RCB vs LSG, IPL 2023: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸೋಮವಾರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ IPL ಪಂದ್ಯದಲ್ಲಿ ಸೋತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಈ ಹೀನಾಯ ಸೋಲಿನ ನಂತರ, ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ವಿಚಿತ್ರ ರಿಯಾಕ್ಷನ್ ಕೊಟ್ಟಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ: KGF ಜೋಡಿಯ ಸ್ಪೋಟಕ ಬ್ಯಾಟಿಂಗ್ ವ್ಯರ್ಥ: ಬೃಹತ್ ಗುರಿ ತಲುಪಿ ‘ಸೂಪರ್’ ಗೆಲುವು ಸಾಧಿಸಿದ ಲಕ್ನೋ
IPL 2023 ರ ಅತ್ಯಂತ ರೋಚಕ ಪಂದ್ಯದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಪಂದ್ಯದ ಕೊನೆಯ ಎಸೆತದಲ್ಲಿ 1 ವಿಕೆಟ್‌ನಿಂದ ಸೋಲಿಸಿತು.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ರೋಚಕ ಪಂದ್ಯದ ಕೊನೆಯ ಓವರ್’ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಜಯ ಸಾಧಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 213 ರನ್’ಗಳ ಗುರಿ ನೀಡಿದ ಹೊರತಾಗಿಯೂ ಒಂದು ವಿಕೆಟ್‌ನಿಂದ ಸೋತಿತು. ಪತಿ ವಿರಾಟ್ ಕೊಹ್ಲಿಯನ್ನು ಬೆಂಬಲಿಸಲು ಅನುಷ್ಕಾ ಶರ್ಮಾ ಸೋಮವಾರ ಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದರು. ಪಂದ್ಯದ ವೇಳೆ, ಅನುಷ್ಕಾ ಶರ್ಮಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ವಿರಾಟ್ ಕೊಹ್ಲಿಗೆ ಹುರಿದುಂಬಿಸುತ್ತಿದ್ದರು, ಆದರೆ ಪಂದ್ಯದ ಅಂತ್ಯದ ವೇಳೆಗೆ ಅನುಷ್ಕಾ ಶರ್ಮಾ ಅವರಿಗೆ ಬಹಳಷ್ಟು ನೋವಾಗಿತ್ತು.
Anushka Sharma's reaction when LSG won the match on the last ball. pic.twitter.com/4MYbWMkyBA
— Raja Aman (@BeingRajaAman) April 10, 2023
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಈ ಹೀನಾಯ ಸೋಲು ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರನ್ನೂ ನಿರಾಸೆಗೊಳಿಸಿತ್ತು. ಅನುಷ್ಕಾ ಶರ್ಮಾ ಅವರ ಈ ಪ್ರತಿಕ್ರಿಯೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಲೈವ್ ಪಂದ್ಯದಲ್ಲಿ ಕ್ಯಾಮರಾಮನ್’ನ ಈ ಕೃತ್ಯಕ್ಕೆ ಕೋಪಗೊಂಡ Kaviya Maran! ಪಬ್ಲಿಕ್’ನಲ್ಲಿಯೇ ಪ್ರತಿಕ್ರಿಯಿಸಿದ್ದು ಹೀಗೆ
ಪಂದ್ಯದ ವೇಳೆ ವಿರಾಟ್ ಕೊಹ್ಲಿ ಅವರ ಇನ್ನಿಂಗ್ಸ್ ಅನುಷ್ಕಾ ಶರ್ಮಾಗೆ ಖುಷಿಯಾಗುವ ಅವಕಾಶವನ್ನೂ ನೀಡಿತು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ವಿರಾಟ್ ಕೊಹ್ಲಿ 61 ರನ್‌ಗಳ ಇನಿಂಗ್ಸ್ ಆಡಿದ್ದರು. ಈ ವೇಳೆ ವಿರಾಟ್ ಕೊಹ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮುಂದಿನ ಪಂದ್ಯವು ಏಪ್ರಿಲ್ 15 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.