IPL Mini Auction 2023: ಅತಿಹೆಚ್ಚು ಮೊತ್ತಕ್ಕೆ ಮಾರಾಟವಾದ ಟಾಪ್ 10 ಆಟಗಾರರು ಇವರೇ ನೋಡಿ

ಕೊಚ್ಚಿಯಲ್ಲಿ ನಡೆದ IPLನ ಮಿನಿ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಈ ಬಾರಿ ಬರೋಬ್ಬರಿ 405 ಆಟಗಾರರು ಕಣದಲ್ಲಿದ್ದರು. ಅನೇಕ ಸ್ಟಾರ್ ಆಟಗಾರರು ಅನ್‍ಸೋಲ್ಡ್ ಆಗಿದ್ದರೆ, ಇನ್ನೂ ಅನೇಕರು ಯಾರೂ ನಿರೀಕ್ಷಿಸಿದ ರೀತಿ ದೊಡ್ಡ ಮೊತ್ತಕ್ಕೆ ಸೇಲ್ ಆಗಿದ್ದಾರೆ.

Written by - Puttaraj K Alur | Last Updated : Dec 24, 2022, 04:34 PM IST
  • ಕೊಚ್ಚಿಯಲ್ಲಿ ನಡೆದ ಐಪಿಲ್ ಮಿನಿ ಹರಾಜಿನಲ್ಲಿ 405 ಆಟಗಾರರು ಭಾಗಿ
  • ಸ್ಟಾರ್ ಆಟಗಾರರಿಗೆ ಕೋಟಿ ಕೋಟಿ ರೂ. ಹಣ ಸುರಿದ ಪ್ರಾಂಚೈಸಿಗಳು
  • 18.5 ಕೋಟಿ ರೂ. ಕೊಟ್ಟು ಸ್ಯಾಮ್ ಕರನ್ ಖರೀದಿಸಿದ ಪಂಜಾಬ್‌ ಕಿಂಗ್ಸ್‍
IPL Mini Auction 2023: ಅತಿಹೆಚ್ಚು ಮೊತ್ತಕ್ಕೆ ಮಾರಾಟವಾದ ಟಾಪ್ 10 ಆಟಗಾರರು ಇವರೇ ನೋಡಿ title=
IPL mini auction 2023

ನವದೆಹಲಿ: ಕೊಚ್ಚಿಯಲ್ಲಿ ನಡೆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL)ನ ಮಿನಿ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಈ ಬಾರಿ ಬರೋಬ್ಬರಿ 405 ಆಟಗಾರರು ಕಣದಲ್ಲಿದ್ದರು. ಈ ಪೈಕಿ ತಮಗೆ ಬೇಕಾದ ಆಟಗಾರರನ್ನು ಕೊಂಡುಕೊಳ್ಳುವ ಮೂಲಕ ವಿವಿಧ ಪ್ರಾಂಚೈಸಿಗಳು ಕೋಟಿ ಕೋಟಿ ರೂ. ಹಣ ಸುರಿದಿವೆ. ಅನೇಕ ಸ್ಟಾರ್ ಆಟಗಾರರು ಅನ್‍ಸೋಲ್ಡ್ ಆಗಿದ್ದರೆ, ಇನ್ನೂ ಅನೇಕರು ಯಾರೂ ನಿರೀಕ್ಷಿಸಿದ ರೀತಿ ದೊಡ್ಡ ಮೊತ್ತಕ್ಕೆ ಸೇಲ್ ಆಗಿದ್ದಾರೆ.

ಇಂಗ್ಲೆಂಡ್‌ ತಂಡದ ಸ್ಟಾರ್‌ ಆಲ್‌ರೌಂಡರ್‌ ಸ್ಯಾಮ್‌ ಕರನ್‌ ಪಂಜಾಬ್‌ ಕಿಂಗ್ಸ್‌ ತಂಡದ ಪಾಲಾಗಿದ್ದು, ಬರೋಬ್ಬರಿ 18.5 ಕೋಟಿ ರೂ.ಗೆ ಸೇಲ್ ಆಗಿದ್ದಾರೆ. ಈ ಮೂಲಕ ಕರನ್ ಐಪಿಎಲ್‌ ಟೂರ್ನಿಯ ಹರಾಜಿನ ಇತಿಹಾಸದಲ್ಲೇ ಅತಿಹೆಚ್ಚು ಮೊತ್ತಕ್ಕೆ ಬಿಕರಿಯಾದ ಆಟಗಾರ ಅನ್ನೋ ಹೆಗ್ಗಳಿಕೆಗೆ ಪಾತ್ರರಾದರು.

ಇದನ್ನೂ ಓದಿ: IPL 2023 auction: ಬಿಡ್ಡಿಂಗ್ ನಲ್ಲಿ ನ್ಯಾಷನಲ್ ಕ್ರಶ್ ಕವಿಯಾ ಮಾರನ್ ರಿಯಾಕ್ಷನ್ ಗೆ ಫ್ಯಾನ್ಸ್ ಫಿದಾ...!

ಸ್ಯಾಮ್ ಕರನ್ ಅಲ್ಲದೇ ಇದೇ ಮೊದಲ ಬಾರಿಗೆ ಐಪಿಎಲ್‌ ಟೂರ್ನಿಯ ಹರಾಜಿನಲ್ಲಿ ಪಾಲ್ಗೊಂಡಿದ್ದ ಆಸ್ಟ್ರೇಲಿಯಾದ ಕೆಮರೂನ್‌ ಗ್ರೀನ್‌, ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್‌ ಘಟಾನುಘಟಿ ಆಟಗಾರರನ್ನು ಹಿಂದಿಕ್ಕಿ ದೊಡ್ಡ ಮೊತ್ತವನ್ನು ಜೇಬಿಗಿಳಿಸಿಕೊಂಡಿದ್ದಾರೆ. ಇವರ ಸೇಲ್ ಆಗಿರುವ ಮೊತ್ತ ಕೇಳಿ ಕ್ರಿಕೆಟ್‌ ಪ್ರಿಯರು ಹುಬ್ಬೇರಿಸಿದ್ದಾರೆ.   

ಅತಿಹೆಚ್ಚು ಮೊತ್ತಕ್ಕೆ ಸೇಲ್ ಆದ ಅಗ್ರ 10 ಆಟಗಾರರು

1. ಇಂಗ್ಲೆಂಡ್‍ನ ಸ್ಯಾಮ್‌ ಕರನ್‌: 18.50 ಕೋಟಿ ರೂ.ಗೆ ಪಂಜಾಬ್‌ ಕಿಂಗ್ಸ್‌ ಪಾಲು

2. ಆಸ್ಟ್ರೇಲಿಯಾದ ಕೆಮರೂನ್‌ ಗ್ರೀನ್‌ : 17.50 ಕೋಟಿ ರೂ.ಗೆ ಮುಂಬೈ ಇಂಡಿಯನ್ಸ್‌ ಪಾಲು

3. ಇಂಗ್ಲೆಂಡ್‍ನ ಬೆನ್‌ ಸ್ಟೋಕ್ಸ್‌ : 16.25 ಕೋಟಿ ರೂ.ಗೆ ಚೆನ್ನೈ ಸೂಪರ್‌ ಕಿಂಗ್ಸ್‌ ಪಾಲು

4. ವೆಸ್ಟ್‌ ಇಂಡೀಸ್‍ನ ನಿಕೋಲಸ್‌ ಪೂರನ್‌ : 16 ಕೋಟಿ ರೂ.ಗೆ ಲಕ್ನೋ ಸೂಪರ್‌ ಜೈಂಟ್ಸ್‌ ಪಾಲು

5. ಇಂಗ್ಲೆಂಡ್‍ನ ಹ್ಯಾರಿ ಬ್ರೂಕ್‌ : 13.5 ಕೋಟಿ ರೂ.ಗೆ ಸನ್‌ರೈಸರ್ಸ್‌ ಹೈದರಾಬಾದ್ ಪಾಲು

6.  ಭಾರತದ ಮಯಾಂಕ್‌ ಅಗರವಾಲ್ : 8.25 ಕೋಟಿ ರೂ.ಗೆ ಸನ್‌ರೈಸರ್ಸ್‌ ಹೈದರಾಬಾದ್ ಪಾಲು

7. ಭಾರತದ ಶಿವಂ ಮಾವಿ : 6 ಕೋಟಿ ರೂ.ಗೆ ಗುಜರಾತ್‌ ಟೈಟಾನ್ಸ್ ಪಾಲು

8. ವೆಸ್ಟ್‌ ಇಂಡೀಸ್‍ನ ಜೇಸನ್‌ ಹೋಲ್ಡರ್‌ : 5.75 ಕೋಟಿ ರೂ.ಗೆ ರಾಜಸ್ಥಾನ ರಾಯಲ್ಸ್‌ ಪಾಲು

9. ಭಾರತದ ಮುಕೇಶ್ ಕುಮಾರ್‌: 5.5 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್‌ ಪಾಲು

10. ದಕ್ಷಿಣ ಆಫ್ರಿಕಾದ ಹೆನ್ರಿಚ್‌ ಕ್ಲಾಸೆನ್‌ : 5.25 ಕೋಟಿ ರೂ.ಗೆ ಸನ್‌ರೈಸರ್ಸ್‌ ಹೈದರಾಬಾದ್ ಪಾಲು

ಇದನ್ನೂ ಓದಿ: IPL Auction 2023 : ಐಪಿಎಲ್‌ನಲ್ಲೆ ಅತೀ ಹೆಚ್ಚು ಮೊತ್ತಕ್ಕೆ ಸೆಲ್ ಆದ ಸ್ಯಾಮ್ ಕರ್ರಾನ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News