಿ
ಪ್ರಸ್ತುತ RR vs RCB ಪಂದ್ಯದ ವಿಡಿಯೋ ಸಾಕಷ್ಟು ವೈರಲ್ (IPL 2024 Viral Video) ಆಗುತ್ತಿದೆ. ಜೈಪುರದಲ್ಲಿ ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಆಗಮಿಸಿದ ಓರ್ವ ಮಹಿಳಾ ಅಭಿಮಾನಿಯ ವಿಡಿಯೋ ಇದಾಗಿದ್ದು, ವಿರಾಟ್ (Virat Kohli) ಬ್ಯಾಟಿಂಗ್ ನೋಡಿದ ಮಹಿಳೆ ಆರ್ ಆರ್ ಜೆರ್ಸಿ ಧರಿಸಿ, ಪಾರ್ಟಿ ಬದಲಾಯಿಸಿದ್ದಾರೆ. ಇದಾದ ನಂತರ ಈ ಅಭಿಮಾನಿ RR ಜೆರ್ಸಿಯ ಮೇಲೆ RCB ಜರ್ಸಿಯನ್ನು ಧರಿಸಿದ್ದರು.
RR ತಂಡದ ಅಭಿಮಾನಿಯ ವಿಡಿಯೋ ಇಲ್ಲಿದೆ
Na Dare, Na Gym kare. kapde change karade jab Mann kare pic.twitter.com/w1Y21EjcIb
— Abhay (@abhayysrivastav) April 6, 2024
ಗೆಲುವಿನ ನಂತರದ ಅದ್ಭುತ ಚಿತ್ರಣ
ನಿನ್ನೆ ನಡೆದ ಪಂದ್ಯದ ಫಲಿತಾಂಶ ಹೇಗಿತ್ತು?
ನಿನ್ನೆಯ ಪಂದ್ಯದಲ್ಲಿ ಆರ್ಸಿಬಿ ತಂಡವು ಆರ್ಆರ್ ತಂಡದ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದೆ, ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿ ಅಜೇಯರಾಗಿ ಪೆವಲಿಯನ್ ಗೆ ಮರಳಿದ್ದಾರೆ ಮತ್ತು ಫಾಫ್ ದುಪ್ಳೆಸಿ ತಂಡವು ಸ್ಕೋರ್ ಬೋರ್ಡ್ನಲ್ಲಿ 3 ವಿಕೆಟ್ ನಷ್ಟಕ್ಕೆ 183 ರನ್ ದಾಖಲಿಸಿದೆ. ನಂತರ ಬ್ಯಾಟ್ ಮಾಡಿದ ರಾಜಸ್ಥಾನ ತಂಡ 184 ರನ್ಗಳ ಗುರಿಯನ್ನು ಸುಲಭವಾಗಿ ಸಾಧಿಸಿದೆ, ಬ್ಯಾಟಿಂಗ್ನಲ್ಲಿ ಜೋಸ್ ಬಟ್ಲರ್ (Josh Buttler) ಅಜೇಯ 100 ರನ್ ಗಳಿಸಿದ್ದಾರೆ ಮತ್ತು ನಾಯಕ ಸಂಜು 69 ರನ್ಗಳ ಇನಿಂಗ್ಸ್ ಆಡಿದ್ದಾರೆ. ಇದಾದ ಬಳಿಕ ಆರ್ಆರ್ ತಂಡ 6 ವಿಕೆಟ್ಗಳಿಂದ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಇದನ್ನೂ ನೋಡಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ