Virat Kohli World Record: KKR ವಿರುದ್ಧ ಸೋಲು ಕಂಡರೂ ವಿಶ್ವ ದಾಖಲೆ ಬರೆದರು ವಿರಾಟ್ ಕೊಹ್ಲಿ! ಅದೇನದು?

Virat Kohli World Record: ಆರ್ ಸಿ ಬಿಯ ವಿರಾಟ್ ಕೊಹ್ಲಿ 37 ಎಸೆತಗಳಲ್ಲಿ 54 ರನ್ ಗಳಿಸಿ ದಿಟ್ಟ ಹೋರಾಟ ನಡೆಸಿದರು. ಈ ಮೂಲಕ ವಿರಾಟ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3015 ರನ್ ಗಳಿಸಿದ್ದಾರೆ. ಚಿನ್ನಸ್ವಾಮಿಯಲ್ಲಿ ಕೊಹ್ಲಿ ಬಿಟ್ಟರೆ ಬೇರಾವುದೇ ಆಟಗಾರ ಅಥವಾ ಒಂದೇ ಮೈದಾನದಲ್ಲಿ ಇದುವರೆಗೆ ಅತೀ ಹೆಚ್ಚು ರನ್ ಕಲೆ ಹಾಕಿಲ್ಲ

Written by - Bhavishya Shetty | Last Updated : Apr 27, 2023, 02:35 PM IST
    • ವಿರಾಟ್ ಕೊಹ್ಲಿ 37 ಎಸೆತಗಳಲ್ಲಿ 54 ರನ್ ಗಳಿಸಿ ದಿಟ್ಟ ಹೋರಾಟ ನಡೆಸಿದರು.
    • ಈ ಮೂಲಕ ವಿರಾಟ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3015 ರನ್ ಗಳಿಸಿದ್ದಾರೆ.
    • ಕೊಹ್ಲಿ ಬಿಟ್ಟರೆ ಬೇರಾವುದೇ ಆಟಗಾರ ಒಂದೇ ಮೈದಾನದಲ್ಲಿ ಇದುವರೆಗೆ ಅತೀ ಹೆಚ್ಚು ರನ್ ಕಲೆ ಹಾಕಿಲ್ಲ
Virat Kohli World Record: KKR ವಿರುದ್ಧ ಸೋಲು ಕಂಡರೂ ವಿಶ್ವ ದಾಖಲೆ ಬರೆದರು ವಿರಾಟ್ ಕೊಹ್ಲಿ! ಅದೇನದು?  title=
Virat Kohli

Virat Kohli World Record: ಕಳೆದ ದಿನ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧ ಶತಕ ಬಾರಿಸುವ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ.

ನಿನ್ನೆ ನಡೆದ ಪಂದ್ಯದಲ್ಲಿ ಕೊಲ್ಕತ್ತಾಗೆ ಈ ಗೆಲುವು ಅಗತ್ಯವಾಗಿತ್ತು, ಈ ಗೆಲುವಿನೊಂದಿಗೆ ತಂಡದ ಪ್ಲೇ ಆಫ್ ಕನಸು ಜೀವಂತವಾಗಿದೆ. ಆದರೆ ಆರ್‌ ಸಿ ಬಿಯಲ್ಲಿ ಮತ್ತೊಂದು ಬಾರಿ ಬೌಲಿಂಗ್ ಮತ್ತು ಬ್ಯಾಟಿಂಗ್ ವೈಫಲ್ಯತೆ ಕಂಡುಬಂದಿದೆ. ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಐದು ವಿಕೆಟ್‌ ನಷ್ಟಕ್ಕೆ 200 ರನ್ ಗಳಿಸಿತ್ತು

ಇದನ್ನೂ ಓದಿ: Virat Kohli: ಗೆಲ್ಲುವ ಪಂದ್ಯದಲ್ಲಿ ಸೋಲುಂಡ RCB; ತಾಳ್ಮೆ ಕಳೆದುಕೊಂಡ ಕೊಹ್ಲಿ ಕೋಪದಲ್ಲಿ ಏನು ಹೇಳಿದ್ರು ಗೊತ್ತಾ?

ಕೋಲ್ಕತ್ತಾ ನೈಟ್ ರೈಡರ್ಸ್ ಲೆಗ್ ಸ್ಪಿನ್ನರ್‌ಗಳಾದ ವರುಣ್ ಚಕ್ರವರ್ತಿ (3/27) ಮತ್ತು ಸುಯಶ್ ಶರ್ಮಾ (2/30) ಒಟ್ಟಾರೆಯಾಗಿ ಐದು ವಿಕೆಟ್ ಗಳನ್ನು ಕಬಳಿಸಿದರೆ, ಆಂಡ್ರೆ ರಸೆಲ್ (29ಕ್ಕೆ 2) ಎರಡು ವಿಕೆಟ್ ಪಡೆದಿದ್ದಾರೆ. ಬ್ಯಾಟಿಂಗ್ ವಿಚಾರ ಮಾತನಾಡುವುದಾದರೆ, ಜೇಸನ್ ರಾಯ್ (29 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 4 ಬೌಂಡರಿ ಒಳಗೊಂಡಂತೆ 56 ರನ್) ಮತ್ತು ನಾಯಕ ನಿತೀಶ್ ರಾಣಾ (21 ಎಸೆತಗಳಲ್ಲಿ 4 ಸಿಕ್ಸರ್, 3 ಬೌಂಡರಿ ಒಳಗೊಂಡಂತೆ 48 ರನ್) ಅವರ ಅರ್ಧಶತಕದಿಂದ ಐದು ವಿಕೆಟ್‌ ನಷ್ಟಕ್ಕೆ 200 ರನ್ ಗಳಿಸಿತ್ತು.

ನಂತರ ಬ್ಯಾಟಿಂಗ್’ಗೆ ಬಂದ ಆರ್ ಸಿ ಬಿಯ ವಿರಾಟ್ ಕೊಹ್ಲಿ 37 ಎಸೆತಗಳಲ್ಲಿ 54 ರನ್ ಗಳಿಸಿ ದಿಟ್ಟ ಹೋರಾಟ ನಡೆಸಿದರು. ಈ ಮೂಲಕ ವಿರಾಟ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3015 ರನ್ ಗಳಿಸಿದ್ದಾರೆ. ಚಿನ್ನಸ್ವಾಮಿಯಲ್ಲಿ ಕೊಹ್ಲಿ ಬಿಟ್ಟರೆ ಬೇರಾವುದೇ ಆಟಗಾರ ಅಥವಾ ಒಂದೇ ಮೈದಾನದಲ್ಲಿ ಇದುವರೆಗೆ ಅತೀ ಹೆಚ್ಚು ರನ್ ಕಲೆ ಹಾಕಿಲ್ಲ.

ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ 2989 ರನ್ ಗಳಿಸಿದ್ದ ಬಾಂಗ್ಲಾದೇಶದ ಮುಶ್ಫಿಕರ್ ರಹೀಮ್ ದಾಖಲೆಯನ್ನು ಇದೀಗ ಕೊಹ್ಲಿ ಹಿಂದಿಕ್ಕಿದ್ದಾರೆ.

ಅಸಮಾಧಾನ ಹೊರಹಾಕಿದ ಕೊಹ್ಲಿ:

ಇನ್ನು ಪಂದ್ಯ ಸೋಲು ಕಂಡ ಬಳಿಕ ಮಾತನಾಡಿದ ಕೊಹ್ಲಿ, “ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾವು ಅವರಿಗೆ ಪಂದ್ಯವನ್ನು ಉಡುಗೊರೆಯಾಗಿ ನೀಡಿದ್ದೇವೆ. ನಾವು ಸೋಲಲು ಅರ್ಹರು. ನಾವು ಸಾಕಷ್ಟು ವೃತ್ತಿಪರವಾಗಿ ಆಡಲಿಲ್ಲ. ಉತ್ತಮವಾಗಿ ಬೌಲಿಂಗ್ ಮಾಡಿದ್ದೇವೆ ಆದರೆ ಫೀಲ್ಡಿಂಗ್ ಗುಣಮಟ್ಟದಿಂದ ಕೂಡಿರಲಿಲ್ಲ. ಒಟ್ಟಾರೆಯಾಗಿ ಎದುರಾಳಿ ತಂಡಕ್ಕೆ ಈ ಗೆಲುವನ್ನು ಉಚಿತ ಉಡುಗೊರೆಯಂತೆ ನೀಡಿದ್ದೇವೆ. RCB ಫೀಲ್ಡರ್‌ಗಳು ನೈಟ್ ರೈಡರ್ಸ್ ನಾಯಕ ರಾಣಾಗೆ ಎರಡು ಲೈಫ್ ಲೈನ್ ನೀಡಿದರು. ರಾಯ್ ಕ್ಯಾಚ್ ಅನ್ನು ಕೂಡ ಕೈಬಿಟ್ಟರು” ಎಂದು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ:  RCB vs KKR: ಕೊನೆಯ 5 ಓವರ್’ನಲ್ಲಿ 70 ರನ್ ಸಿಡಿಸಿದ KKR: ರೋಚಕ ಪಂದ್ಯದಲ್ಲಿ ಮಿಂಚಿದ್ದು ಈ ವಿದೇಶಿ ಕ್ರಿಕೆಟಿಗ!

“ಮೈದಾನದಲ್ಲಿ ಎರಡು ಅವಕಾಶಗಳನ್ನು ಕಳೆದುಕೊಂಡಿದ್ದೇವೆ, ಆದ್ದರಿಂದ 25 ರಿಂದ 30 ರನ್‌ ಗಳನ್ನು ವ್ಯರ್ಥವಾಯ್ತು ಎಂದು ಕೊಹ್ಲಿ ಹೇಳಿದ್ದಾರೆ. ಬ್ಯಾಟಿಂಗ್ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ನಂತರ ನಾವು ನಾಲ್ಕೈದು ವಿಕೆಟ್‌ ಗಳನ್ನು ಸುಲಭವಾಗಿ ಕಳೆದುಕೊಳ್ಳಬೇಕಾಯಿತು. ಆ ವಿಕೆಟ್ ಗಳು ಔಟ್ ಆಗುವಂತಹದ ಬಾಲ್ ಆಗಿರಲಿಲ್ಲ. ಆದರೂ ಪೆವಿಲಿಯನ್ ಸೇರುವಂತಾಯಿತು. ಇನ್ನು ಉತ್ತಮ ಪಾರ್ಟ್’ನರ್ಶಿಪ್ ಕೂಡ ಪಡೆಯಲು ಸಾಧ್ಯವಾಗಲಿಲ್ಲ” ಎಂದು ಕೋಪದಿಂದ ಮಾತನಾಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News