CSK vs MI: ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್-2023 ರ 12 ನೇ ಪಂದ್ಯದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಗೆಲುವು ಸಾಧಿಸಿದೆ. ಟಾಸ್ ಗೆದ್ದ ಸಿಎಸ್’ಕೆ ತಂಡ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು,
ಇದನ್ನೂ ಓದಿ: Cricket: ಮೈದಾನದಲ್ಲಿ ಕಿತ್ತಾಟ.. ಪೆವಿಲಿಯನ್’ನಲ್ಲಿ ದೋಸ್ತಿ: ಕ್ರಿಕೆಟ್ ಲೋಕ ಕಂಡ ಈ ಅಪೂರ್ವ ಸ್ನೇಹಿತರು ಯಾರು ಗೊತ್ತಾ?
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಮುಂಬೈಗೆ ವೇಗದ ಆರಂಭ ನೀಡಲು ಯತ್ನಿಸಿ 13 ಎಸೆತಗಳಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 21 ರನ್ ಗಳಿಸಿದರು. ಬಳಿಕ ಇಶಾನ್ ಕಿಶನ್ (32) ಅವರೊಂದಿಗೆ 38 ರನ್‌ಗಳ ಜೊತೆಯಾಟವನ್ನಾಡಿದ್ದಾರೆ. ಆ ಬಳಿಕ ರೋಹಿತ್ ಅವರನ್ನು ತುಷಾರ್ ದೇಶಪಾಂಡೆ ಬೌಲ್ಡ್ ಮಾಡಿದರು. ನಂತರ ಜಡೇಜಾ ಅವರು ಇಶಾನ್ ಕಿಶನ್, ಕ್ಯಾಮರೂನ್ ಗ್ರೀನ್ ಮತ್ತು ತಿಲಕ್ ವರ್ಮಾಗೆ ಪೆವಿಲಿಯನ್ ಹಾದಿ ತೋರಿಸಿದರು.
ಇನ್ನು ಇನಿಂಗ್ಸ್‌ನ 9ನೇ ಓವರ್‌ಗೆ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತದ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾಗೆ ಚೆಂಡನ್ನು ನೀಡಿದರು. ಈ ಓವರ್’ನ ಎರಡನೇ ಎಸೆತದಲ್ಲಿ ಅದ್ಭುತ ಪ್ರದರ್ಶನ ನೀಡಿದರು.
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್:
ಮುಂಬೈ ಇಂಡಿಯನ್ಸ್ XI: ರೋಹಿತ್ ಶರ್ಮಾ(c), ಇಶಾನ್ ಕಿಶನ್(w), ಕ್ಯಾಮರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ಟ್ರಿಸ್ಟಾನ್ ಸ್ಟಬ್ಸ್, ಅರ್ಷದ್ ಖಾನ್, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್
MI ಇಂಪ್ಯಾಕ್ಟ್ ಪ್ಲೇಯರ್: ರಮಣದೀಪ್ ಸಿಂಗ್, ಸಂದೀಪ್ ವಾರಿಯರ್, ಅರ್ಜುನ್ ತೆಂಡೂಲ್ಕರ್, ಕುಮಾರ್ ಕಾರ್ತಿಕೇಯ, ನೇಹಾಲ್ ವಧೇರಾ
ಇದನ್ನೂ ಓದಿ: Urvashi Rautela: ಊರ್ವಶಿ ರೌಟೇಲಾಗೆ ಪಾಕ್ ಆಟಗಾರನ ಲವ್ ಪ್ರಪೋಸ್! ಪಂತ್ ಕಥೆ…? ವಿಡಿಯೋ ವೈರಲ್
ಚೆನ್ನೈ ಸೂಪರ್ ಕಿಂಗ್ಸ್: ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಎಂಎಸ್ ಧೋನಿ(w/c), ಶಿವಂ ದುಬೆ, ಡ್ವೈನ್ ಪ್ರಿಟೋರಿಯಸ್, ದೀಪಕ್ ಚಾಹರ್, ಮಿಚೆಲ್ ಸ್ಯಾಂಟ್ನರ್, ಸಿಸಂದ ಮಗಳ, ತುಷಾರ್ ದೇಶಪಾಂಡೆ
ಇಂಪ್ಯಾಕ್ಟ್ ಪ್ಲೇಯರ್: ರಾಜವರ್ಧನ್ ಹಂಗರ್ಗೇಕರ್, ಅಂಬಟಿ ರಾಯುಡು, ಶೇಕ್ ರಶೀದ್, ಆಕಾಶ್ ಸಿಂಗ್, ಸುಭ್ರಾಂಶು ಸೇನಾಪತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.