ಜೈಪುರ್: ಇಲ್ಲಿನ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2024 ಟೂರ್ನಿಯಲ್ಲಿ ರಾಜಸ್ತಾನ್ ರಾಯಲ್ಸ್ ತಂಡವು ಆರ್ಸಿಬಿ ವಿರುದ್ಧ ಆರು ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿದೆ.ಟಾಸ್ ಗೆದ್ದ ರಾಜಸ್ತಾನ್ ರಾಯಲ್ಸ್ ತಂಡವು ಮೊದಲು ಆರ್ಸಿಬಿಗೆ ಬ್ಯಾಟಿಂಗ್ ಮಾಡುವ ಅವಕಾಶ ನೀಡಿತು.ಈ ಅವಕಾಶವನ್ನು ಪಡೆದ ಬೆಂಗಳೂರು ಪಡೆ 20 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 183 ರನ್ ಗಳನ್ನು ಗಳಿಸಿತು.
ಬೆಂಗಳೂರು ತಂಡದ ಪರವಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಕೇವಲ 72 ಎಸೆತಗಳಲಿ 12 ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಗಳ ನೆರವಿನಿಂದಾಗಿ 113 ರನ್ ಗಳನ್ನು ಗಳಿಸಿದರು.ಇನ್ನೊಂದೆಡೆಗೆ ತಂಡದ ನಾಯಕ ದುಪ್ಲೆಸಿಸ್ 33 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಎರಡು ಸಿಕ್ಸರ್ ಗಳ ನೆರವಿನಿಂದ 44 ರನ್ ಗಳಿಸಿದರು.ರಾಜಸ್ತಾನ ರಾಯಲ್ಸ್ ಪರವಾಗಿ ಚಹಾಲ್ ಎರಡು ವಿಕೆಟ್ ಗಳನ್ನು ಕಬಳಿಸುವ ಮೂಲಕ ಗಮನ ಸೆಳೆದರು.
💯🩷
Scorecard ▶️ https://t.co/IqTifedScU#TATAIPL | #RRvRCB pic.twitter.com/q9M6ft9By8
— IndianPremierLeague (@IPL) April 6, 2024
ಆರ್ಸಿಬಿ ತಂಡವು ನೀಡಿದ 184 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ರಾಜಸ್ತಾನ್ ರಾಯಲ್ಸ್ ತಂಡವು ಕೇವಲ 19.1 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 189 ರನ್ ಗಳಿಸುವ ಮೂಲಕ ಗೆಲುವಿನ ದಡ ಸೇರಿತು.
For the second time this season, the run machine remains unbeaten, and true to his name 🙌#PlayBold #ನಮ್ಮRCB #IPL2024 #RRvRCB @imVkohli pic.twitter.com/gQaOnlcttc
— Royal Challengers Bengaluru (@RCBTweets) April 6, 2024
ರಾಜಸ್ತಾನ್ ರಾಯಲ್ಸ್ ಪರವಾಗಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಜೋಸ್ ಬಟ್ಲರ್ 58 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಹಾಗೂ ಒಂಬತ್ತು ಬೌಂಡರಿಗಳ ನೆರವಿನಿಂದ 100 ರನ್ ಗಳಿಸಿದರು.ಇನ್ನೊಂದೆಡೆಗೆ ಇವರಿಗೆ ಸಾಥ್ ನೀಡಿದ ತಂಡದ ನಾಯಕ ಸಂಜು ಸ್ಯಾಮ್ಸನ್ 42 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಎರಡು ಸಿಕ್ಸರ್ ಗಳ ನೆರವಿನಿಂದ 69 ರನ್ ಗಳಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ