IPL 2024 ಫೈನಲ್‌ನಲ್ಲಿ ಸನ್‌ರೈಸರ್ಸ್ ಸೋಲು.. ಕಣ್ಣೀರಿಟ್ಟ ಕಾವ್ಯ ಮಾರನ್.. ವಿಡಿಯೋ ವೈರಲ್!

IPL 2024 Kavya Maran : ಐಪಿಎಲ್ 2024 ರ ಅಂತಿಮ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ಕೈಯಲ್ಲಿ ಹೀನಾಯ ಸೋಲನುಭವಿಸಿತು. ತಮ್ಮ ತಂಡದ ಸೋಲಿನ ನಂತರ ಕಾವ್ಯಾ ಮಾರನ್ ಮೈದಾನದಲ್ಲೇ ಕಣ್ಣೀರಿಟ್ಟಿದ್ದಾರೆ.. ಸದ್ಯ ಆ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ..   

Written by - Savita M B | Last Updated : May 27, 2024, 09:56 AM IST
  • ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ 2024 ಸೀಸನ್ ಟ್ರೋಫಿಯನ್ನು ಗೆದ್ದುಕೊಂಡಿತು.
  • ಕಾವ್ಯಾ ಮಾರನ್ ಕ್ರೀಡಾಂಗಣಕ್ಕೆ ಬಂದು ಎಸ್‌ಆರ್‌ಎಚ್ ಆಡಿದ ಪ್ರತಿ ಪಂದ್ಯವನ್ನು ವೀಕ್ಷಿಸಿದ್ದಾರೆ..
IPL 2024 ಫೈನಲ್‌ನಲ್ಲಿ ಸನ್‌ರೈಸರ್ಸ್ ಸೋಲು.. ಕಣ್ಣೀರಿಟ್ಟ ಕಾವ್ಯ ಮಾರನ್.. ವಿಡಿಯೋ ವೈರಲ್! title=

IPL 2024: ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ 2024 ಸೀಸನ್ ಟ್ರೋಫಿಯನ್ನು ಗೆದ್ದುಕೊಂಡಿತು. ಭಾನುವಾರ ರಾತ್ರಿ ಚೆನ್ನೈ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ ರನ್ ಗಳಿಸಲು ವಿಫಲವಾಯಿತು. ಸತತ ವಿಕೆಟ್ ಕಳೆದುಕೊಂಡು ಕೇವಲ 113 ರನ್‌ಗಳಿಗೆ ಆಲೌಟ್ ಆಯಿತು. 114 ರನ್‌ಗಳ ಗುರಿಯೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟ್ಸ್‌ಮನ್‌ಗಳು ಕೇವಲ 10.3 ಓವರ್‌ಗಳಲ್ಲಿ ಗುರಿಯನ್ನು ಮುಟ್ಟಿ ಐಪಿಎಲ್ 2024 ರ ವಿಜೇತರಾದರು.

ಇದನ್ನೂ ಓದಿ-ದಿನೇಶ್ ಕಾರ್ತಿಕ್ ಔಟ್ ನೀಡಿಲ್ಲವೆಂದು ಮೈದಾನದಲ್ಲೇ ಥರ್ಡ್ ಅಂಪೈರ್ ವಿರುದ್ಧ ಕಿಡಿಕಾರಿದ ಕುಮಾರ್ ಸಂಗಕ್ಕಾರ!

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಗೆಲುವಿನೊಂದಿಗೆ ಮೈದಾನದಲ್ಲಿ ಅಭಿಮಾನಿಗಳು ಸಂಭ್ರಮದಿಂದ ಸಂಭ್ರಮಿಸುತ್ತಿದ್ದಾರೆ. ಪಂದ್ಯ ವೀಕ್ಷಿಸಲು ತಂಡದ ಮಾಲೀಕ ಶಾರುಖ್ ಖಾನ್ ಹಾಗೂ ಹಲವು ಬಾಲಿವುಡ್ ತಾರೆಯರು ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಮತ್ತೊಂದೆಡೆ ಹೈದರಾಬಾದ್ ತಂಡದ ಸೋಲಿನಿಂದಾಗಿ ತಂಡದ ಒಡತಿ ಕಾವ್ಯಾ ಮಾರನ್ ಕಣ್ಣೀರು ಹಾಕಿದ್ದಾರೆ. ಸುತ್ತಮುತ್ತಲಿನವರು ಕಾವ್ಯಾ ಮಾರನ್‌ಗೆ ಸಾಂತ್ವನ ಹೇಳಲು ಪ್ರಯತ್ನಿಸಿದರು, ಆದರೆ ಆಕೆಗೆ ಸೋಲಿನ ಆಘಾತ ತಡೆದುಕೊಳ್ಳಲಾಗದೇ ಗಳಗಳನೆ ಮೈದಾನದಲ್ಲೇ ಕಣ್ಣೀರಿಟ್ಟಿದ್ದಾರೆ... ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ-IPL : 173ರನ್ ಗಳ ಟಾರ್ಗೆಟ್ ನೀಡಿದ RCB, ಗುರಿ ತಲುಪಿ ಕ್ವಾಲಿಫೈಯರ್ 2 ಗೆ ಹೋಗ್ತಾರಾ ? ಇಲ್ಲಾ ಎಲಿಮಿನೇಟ್? ಆಗತ್ತಾ RR!

ಕಾವ್ಯಾ ಮಾರನ್ ಕ್ರೀಡಾಂಗಣಕ್ಕೆ ಬಂದು ಎಸ್‌ಆರ್‌ಎಚ್ ಆಡಿದ ಪ್ರತಿ ಪಂದ್ಯವನ್ನು ವೀಕ್ಷಿಸಿದ್ದಾರೆ.. ಎಸ್‌ಆರ್‌ಎಚ್ ಪಂದ್ಯ ಎಂದರೆ ಕ್ರೀಡಾಂಗಣದಲ್ಲಿದ್ದ ಕ್ಯಾಮೆರಾಗಳು ಮತ್ತು ಅಭಿಮಾನಿಗಳ ಕಣ್ಣುಗಳು ಕಾವ್ಯಾ ಮಾರನ್‌ನ ಮೇಲಿದ್ದವು. ಈ ಹೈದರಾಬಾದ್ ತಂಡ ಉತ್ತಮ ಆವೇಗದಲ್ಲಿದ್ದು, ಫೈನಲ್ ಪಂದ್ಯದಲ್ಲೂ ಗೆಲುವು ನಿಶ್ಚಿತ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ ಹೈದರಾಬಾದ್ ತಂಡದ ಅನಿರೀಕ್ಷಿತ ಸೋಲನ್ನು ಸಹಿಸಲಾಗದ ಕಾವ್ಯ ಮಾರನ್ ಕಣ್ಣೀರು ಹಾಕಿದ್ದಾರೆ... ಈ ದೃಶ್ಯಗಳನ್ನು ನೋಡಿದ ಎಸ್‌ಆರ್‌ಎಚ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸುತ್ತಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

 

Trending News