IPL 2023: ವಿಶ್ವದ ಯಾವುದೇ ಕ್ರಿಕೆಟಿಗರಿಂದಲೂ ಸಾಧ್ಯವಾಗದ ದಾಖಲೆ ಬರೆದ ಈ ಬೌಲರ್! ತಿಳಿದರೆ ‘ವಾವ್..’ ಅಂತೀರ

KKR vs GT: ವಿಶ್ವ ಕ್ರಿಕೆಟ್‌’ನ ಅತ್ಯುತ್ತಮ ಬೌಲರ್‌’ಗಳಲ್ಲಿ ಒಬ್ಬರಾದ ಅಫ್ಘಾನಿಸ್ತಾನದ ರಶೀದ್ ಖಾನ್ ಕೋಲ್ಕತ್ತಾ ವಿರುದ್ಧ ಐಪಿಎಲ್ 2023 ರ 13 ನೇ ಪಂದ್ಯದಲ್ಲಿ ದೊಡ್ಡ ದಾಖಲೆಯನ್ನು ಮಾಡಿದ್ದಾರೆ. ರಶೀದ್ ಐಪಿಎಲ್ 2023ರ ಮೊದಲ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ. ಇದರೊಂದಿಗೆ ರಶೀದ್ 4 ಟಿ20 ಕ್ರಿಕೆಟ್‌ ಲೀಗ್’ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ವಿಶ್ವದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

Written by - Bhavishya Shetty | Last Updated : Apr 9, 2023, 10:12 PM IST
    • ಕೋಲ್ಕತ್ತಾ ತಂಡ ಗುಜರಾತ್ ವಿರುದ್ಧ 3 ವಿಕೆಟ್‌’ಗಳಿಂದ ಜಯ ಸಾಧಿಸಿತು
    • ಅಫ್ಘಾನಿಸ್ತಾನದ ರಶೀದ್ ಖಾನ್ ಕೋಲ್ಕತ್ತಾ ವಿರುದ್ಧ ದೊಡ್ಡ ದಾಖಲೆಯನ್ನು ಮಾಡಿದ್ದಾರೆ
    • ರಶೀದ್ ಐಪಿಎಲ್ 2023ರ ಮೊದಲ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ.
IPL 2023: ವಿಶ್ವದ ಯಾವುದೇ ಕ್ರಿಕೆಟಿಗರಿಂದಲೂ ಸಾಧ್ಯವಾಗದ ದಾಖಲೆ ಬರೆದ ಈ ಬೌಲರ್! ತಿಳಿದರೆ ‘ವಾವ್..’ ಅಂತೀರ title=
Rashid Khan

KKR vs GT: ಐಪಿಎಲ್ 2023ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ 13 ನೇ ಪಂದ್ಯವು ದೀರ್ಘಕಾಲ ನೆನಪಿನಲ್ಲಿ ಉಳಿಯುವಂತೆ ಮಾಡಿದೆ. ಈ ಪಂದ್ಯದಲ್ಲಿ ರಿಂಕು ಸಿಂಗ್ ಏಕಾಂಗಿಯಾಗಿ ಗುಜರಾತ್’ನ ದವಡೆಯಿಂದ ಗೆಲುವನ್ನು ಕಸಿದುಕೊಂಡರು. ಕೋಲ್ಕತ್ತಾ ತಂಡ ಗುಜರಾತ್ ವಿರುದ್ಧ 3 ವಿಕೆಟ್‌’ಗಳಿಂದ ಜಯ ಸಾಧಿಸಿತು. ಕೆಕೆಆರ್ ಗೆದ್ದಿದ್ದರೂ, ಗುಜರಾತ್‌’ನ ಈ ಒಬ್ಬ ಆಟಗಾರ ಪಂದ್ಯದಲ್ಲಿ ವಿಶ್ವದ ಯಾವುದೇ ಕ್ರಿಕೆಟಿಗರಿಗೆ ಸಾಧ್ಯವಾಗದ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: FD Rate: ಜಸ್ಟ್ 2 ದಿನದಲ್ಲಿ… 112 ವರ್ಷ ಹಳೆಯ ಈ ಬ್ಯಾಂಕ್’ನಿಂದ ಹಿರಿಯ ನಾಗರಿಕರಿಗೆ ಸಿಗಲಿದೆ ಊಹೆಗೂ ನಿಲುಕದ ಬೊಂಬಾಟ್ ಗಿಫ್ಟ್!

ವಿಶ್ವ ಕ್ರಿಕೆಟ್‌’ನ ಅತ್ಯುತ್ತಮ ಬೌಲರ್‌’ಗಳಲ್ಲಿ ಒಬ್ಬರಾದ ಅಫ್ಘಾನಿಸ್ತಾನದ ರಶೀದ್ ಖಾನ್ ಕೋಲ್ಕತ್ತಾ ವಿರುದ್ಧ ಐಪಿಎಲ್ 2023 ರ 13 ನೇ ಪಂದ್ಯದಲ್ಲಿ ದೊಡ್ಡ ದಾಖಲೆಯನ್ನು ಮಾಡಿದ್ದಾರೆ. ರಶೀದ್ ಐಪಿಎಲ್ 2023ರ ಮೊದಲ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ. ಇದರೊಂದಿಗೆ ರಶೀದ್ 4 ಟಿ20 ಕ್ರಿಕೆಟ್‌ ಲೀಗ್’ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ವಿಶ್ವದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಅವರು ಟಿ 20 ಅಂತರಾಷ್ಟ್ರೀಯ ಕ್ರಿಕೆಟ್, ಬಿಗ್ ಬ್ಯಾಷ್ ಲೀಗ್, ಕೆರಿಬಿಯನ್ ಪ್ರೀಮಿಯರ್ ಲೀಗ್ ಮತ್ತು ಈಗ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಗಳಿಸಿದ್ದಾರೆ.

ಗುಜರಾತ್ ಟೈಟಾನ್ಸ್‌’ನ ಏಸ್ ಸ್ಪಿನ್ನರ್ ರಶೀದ್ ಖಾನ್ ಐಪಿಎಲ್ 16 ನೇ ಋತುವಿನಲ್ಲಿ 2023 ರ ಮೊದಲ ಹ್ಯಾಟ್ರಿಕ್ ವಿಕೆಟ್ ಪಡೆದರು. ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಈ ದಾಖಲೆಯನ್ನು ಬರೆದಿದ್ದಾರೆ. ಇನಿಂಗ್ಸ್ ನ 17ನೇ ಓವರ್ ನ ಮೊದಲ ಮೂರು ಎಸೆತಗಳಲ್ಲಿ ರಶೀದ್ ವಿಕೆಟ್ ಪಡೆದರು. ಮೊದಲ ಎಸೆತದಲ್ಲಿ ಆಂಡ್ರೆ ರಸೆಲ್, ಎರಡನೇ ಎಸೆತದಲ್ಲಿ ಸುನಿಲ್ ನರೈನ್ ಮತ್ತು ಮೂರನೇ ಎಸೆತದಲ್ಲಿ ಶಾರ್ದೂಲ್ ಠಾಕೂರ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು.

ಇದನ್ನೂ ಓದಿ: Watch: ತನ್ನ ನಾಲಿಗೆಗೆ ಮುತ್ತಿಟ್ಟು, ನೆಕ್ಕುವಂತೆ ಬಾಲಕನಿಗೆ ಸೂಚಿಸಿದ ದಲೈಲಾಮ! ಇದೆಂಥಾ ಅಸಹ್ಯ? ವಿಡಿಯೋ ನೋಡಿ

ಗುಜರಾತ್ ನೀಡಿದ 204 ರನ್ ಗಳ ಗುರಿ ಬೆನ್ನತ್ತಿದ ಕೋಲ್ಕತ್ತಾ 19 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಕೊನೆಯ ಓವರ್‌’ನಲ್ಲಿ 29 ರನ್‌ಗಳ ಅಗತ್ಯವಿತ್ತು. ರಿಂಕು ಸಿಂಗ್ 16 ಎಸೆತಗಳಲ್ಲಿ 18 ರನ್ ಗಳಿಸಿದ್ದರೆ, ಉಮೇಶ್ ಯಾದವ್ 5 ಎಸೆತಗಳಲ್ಲಿ 4 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಗುಜರಾತ್ ತಂಡದ ನಾಯಕ ರಶೀದ್ ಕೊನೆಯ ಓವರ್‌ಗೆ ಯಶ್ ದಯಾಳ್‌’ಗೆ ಚೆಂಡನ್ನು ನೀಡಿದರು. ಮೊದಲ ಎಸೆತದಲ್ಲಿ ಉಮೇಶ್ ಸಿಂಗಲ್ ರನ್ ಗಳಿಸಿ ರಿಂಕುಗೆ ಸ್ಟ್ರೈಕ್ ನೀಡಿದರು. ಆ ಬಳಿಕ ರಿಂಕು ಸತತ 5 ಸಿಕ್ಸರ್ ಬಾರಿಸಿ ಕೋಲ್ಕತ್ತಾಗೆ ಜಯ ತಂದುಕೊಟ್ಟರು. 21 ಎಸೆತಗಳಲ್ಲಿ ಅಜೇಯ 48 ರನ್ ಗಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News