ಭಾರತ ತೊರೆದು ಕೆನಡಾ ಪರ ಕ್ರಿಕೆಟ್ ಆಡಲು ಮುಂದಾಗಿದ್ದ ಬುಮ್ರಾ..! ಶಾಕಿಂಗ್ ಸತ್ಯ ಬಹಿರಂಗಪಡಿಸಿದ ಪತ್ನಿ ಸಂಜನಾ ಗಣೇಶನ್

Jasprit Bumrah: ಆದರೆ ಈ ಎಲ್ಲದರ ಮಧ್ಯೆ ಜಸ್ಪ್ರೀತ್ ಬುಮ್ರಾ ಪತ್ನಿ ಸಂಜನಾ ಗಣೇಶನ್ ಶಾಕಿಂಗ್ ಸುದ್ದಿಯೊಂದನ್ನು ಬಹಿರಂಗಪಡಿಸಿದ್ದಾರೆ. ಒಂದು ಹಂತದಲ್ಲಿ ಬುಮ್ರಾ ಗುಜರಾತ್‌’ನಿಂದ ಕೆನಡಾಕ್ಕೆ ವಲಸೆ ಹೋಗುವ ಯೋಜನೆಯನ್ನು ಹೊಂದಿದ್ದರು ಎಂದು ಹೇಳಿದ್ದಾರೆ.

Written by - Bhavishya Shetty | Last Updated : Apr 12, 2024, 05:43 PM IST
    • ಸಂಜನಾ ಗಣೇಶನ್ ಶಾಕಿಂಗ್ ಸುದ್ದಿಯೊಂದನ್ನು ಬಹಿರಂಗಪಡಿಸಿದ್ದಾರೆ
    • ಭಾರತ ತೊರೆದು ಕೆನಡಾ ಪರ ಕ್ರಿಕೆಟ್ ಆಡಲು ಮುಂದಾಗಿದ್ದ ಬುಮ್ರಾ
    • ಜಿಯೋ ಸಿನಿಮಾದ ಕಾರ್ಯಕ್ರಮವೊಂದರಲ್ಲಿ ಮಾತು
ಭಾರತ ತೊರೆದು ಕೆನಡಾ ಪರ ಕ್ರಿಕೆಟ್ ಆಡಲು ಮುಂದಾಗಿದ್ದ ಬುಮ್ರಾ..! ಶಾಕಿಂಗ್ ಸತ್ಯ ಬಹಿರಂಗಪಡಿಸಿದ ಪತ್ನಿ ಸಂಜನಾ ಗಣೇಶನ್ title=
Jasprit Bumrah

Jasprit Bumrah: ಜಸ್ಪ್ರೀತ್ ಬುಮ್ರಾ ಭಾರತದ ಶ್ರೇಷ್ಠ ವೇಗದ ಬೌಲರ್. ಮುಂಬೈ ಇಂಡಿಯನ್ಸ್ ವೇಗಿ ತನ್ನ ಫ್ರಾಂಚೈಸ್‌ ಪರ ಅದ್ಭುತವಾಗಿ ಆಡುತ್ತಿರುವುದಲ್ಲದೆ, ದೇಶದ ಶ್ರೇಷ್ಠ ಪಂದ್ಯ ವಿಜೇತ ಆಟಗಾರ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಗರ್ಲ್ ಫ್ರೆಂಡ್ ಯಾರು ಗೊತ್ತಾ? ಕೊಹ್ಲಿ-ಅನುಷ್ಕಾಗೆ ಸಖತ್ ಕ್ಲೋಸ್ ಈಕೆ.. ಮೊದಲ ಬಾರಿಗೆ ಫೋಟೋ ರಿವೀಲ್

ಆದರೆ ಈ ಎಲ್ಲದರ ಮಧ್ಯೆ ಜಸ್ಪ್ರೀತ್ ಬುಮ್ರಾ ಪತ್ನಿ ಸಂಜನಾ ಗಣೇಶನ್ ಶಾಕಿಂಗ್ ಸುದ್ದಿಯೊಂದನ್ನು ಬಹಿರಂಗಪಡಿಸಿದ್ದಾರೆ. ಒಂದು ಹಂತದಲ್ಲಿ ಬುಮ್ರಾ ಗುಜರಾತ್‌’ನಿಂದ ಕೆನಡಾಕ್ಕೆ ವಲಸೆ ಹೋಗುವ ಯೋಜನೆಯನ್ನು ಹೊಂದಿದ್ದರು ಎಂದು ಹೇಳಿದ್ದಾರೆ.

ಜಿಯೋ ಸಿನಿಮಾದ ಕಾರ್ಯಕ್ರಮವೊಂದರಲ್ಲಿ ಜಸ್ಪ್ರೀತ್ ಬುಮ್ರಾ ಪತ್ನಿ ಸಂಜನಾ ಗಣೇಶನ್, “ಒಮ್ಮೆ ನೀವು ಕೆನಡಾ ದೇಶಕ್ಕೆ ಹೋಗಲು ಮನಸ್ಸು ಮಾಡಿದ್ದಿರಿ. ಅದು ಯಾಕೆ?” ಎಂಬ ಪ್ರಶ್ನೆಯನ್ನು ಕೇಳಿದ್ದಾರೆ.

ಇದನ್ನೂ ಓದಿ: ಮತ್ತೆ ಶುರುವಾಯ್ತು ಬಿಗ್ ಬಾಸ್ OTT… ದೊಡ್ಮನೆಗೆ ಎಂಟ್ರಿ ನೀಡುವ 16 ಸ್ಪರ್ಧಿಗಳ ಲಿಸ್ಟ್ ರಿವೀಲ್

ಇದಕ್ಕೆ ಉತ್ತರಿಸಿದ ಬುಮ್ರಾ, “ಇಲ್ಲಿ ಪ್ರತಿ ರಸ್ತೆಯಲ್ಲೂ ಭಾರತ ತಂಡಕ್ಕಾಗಿ ಆಡುವ ಕನಸು ಕಾಣುವ ಹುಡುಗರನ್ನು ಕಾಣಬಹುದು. ನೀವು ಯಾವಾಗಲೂ ಜೀವನದಲ್ಲಿ ಬ್ಯಾಕಪ್ ಯೋಜನೆಯನ್ನು ಹೊಂದಿರಬೇಕು. ಓದು ಮುಗಿಸಿ ಅಲ್ಲಿಗೆ ಶಿಫ್ಟ್ ಆಗೋಣ ಎಂಬ ಯೋಚನೆ ನನ್ನ ಮನದಲ್ಲಿ ಮೂಡಿತು. ನಾನಷ್ಟೇ ಅಲ್ಲ, ನಮ್ಮ ಇಡೀ ಕುಟುಂಬ ಶಿಫ್ಟ್ ಆಗಲು ತಯಾರಿ ನಡೆಸಿತ್ತು. ಆದರೆ ಅಮ್ಮನಿಗೆ ಅಲ್ಲಿಗೆ ಹೋಗುವುದು ಇಷ್ಟವಿರಲಿಲ್ಲ. ಏಕೆಂದರೆ ಅದು ನಮ್ಮ ಸಂಸ್ಕೃತಿಯಲ್ಲ ಎಂಬ ಭಾವನೆ ಅವರಲ್ಲಿತ್ತು. ಒಟ್ಟಾರೆ ಎಲ್ಲವೂ ಚೆನ್ನಾಗಿ ಆಗಿದ್ದಕ್ಕೆ ನನ್ನ ಅದೃಷ್ಟವೇ ಕಾರಣ. ಇಲ್ಲದಿದ್ದರೆ ನಾನು ಕೆನಡಾ ತಂಡಕ್ಕಾಗಿ ಕ್ರಿಕೆಟ್ ಅಥವಾ ಏನಾದರೂ ಮಾಡುತ್ತಿದ್ದೆ. ನಾನು ಭಾರತ ತಂಡ ಮತ್ತು ಮುಂಬೈ ಇಂಡಿಯನ್ಸ್‌ಗಾಗಿ ಭಾಗವಹಿಸುತ್ತಿರುವುದಕ್ಕೆ ತುಂಬಾ ಸಂತೋಷವಾಗಿದೆ” ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News