MS Dhoni autograph is on Sunil Gavaskar chest: ಭಾರತದ ಶ್ರೇಷ್ಠ ಬ್ಯಾಟ್ಸ್ಮನ್ ಸುನಿಲ್ ಗವಾಸ್ಕರ್ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಒಂದಕ್ಕಿಂತ ಹೆಚ್ಚು ದಾಖಲೆಗಳನ್ನು ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 10,000 ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಎಂಬ ಖ್ಯಾತಿಗೆ ಸುನಿಲ್ ಗವಾಸ್ಕರ್ ಪಾತ್ರರಾಗಿದ್ದರು. ಈ ದಾಖಲೆಯನ್ನು ಶ್ರೇಷ್ಠ ಬ್ಯಾಟ್ಸ್ಮನ್ ಸಚಿನ್ ತೆಂಡೂಲ್ಕರ್ ಮುರಿದರು.
ಸಚಿನ್ ತೆಂಡೂಲ್ಕರ್ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 100 ಶತಕಗಳನ್ನು ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ಸುನಿಲ್ ಗವಾಸ್ಕರ್ ಮತ್ತು ಸಚಿನ್ ತೆಂಡೂಲ್ಕರ್ ನಂತರ ಭಾರತ ಕ್ರಿಕೆಟ್ ಗೆ ವಿರಾಟ್ ಕೊಹ್ಲಿಯಂತಹ ಸ್ಟಾರ್ ಸಿಕ್ಕಿದ್ದಾರೆ. ಕೊಹ್ಲಿ ಕೇವಲ 34 ವರ್ಷ ವಯಸ್ಸಿನಲ್ಲೇ 74 ಅಂತರಾಷ್ಟ್ರೀಯ ಶತಕಗಳನ್ನು ಬಾರಿಸಿದ್ದಾರೆ.
ಇದನ್ನೂ ಓದಿ: ರೋಹಿತ್ ಶರ್ಮಾ ನಿವೃತ್ತಿ ಬಳಿಕ Team Indiaಗೆ ಈ ವಿಕೆಟ್ ಕೀಪರ್-ಬ್ಯಾಟ್ಸ್’ಮನ್ ನಾಯಕ!
ಇವೆಲ್ಲದರ ಹೊರತಾಗಿ ಭಾರತದ ಶ್ರೇಷ್ಠ ಬ್ಯಾಟ್ಸ್ಮನ್ ಸುನಿಲ್ ಗವಾಸ್ಕರ್ ಅವರು ಜಗತ್ತಿನ ಶ್ರೇಷ್ಠ ಆಟಗಾರರ ಬಗ್ಗೆ ಮನಬಿಚ್ಚಿದ್ದಾರೆ. ಗವಾಸ್ಕರ್ ಭಾನುವಾರ ದೇಶದ ಅತ್ಯಂತ ಯಶಸ್ವಿ ಕ್ರಿಕೆಟ್ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಆಟೋಗ್ರಾಫ್ ತೆಗೆದುಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯುತ್ತಮ ಬೌಲರ್ ಗಳ ಮುಂದೆ 10,000 ಕ್ಕೂ ಹೆಚ್ಚು ರನ್ ಗಳಿಸಿದ ಗವಾಸ್ಕರ್, ಚೆನ್ನೈನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ನಂತರ ತಮ್ಮ ಎದೆಯ ಬಳಿ ಧೋನಿ ಅವರ ಹಸ್ತಾಕ್ಷರ (ಆಟೋಗ್ರಫ್)ನ್ನು ತಮ್ಮ ಅಂಗಿಯ ಮೇಲೆ ಹಾಕಿಸಿಕೊಂಡಿದ್ದಾರೆ.
Mahendra Singh Dhoni has such a huge fan base that even legendary cricketer Sunil gavaskar came and asked for his autograph 💛
Moment of the day💛#MSDhoni #Sunilgavaskar #WhistlePodu #CSKvsKKR #IPL2023 pic.twitter.com/p6LmVZcUH2— Shashank Pawaskar (@pawaskar_sha) May 14, 2023
ಇದು ಪ್ರಸಕ್ತ ಋತುವಿನಲ್ಲಿ ಚೆಪಾಕ್ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನ ಕೊನೆಯ ಪಂದ್ಯವಾಗಿತ್ತು. ಪಂದ್ಯದ ನಂತರ, 41 ವರ್ಷದ ಧೋನಿ ಟೆನಿಸ್ ರಾಕೆಟ್ ಮತ್ತು ಆಟೋಗ್ರಾಫ್ ಇದ್ದ ಟೆನಿಸ್ ಬಾಲ್ ಗಳನ್ನು ಮೈದಾನಕ್ಕೆ ತಂದರು. ಬಳಿಕ ಅದನ್ನು ಸ್ಟೇಡಿಯಂನಲ್ಲಿದ್ದ ಫ್ಯಾನ್ಸ್ ಗೆ ನೀಡಲು ಮುಂದಾದರು. ಧೋನಿ ಜೊತೆಗೆ, ಚೆನ್ನೈ ಸೂಪರ್ ಕಿಂಗ್ಸ್ ನ ಇತರ ಆಟಗಾರರು ಸಹ ಪ್ರೇಕ್ಷಕರಿಗೆ ಚೆಂಡುಗಳು ಮತ್ತು ಟಿ-ಶರ್ಟ್ ಗಳನ್ನು ನೀಡುತ್ತಿದ್ದರು.
ಇದೇ ವೇಳೆ ಬಂದ ಗವಾಸ್ಕರ್ ಧೋನಿ ಅವರ ಅಟೋಗ್ರಾಫ್ ನ್ನು ತಮ್ಮ ಎದೆಯ ಬಳಿ ಶರ್ಟ್ ಗೆ ಹಾಕಿಸಿಕೊಂಡರು. ಈ ಅವಿಸ್ಮರಣೀಯ ದೃಶ್ಯವು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
200 ಪಂದ್ಯಗಳಿಗೆ ನಾಯಕತ್ವ ವಹಿಸಿದ್ದ ಧೋನಿ:
ಪ್ರಸಕ್ತ ಋತುವಿನಲ್ಲಿ, ಧೋನಿ ಚೆನ್ನೈಗೆ ನಾಯಕನಾಗಿ 200ನೇ ಪಂದ್ಯವನ್ನು ಆಡಿದಾಗ, ಗವಾಸ್ಕರ್ ಅವರನ್ನು ಐಪಿಎಲ್ ಇತಿಹಾಸದಲ್ಲಿ ಅತ್ಯುತ್ತಮ ನಾಯಕ ಎಂದು ಹೇಳಿದ್ದರು. ಈ ವರ್ಷದ ಏಪ್ರಿಲ್ 17 ರಂದು ಗವಾಸ್ಕರ್ ಅವರು, “ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕಠಿಣ ಪರಿಸ್ಥಿತಿಯಿಂದ ಹೊರಬರುವುದು ಹೇಗೆ ಎಂದು ತಿಳಿದಿದೆ ಮತ್ತು ಇದು ಧೋನಿ ನಾಯಕತ್ವದಲ್ಲಿ ಮಾತ್ರ ಸಾಧ್ಯವಾಗುತ್ತದೆ. ಯಾವುದೇ ಒಂದು ಫ್ರಾಂಚೈಸಿಗೆ 200 ಪಂದ್ಯಗಳನ್ನು ನಾಯಕತ್ವ ವಹಿಸುವುದು ತುಂಬಾ ಕಷ್ಟ. ನಾಯಕತ್ವವು ಆಟಗಾರನ ಪ್ರದರ್ಶನದ ಮೇಲೆ ಪರಿಣಾಮ ಬೀರುವ ಹೊರೆಯಂತೆ. ಆದರೆ ಮಹಿ ವಿಭಿನ್ನ, ಅವರು ವಿಭಿನ್ನ ನಾಯಕ. ಅವರಂತಹ ನಾಯಕ ಎಂದಿಗೂ ಇರಲಿಲ್ಲ. ಭವಿಷ್ಯದಲ್ಲಿ ಅವರಂತೆ ಯಾರೂ ಇರುವುದಿಲ್ಲ” ಎಂದು ವರ್ಣಿಸಿದ್ದರು.
ಇದನ್ನೂ ಓದಿ: Cricket World Cup 2023: ವಿಶ್ವಕಪ್ಗೂ ಮುನ್ನ ಟೀಂ ಇಂಡಿಯಾಗೆ ದೊಡ್ಡ ಹೊಡೆತ!
2007 ರ ಟಿ20 ವಿಶ್ವಕಪ್ ಮತ್ತು 2011 ರ ಏಕದಿನ ವಿಶ್ವಕಪ್ ಹೊರತುಪಡಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ವಿಶ್ವದ ಏಕೈಕ ನಾಯಕ ಧೋನಿ. ಅವರು ಐಪಿಎಲ್ ನಲ್ಲಿ ನಾಲ್ಕು ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಮತ್ತು ಮುಂಬೈ ಇಂಡಿಯನ್ಸ್ (ಐದು ಪ್ರಶಸ್ತಿಗಳು) ನಂತರ ಅವರ ತಂಡವು ಈ ಲೀಗ್ನಲ್ಲಿ ಎರಡನೇ ಅತ್ಯಂತ ಯಶಸ್ವಿ ತಂಡವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ