CSK vs GT: IPL 2023ರ ಫೈನಲ್ ಮ್ಯಾಚ್ ಮಳೆಯಿಂದಾಗಿ ರದ್ದಾದರೆ ಯಾವ ತಂಡ ಚಾಂಪಿಯನ್ ಆಗುತ್ತೆ ಗೊತ್ತಾ?

CSK vs GT IPL 2023 Final: ಪ್ಲೇ ಆಫ್ ಪಂದ್ಯಗಳು ಮತ್ತು ಅಂತಿಮ ಪಂದ್ಯಗಳ ನಿಯಮಗಳು ವಿಭಿನ್ನವಾಗಿರುತ್ತವೆ. ಮತ್ತೊಂದೆಡೆ, ಐಪಿಎಲ್‌ ನಲ್ಲಿ ಲೀಗ್ ಸುತ್ತಿನಲ್ಲಿ ಪಂದ್ಯವನ್ನು ರದ್ದುಗೊಳಿಸಿದರೆ, ಎರಡೂ ತಂಡಗಳಿಗೆ ತಲಾ ಒಂದು ಅಂಕ ನೀಡಲಾಗುತ್ತದೆ. ಹೀಗಿರುವಾಗ ಮಳೆಯಿಂದಾಗಿ ಕ್ವಾಲಿಫೈಯರ್ ರದ್ದಾದರೆ ಯಾವ ತಂಡ ಈ ಬಾರಿ ಚಾಂಪಿಯನ್ ಆಗಲಿದೆ ಎಂಬ ಪ್ರಶ್ನೆ ಹಲವು ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಮೂಡಿದೆ.

Written by - Bhavishya Shetty | Last Updated : May 28, 2023, 10:30 AM IST
    • ಅಮೋಘ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿ
    • ಒಂದು ವೇಳೆ ಈ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದರೆ, ಫೈನಲ್‌ ನಲ್ಲಿ ಯಾವ ತಂಡ ಗೆಲ್ಲುತ್ತದೆ?
    • ಪ್ಲೇ ಆಫ್ ಪಂದ್ಯಗಳು ಮತ್ತು ಅಂತಿಮ ಪಂದ್ಯಗಳ ನಿಯಮಗಳು ವಿಭಿನ್ನವಾಗಿರುತ್ತವೆ
CSK vs GT: IPL 2023ರ ಫೈನಲ್ ಮ್ಯಾಚ್ ಮಳೆಯಿಂದಾಗಿ ರದ್ದಾದರೆ ಯಾವ ತಂಡ ಚಾಂಪಿಯನ್ ಆಗುತ್ತೆ ಗೊತ್ತಾ? title=
IPL Final

CSK vs GT IPL 2023 Final: ಐಪಿಎಲ್ 2023ರ ಪ್ರಶಸ್ತಿ ಪಂದ್ಯವು ಮೇ 28 ರಂದು ಅಂದರೆ ಇಂದು ಸಂಜೆ ನಡೆಯಲಿದೆ. ಈ ಅಮೋಘ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ (CSK vs GT) ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಅಹಮದಾಬಾದ್‌ ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಆದರೆ ಒಂದು ವೇಳೆ ಈ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದರೆ, ಫೈನಲ್‌ ನಲ್ಲಿ ಯಾವ ತಂಡ ಗೆಲ್ಲುತ್ತದೆ ಎಂಬುದು ಅನೇಕರ ಪ್ರಶ್ನೆಯಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ.

ಇದನ್ನೂ ಓದಿ: ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ 3 ದಿನಗಳ ಕಾಲ ಧಾರಕಾರ ಮಳೆ: ಗುಡುಗು ಮಿಂಚು ಸಹಿತ ಬಿರುಗಾಳಿ!

ಪಂದ್ಯ ರದ್ದಾದರೆ ಯಾವ ತಂಡ ಚಾಂಪಿಯನ್ ಆಗಲಿದೆ?

ಪ್ಲೇ ಆಫ್ ಪಂದ್ಯಗಳು ಮತ್ತು ಅಂತಿಮ ಪಂದ್ಯಗಳ ನಿಯಮಗಳು ವಿಭಿನ್ನವಾಗಿರುತ್ತವೆ. ಮತ್ತೊಂದೆಡೆ, ಐಪಿಎಲ್‌ ನಲ್ಲಿ ಲೀಗ್ ಸುತ್ತಿನಲ್ಲಿ ಪಂದ್ಯವನ್ನು ರದ್ದುಗೊಳಿಸಿದರೆ, ಎರಡೂ ತಂಡಗಳಿಗೆ ತಲಾ ಒಂದು ಅಂಕ ನೀಡಲಾಗುತ್ತದೆ. ಹೀಗಿರುವಾಗ ಮಳೆಯಿಂದಾಗಿ ಕ್ವಾಲಿಫೈಯರ್ ರದ್ದಾದರೆ ಯಾವ ತಂಡ ಈ ಬಾರಿ ಚಾಂಪಿಯನ್ ಆಗಲಿದೆ ಎಂಬ ಪ್ರಶ್ನೆ ಹಲವು ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಮೂಡಿದೆ.

ಫೈನಲ್ ಪಂದ್ಯಕ್ಕೆ ಐಪಿಎಲ್ ನಿಯಮ:

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ (CSK vs GT) ನಡುವಿನ ಪಂದ್ಯವನ್ನು ಪೂರ್ಣಗೊಳಿಸಲು ಹೆಚ್ಚುವರಿ 120 ನಿಮಿಷಗಳು ಲಭ್ಯವಿದೆ. IPL 2023 ರ ಫೈನಲ್‌ ನ ಕಟ್ ಆಫ್ ಸಮಯವು 7:30 ಗಂಟೆಗೆ ಪ್ರಾರಂಭವಾದರೆ ಪ್ರತಿ ಬದಿಯ 11.56 ಗಂಟೆಗಳವರೆಗೆ ಇರುತ್ತದೆ. ಒಂದು ವೇಳೆ 8 ಗಂಟೆಗೆ ಪ್ರಾರಂಭವಾದರೆ, ಮುಗಿಯುವ ಸಮಯವು 12:26 ವರೆಗೆ ಆಗಿರುವ ಸಾಧ್ಯತೆ ಇರುತ್ತದೆ. ಆದರೆ ಮಳೆಯ ಕಾರಣದಿಂದ ಒಂದೇ ಒಂದು ಚೆಂಡನ್ನು ಆಡಲು ಸಹ ಆಗದಿದ್ದರೆ, ಆಗ ಗುಂಪು ಹಂತದಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಯಾವ ತಂಡ ನಂಬರ್-1 ಸ್ಥಾನದಲ್ಲಿರುತ್ತದೆಯೋ ಆ ತಂಡವನ್ನು ವಿಜೇತ ಎಂದು ಘೋಷಿಸಲಾಗುತ್ತದೆ.

ಇದನ್ನೂ ಓದಿ: Surya Gochar: ರೋಹಿಣಿ ನಕ್ಷತ್ರದಲ್ಲಿ ಸೂರ್ಯ ಸಂಚಾರದಿಂದ ಈ ರಾಶಿಯವರ ಬದುಕಲ್ಲಿ ಭಾಗ್ಯೋದಯ: ಹಣೆಬರಹವೇ ಬದಲಾಗುವುದು!

IPL 2023 ರ ಲೀಗ್ ಸುತ್ತಿನಲ್ಲಿ 10 ಪಂದ್ಯಗಳನ್ನು ಗೆದ್ದ ಬಳಿಕ ಗುಜರಾತ್ ತಂಡವು 20 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ತನ್ನ 14 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆದ್ದು 17 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಮಳೆಯಿಂದಾಗಿ ಫೈನಲ್ ರದ್ದಾದರೆ ಗುಜರಾತ್ ಟೈಟಾನ್ಸ್ ತಂಡ ಸತತ ಎರಡನೇ ಬಾರಿ ಚಾಂಪಿಯನ್ ಆಗಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News