Rohit Sharma: ನಾಯಕನಾಗಿ ತನ್ನನ್ನು ತಾನು ಸಾಬೀತುಪಡಿಸಲು ರೋಹಿತ್ ಶರ್ಮಾಗೆ ಬಹಳ ಕಡಿಮೆ ಸಮಯ ಉಳಿದಿದೆ. ಈ ವರ್ಷ ಭಾರತದಲ್ಲಿ ನಡೆಯಲಿರುವ 2023ರ ವಿಶ್ವಕಪ್ ನಂತರ, ರೋಹಿತ್ ಶರ್ಮಾ ಟೀಮ್ ಇಂಡಿಯಾದ ನಾಯಕನಾಗಿ ಉಳಿಯುತ್ತಾರೋ ಇಲ್ಲವೋ ಎಂಬುದು ಯಾರಿಗೂ ತಿಳಿದಿಲ್ಲ. ರೋಹಿತ್ ಶರ್ಮಾ ವಯಸ್ಸು ಈಗ 36 ವರ್ಷ. 36ರ ಹರೆಯದ ರೋಹಿತ್ ಶರ್ಮಾ ಅವರು ಭಾರತ ತಂಡದ ಟೆಸ್ಟ್ ನಾಯಕತ್ವವನ್ನು ದೀರ್ಘ ಕಾಲ ನಿರ್ವಹಿಸಲು ಸಾಧ್ಯವಿಲ್ಲ.
2023ರ ಏಕದಿನ ವಿಶ್ವಕಪ್ ಬಳಿಕ ಭಾರತ ತಂಡ ಹೊಸ ನಾಯಕನ ಹುಡುಕಾಟದಲ್ಲಿದೆ. ಆದರೆ ಟೀಮ್ ಇಂಡಿಯಾದ ಖಾಯಂ ಟೆಸ್ಟ್, ODI ಮತ್ತು T20 ನಾಯಕನಾಗಬಲ್ಲ ಆಟಗಾರನೊಬ್ಬನಿದ್ದಾನೆ. ಈ ಆಟಗಾರ ಮೈದಾನದಲ್ಲಿ ಅತ್ಯಂತ ಆಕ್ರಮಣಕಾರಿ ಶೈಲಿಯಲ್ಲಿ ಆಟವಾಡುತ್ತಾನೆ.
ಇದನ್ನೂ ಓದಿ: CBSE 12 ನೇ ತರಗತಿ ಫಲಿತಾಂಶ ಪ್ರಕಟ , ಡೈರೆಕ್ಟ್ ಲಿಂಕ್ ಮೂಲಕ ಚೆಕ್ ಮಾಡಿಕೊಳ್ಳಿ
ರಿಷಬ್ ಪಂತ್ ಟೀಂ ಇಂಡಿಯಾದ ಮುಂದಿನ ನಾಯಕನಾಗುವ ಸಾಮಾರ್ಥ್ಯ ಹೊಂದಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ, ರಿಷಭ್ ಪಂತ್ ಟೀಂ ಇಂಡಿಯಾ ಪರ ಅದ್ಭುತ ಪ್ರದರ್ಶನ ನೀಡಿದ್ದು, ಈ ಕಾರಣದಿಂದಾಗಿ ಎಲ್ಲಾ ಮೂರು ಸ್ವರೂಪಗಳಲ್ಲಿ ಅವರ ಸ್ಥಾನವನ್ನು ಖಚಿತಪಡಿಸಬಹುದು.
ರಿಷಬ್ ಪಂತ್ ನಾಯಕನಾಗುವ ಎಲ್ಲಾ ಗುಣಗಳನ್ನು ಹೊಂದಿದ್ದಾರೆ. ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವದಲ್ಲಿ ಪಂತ್ ಉತ್ತಮ ಕೆಲಸ ಮಾಡಿದ್ದರು. ಆದರೆ ಈಗ ಅಪಘಾತದಲ್ಲಿ ಗಾಯಗೊಂಡಿರುವ ರಿಷಬ್ ಪಂತ್ ಪ್ರಸ್ತುತ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ. ಆದರೆ ಅವರು ಶೀಘ್ರದಲ್ಲೇ ಟೀಂ ಇಂಡಿಯಾಕ್ಕೆ ಮರಳುವ ಸಾಧ್ಯತೆ ಇದೆ.
ಮುಂಬರುವ ದಿನಗಳಲ್ಲಿ ರಿಷಬ್ ಪಂತ್ ಭಾರತದ ಅಗ್ರ ನಾಯಕರಲ್ಲಿ ಒಬ್ಬರಾಗಬಹುದು. ರಿಷಬ್ ಪಂತ್ ತುಂಬಾ ಚಾಣಾಕ್ಷ ಆಟಗಾರ. ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು ರಿಷಬ್ ನಾಯಕತ್ವದಲ್ಲಿ. ಇನ್ನು ಇವರ ಬ್ಯಾಟಿಂಗ್ ಶೈಲಿ ಸ್ವಂತಿಕೆಯನ್ನು ಹೊಂದಿದೆ.
ಈ 25 ರ ಹರೆಯದ ಯುವ ಬ್ಯಾಟ್ಸ್‌ಮನ್ ಗೆ ಪ್ರತಿಯೊಂದು ಸ್ಥಿತಿಯಲ್ಲೂ ಸಾಕಷ್ಟು ಉತ್ಸಾಹದಿಂದ ಆಟವಾಡುವ ಕೌಶಲ್ಯವಿದೆ. ವಿಕೆಟ್ ಕೀಪಿಂಗ್ ನಲ್ಲೂ ರಿಷಬ್ ಪಂತ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ರಿಷಬ್ ಪಂತ್ ಅವರ ಬ್ಯಾಟಿಂಗ್ ಶೈಲಿ ಸಾಕಷ್ಟು ಆಕ್ರಮಣಕಾರಿಯಾಗಿದೆ. ಪಂತ್ ನಿಂದ ಉತ್ತಮವಾದದ್ದನ್ನು ಪಡೆಯುವ ಮಾರ್ಗವೆಂದರೆ ಅವನು ಏನು ಮಾಡಲು ಬಯಸುತ್ತಾನೋ ಅದನ್ನು ಮಾಡಲು ಬಿಡುವುದು.
ಇದನ್ನೂ ಓದಿ: Team Indiaಗೆ ಸಿಕ್ಕಾಯ್ತು ಯುವರಾಜ್ ಸಿಂಗ್ ತರಹದ ಬ್ಯಾಟ್ಸ್’ಮನ್!
ರೋಹಿತ್ ಶರ್ಮಾ ಅವರಿಗೆ ಈಗ 36 ವರ್ಷ. ರೋಹಿತ್ ಶರ್ಮಾ ನಂತರ, ಬಿಸಿಸಿಐ ತನ್ನ ವೃತ್ತಿಜೀವನದಲ್ಲಿ ಕೆಲವೇ ವರ್ಷಗಳು ಉಳಿದಿರುವವರನ್ನು ನಾಯಕನಾಗಿ ನೇಮಿಸಲು ಇಷ್ಟಪಡುವುದಿಲ್ಲ. ಹೀಗಾಗಿ 25ರ ಹರೆಯದ ರಿಷಭ್ ಪಂತ್ ಅವರನ್ನು ಶೀಘ್ರದಲ್ಲೇ ನಾಯಕನಾಗಿ ಘೋಷಿಸಬಹುದು ಪಡೆಯಬಹುದು. ವಿರಾಟ್ ಕೊಹ್ಲಿ 27 ನೇ ವಯಸ್ಸಿನಲ್ಲಿ ಟೆಸ್ಟ್ ನಾಯಕತ್ವವನ್ನು ಪಡೆದರು. ಬಳಿಕ 29 ನೇ ವಯಸ್ಸಿನಲ್ಲಿ ಏಕದಿನ ಮತ್ತು ಟಿ 20 ನಾಯಕತ್ವವನ್ನು ಪಡೆದರು. ಇದಾದ ಬಳಿಕ ಅನೇಕ ವರ್ಷಗಳವರೆಗೆ ನಾಯಕತ್ವದಲ್ಲಿದ್ದರು. ಇದೀಗ ರಿಷಬ್ ಪಂತ್ ಅವರನ್ನು ಕೂಡ ನೂತನ ನಾಯಕನನ್ನಾಗಿ ಸಿದ್ಧಪಡಿಸುವುದು ಬಿಸಿಸಿಐನ ಗುರಿಯಾಗಿದೆ. ಭಾರತಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಬೇಕಾದರೆ ರಿಷಬ್ ಪಂತ್ ಉತ್ತಮ ಆಯ್ಕೆ ಎನ್ನಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ