IPL: ಐಪಿಎಲ್ ಇತಿಹಾಸದ ಅತ್ಯಂತ ಹಳೆಯ ಆಟಗಾರರು: OLD IS GOLD ಅನ್ನೋದು ಇವರನ್ನು ನೋಡಿಯೇ ಅನ್ಸುತ್ತೆ!

Oldest Players In History Of IPL: ಇಮ್ರಾನ್ ತಾಹಿರ್ ಎಂಬವರು IPL 2023 ರಲ್ಲಿ ಕಾಮೆಂಟರಿ ಬಾಕ್ಸ್‌’ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. 42 ವರ್ಷದವರಾಗಿದ್ದಾಗ ತಾಹಿರ್ ಚೆನ್ನೈ ತಂಡದ ಭಾಗವಾಗಿದ್ದರು.  ಅದ್ಭುತ ಬೌಲಿಂಗ್’ನಿಂದ ಪಂದ್ಯದ ಸ್ಥಿತಿಯನ್ನೇ ಬದಲಿಸುತ್ತಿದ್ದರು.

Written by - Bhavishya Shetty | Last Updated : Apr 2, 2023, 12:54 AM IST
    • ಇಂಡಿಯನ್ ಪ್ರೀಮಿಯರ್ ಲೀಗ್‌ ನ ಇತಿಹಾಸದ ಅತ್ಯಂತ ಹಳೆಯ ಆಟಗಾರರು
    • ಇಂಡಿಯನ್ ಪ್ರೀಮಿಯರ್ ಲೀಗ್‌ ನ 16 ನೇ ಸೀಸನ್ ಸದ್ಯ ನಡೆಯುತ್ತಿದೆ
    • ಎಂಎಸ್ ಧೋನಿ ಐಪಿಎಲ್‌’ನಲ್ಲಿ ಆಡುತ್ತಿದ್ದು ಇವರು ಆರನೇ ಹಿರಿಯ ಆಟಗಾರರಾಗಿದ್ದಾರೆ
IPL: ಐಪಿಎಲ್ ಇತಿಹಾಸದ ಅತ್ಯಂತ ಹಳೆಯ ಆಟಗಾರರು: OLD IS GOLD ಅನ್ನೋದು ಇವರನ್ನು ನೋಡಿಯೇ ಅನ್ಸುತ್ತೆ! title=
Oldest Players in IPL History

Oldest Players In History Of IPL: ಬ್ಲಾಕ್‌ ಬಸ್ಟರ್ ಇಂಡಿಯನ್ ಪ್ರೀಮಿಯರ್ ಲೀಗ್‌ ನ 16 ನೇ ಸೀಸನ್ ಸದ್ಯ ನಡೆಯುತ್ತಿದೆ. ಈ ಪಂದ್ಯಾವಳಿಯ ಇತಿಹಾಸದಲ್ಲಿ ಭಾಗವಹಿಸಿದ ಮತ್ತು ಸದ್ಯ ಆಡುತ್ತಿರುವ ಕೆಲ ಹಳೆಯ ಆಟಗಾರರಿದ್ದಾರೆ. ಅವರ ಬಗ್ಗೆ ಇಂದು ಮಾಹಿತಿ ನೀಡಲಿದ್ದೇವೆ.

ಇದನ್ನೂ ಓದಿ: Viral Video: ಸ್ಟಂಟ್ ಮಾಡಲು ಹೋದ ವಧುವಿನ ಮುಖಕ್ಕೆ ಹಿಡದ ಬೆಂಕಿ! ಮುಂದೆ... ಈ ವಿಡಿಯೋ ನೋಡಿ

ಇಮ್ರಾನ್ ತಾಹಿರ್ ಎಂಬವರು IPL 2023 ರಲ್ಲಿ ಕಾಮೆಂಟರಿ ಬಾಕ್ಸ್‌’ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. 42 ವರ್ಷದವರಾಗಿದ್ದಾಗ ತಾಹಿರ್ ಚೆನ್ನೈ ತಂಡದ ಭಾಗವಾಗಿದ್ದರು.  ಅದ್ಭುತ ಬೌಲಿಂಗ್’ನಿಂದ ಪಂದ್ಯದ ಸ್ಥಿತಿಯನ್ನೇ ಬದಲಿಸುತ್ತಿದ್ದರು.

ಇನ್ನು ಬ್ರಾಡ್ ಹಾಗ್ ಕೂಡ ಐಪಿಎಲ್‌’ನಲ್ಲಿ ಆಡಿದ ಅತ್ಯಂತ ಹಿರಿಯ ಆಟಗಾರ. ಹಾಗ್ 2016 ರಲ್ಲಿ 45 ನೇ ವಯಸ್ಸಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪರ ಆಡಿದ್ದರು.

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ದಂತಕಥೆ ಕ್ರಿಸ್ ಗೇಲ್ 2021 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕಿಂಗ್ಸ್ XI ಪಂಜಾಬ್ ಪರ ತಮ್ಮ ಕೊನೆಯ IPL ಪಂದ್ಯವನ್ನು ಆಡಿದರು.

ಶ್ರೀಲಂಕಾದ ದಂತಕಥೆ ಸ್ಪಿನ್ನರ್, ಸನ್ ರೈಸರ್ಸ್ ಹೈದರಾಬಾದ್ ತಂಡ ಕೋಚಿಂಗ್ ಸ್ಟಾಫ್‌ ನಲ್ಲಿ ಪ್ರಸ್ತುತ ಕೆಲಸ ಮಾಡುತ್ತಿರುವ ಮುತ್ತಯ್ಯ ಮುರಳೀಧರನ್ ಅವರು ತಮ್ಮ 42 ನೇ ವಯಸ್ಸಿನಲ್ಲಿ ಅಂದರೆ 2019 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಾಗಿ ತಮ್ಮ ಕೊನೆಯ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯವನ್ನು ಆಡಿದರು.

2013ರಲ್ಲಿ ಪ್ರವೀಣ್ ತಾಂಬೆ ಇಂಡಿಯನ್ ಪ್ರೀಮಿಯರ್ ಲೀಗ್‌ ನಲ್ಲಿ ಪಾದಾರ್ಪಣೆ ಮಾಡಿದ ಅತ್ಯಂತ ಹಿರಿಯ ಆಟಗಾರರಾದರು. ಅವರು 2016 ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಕೊನೆಯ ಪಂದ್ಯವನ್ನು ಆಡಿದರು.

ಇದನ್ನೂ ಓದಿ: IPL 2023: ಟೀಂ ಇಂಡಿಯಾದಿಂದ ಹೊರಗಿಟ್ಟ ಈ ಆಟಗಾರನಿಗೆ ಪಾಂಡ್ಯ ಕೂಡ ಕೊಡುತ್ತಿಲ್ಲ ಅವಕಾಶ! ಅಂತ್ಯವಾಯ್ತ ವೃತ್ತಿ ಜೀವನ?

ಲೆಜೆಂಡರಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ, ಎಂಎಸ್ ಧೋನಿ ಐಪಿಎಲ್‌’ನಲ್ಲಿ ಆಡುತ್ತಿದ್ದಾರೆ. ಇವರು ಆರನೇ ಹಿರಿಯ ಆಟಗಾರರಾಗಿದ್ದು, ಐಪಿಎಲ್ ಗೆ ಕೂಡ ನಿವೃತ್ತಿ ಘೋಷಣೆ ಮಾಡುವ ಚಿಂತನೆಯಲ್ಲಿದ್ದಾರೆ ಎಂದು ಬಲ್ಲ ಮೂಲಗಳು ಮಾಹಿತಿ ನೀಡಿವೆ. ಸತ್ಯಾಸತ್ಯತೆ ಇನ್ನು ತಿಳಿಯಬೇಕಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News