KKR vs PBKS: ಪಂಜಾಬ್ ಕಿಂಗ್ಸ್ ವಿರುದ್ಧ ಕೊಲ್ಕತಾಗೆ ರೋಚಕ ಗೆಲುವು, ಹಲವು ದಾಖಲೆಗಳಿಗೆ ಸಾಕ್ಷಿಯಾಯಿತು ಪಂದ್ಯ 

ಇಲ್ಲಿನ ಈಡನ್ ಗಾರ್ಡನ್ ನಲ್ಲಿ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಐದು ವಿಕೆಟ್ ಗಳ ರೋಚಕ ಗೆಲುವು ಸಾಧಿಸಿದೆ.

Written by - Zee Kannada News Desk | Last Updated : May 9, 2023, 04:37 AM IST
  • ಈಗ ಪಂಜಾಬ್ ಕಿಂಗ್ಸ್ ಸೋಲನ್ನು ಅನುಭವಿಸಿರುವುದರಿಂದಾಗಿ ಮಾಡು ಇಲ್ಲವೇ ಮಡಿ ಪರಿಸ್ಥಿತಿಯಲ್ಲಿದೆ
  • ಮತ್ತು ಅಗ್ರ ನಾಲ್ಕರಲ್ಲಿ ಸ್ಥಾನವನ್ನು ಪಡೆಯಬೇಕಾದರೆ ಪ್ರತಿ ಪಂದ್ಯವನ್ನು ಗೆಲ್ಲಬೇಕಾಗಿದೆ.
  • ಮೇ 13 ರಂದು ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಎದುರಿಸಲಿದೆ.
 KKR vs PBKS: ಪಂಜಾಬ್ ಕಿಂಗ್ಸ್ ವಿರುದ್ಧ ಕೊಲ್ಕತಾಗೆ ರೋಚಕ ಗೆಲುವು, ಹಲವು ದಾಖಲೆಗಳಿಗೆ ಸಾಕ್ಷಿಯಾಯಿತು ಪಂದ್ಯ  title=

ಕೊಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ ನಲ್ಲಿ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಐದು ವಿಕೆಟ್ ಗಳ ರೋಚಕ ಗೆಲುವು ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಂಜಾಬ್ ಕಿಂಗ್ಸ್ ತಂಡವು ಶಿಖರ್ ಧವನ್ (57) ಅವರ ಅರ್ಧಶತಕದ ನೆರವಿನಿಂದಾಗಿ  20 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ  179 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಕೋಲ್ಕತ್ತಾ ತಂಡವು 20 ಓವರ್ ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 182 ರನ್ ಗಳಿಸುವ ಮೂಲಕ ಗೆಲುವಿನ ತಡ ಸೇರಿತು. ಕೊಲ್ಕತ್ತಾ ತಂಡದ ಪರವಾಗಿ ಜೇಸನ್ ರಾಯ್ 38,ನಿತೀಶ್ ರಾಣಾ 51, ಆಂಡ್ರೆ ರಸೆಲ್ 42, ಹಾಗೂ ಕೊನೆಯಲ್ಲಿ ರಿಂಕು ಸಿಂಗ್ ಕೇವಲ 10 ಎಸೆತಗಳಲ್ಲಿ 21 ರನ್ ಗಳಿಸುವ ಮೂಲಕ ಗೆಲುವಿನ ತಡಕ್ಕೆ ಸೇರಿಸಿದರು.

ಇದನ್ನೂ ಓದಿ: ರಾಹುಲ್‌ ಗಾಂಧಿಯಿಂದ ಚಿಕ್ಕೋಡಿಯಲ್ಲಿ ಭರ್ಜರಿ ಕ್ಯಾಂಪೇನ್

ಈ ಪಂದ್ಯವು ಸಾಕಷ್ಟು ರೋಚಕತೆಗೆ ಸಾಕ್ಷಿಯಾಗುವುದರ ಜೊತೆಗೆ ಈ ಪಂದ್ಯದಲ್ಲಿ ಸಾಕಷ್ಟು ಹೊಸ ದಾಖಲೆಗಳು ಸಹ ನಿರ್ಮಾಣವಾಗಿವೆ.

KKR vs PBKS ವಿರುದ್ಧದ ಪಂದ್ಯದಲ್ಲಿನ ದಾಖಲೆಗಳು 

-ಶಿಖರ್ ಧವನ್ ತಮ್ಮ 50 ನೇ ಐಪಿಎಲ್ ನ ಅರ್ಧಶತಕವನ್ನು ಗಳಿಸಿದರು, ವಿರಾಟ್ ಕೊಹ್ಲಿ ಮತ್ತು ಡೇವಿಡ್ ವಾರ್ನರ್ ನಂತರ ಈ ಸಾಧನೆ ಮಾಡಿದ ಮೂರನೇ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಧವನ್ ಈ ಸಾಧನೆ ಮಾಡಿದ ಎರಡನೇ ಭಾರತೀಯ ಆಟಗಾರರಾಗಿದ್ದಾರೆ.

-KKR ಈಗ ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 21 ಗೆಲುವುಗಳನ್ನು ಹೊಂದಿದೆ, ನಿರ್ದಿಷ್ಟ ತಂಡದ ವಿರುದ್ಧ ಯಾವುದೇ ತಂಡವು ಎರಡನೇ ಅತಿ ಹೆಚ್ಚು ಗೆಲುವು ಸಾಧಿಸಿದೆ.

-ಆಂಡ್ರೆ ರಸೆಲ್ 100+ ಎಸೆತಗಳನ್ನು ಎದುರಿಸಿದ ತಂಡದ ವಿರುದ್ಧ (ಪಂಜಾಬ್ ಕಿಂಗ್ಸ್) ಎರಡನೇ ಅತಿ ಹೆಚ್ಚು ಸ್ಟ್ರೈಕ್ ರೇಟ್ (200) ಹೊಂದಿದ್ದಾರೆ.

ಈಗ ಪಂಜಾಬ್ ಕಿಂಗ್ಸ್ ಈ ಸೋಲಿನೊಂದಿಗೆ ಮಾಡು ಇಲ್ಲವೇ ಮಡಿ ಪರಿಸ್ಥಿತಿಯಲ್ಲಿದೆ ಮತ್ತು ಅಗ್ರ ನಾಲ್ಕರಲ್ಲಿಸ್ಥಾನವನ್ನು ಪಡೆಯಬೇಕಾದರೆ ಪ್ರತಿ ಪಂದ್ಯವನ್ನು ಗೆಲ್ಲಬೇಕಾಗಿದೆ. ಮೇ 13 ರಂದು ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಎದುರಿಸಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News