ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2ನೇ ಏಕದಿನ ಪಂದ್ಯದ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಭಾನುವಾರ ರಾಂಚಿಯಲ್ಲಿ ನಡೆದ ತಮಾಷೆಯ ಘಟನೆಯ ಕೇಂದ್ರಬಿಂದುವಾಗಿದ್ದಾರೆ. ಹೌದು ಭಾರತ ಮತ್ತು ದಕ್ಷಿಣ ಆಫ್ರಿಕಾದ ಸ್ಟ್ಯಾಂಡ್-ಇನ್ ನಾಯಕರಾದ ಶಿಖರ್ ಧವನ್ ಮತ್ತು ಕೇಶವ್ ಮಹಾರಾಜ್ ಅವರ ಪಕ್ಕದಲ್ಲಿ ನಿಂತ ಶ್ರೀನಾಥ್ ಟಾಸ್ ಸಮಯದಲ್ಲಿ ಕಾಯಿನ್ ನ್ನು ನೀಡಲು ಮರೆತಿದ್ದರು.
ಇದನ್ನೂ ಓದಿ: ರಿಶಬ್ ಪಂತ್ ಬೆನ್ನತ್ತಿ ಆಸ್ಟ್ರೇಲಿಯಾಗೆ ಹೊರಟ ನಟಿ ಊರ್ವಶಿ ರೌಟೆಲಾ...!
ಟಾಸ್ ಸಮಯದಲ್ಲಿ ಆತಿಥೇಯರ ನಾಯಕನಿಗೆ (ಈ ಸಂದರ್ಭದಲ್ಲಿ ಧವನ್) ಟಾಸ್ ನೀಡುವುದು ಮ್ಯಾಚ್ ರೆಫರಿಯ ಕೆಲಸ. ಆದರೆ, ಜೇಬಿನಿಂದ ನಾಣ್ಯ ತೆಗೆಯುವುದನ್ನೂ ಮರೆತಿದ್ದ ಶ್ರೀನಾಥ ತನ್ನದೇ ಲೋಕದಲ್ಲಿ ಕಳೆದುಹೋದಂತಿತ್ತು.
ಶ್ರೀನಾಥ್ ಅವರಿಗೆ ತನ್ನ ತಪ್ಪಿನ ಅರಿವಾದ ಕೂಡಲೇ ಜೇಬಿನಿಂದ ಕಾಯಿನ್ ತೆಗೆದು ಧವನ್ ಕೈಗೆ ಕೊಟ್ಟರು. ಆದರೆ, ಇಬ್ಬರು ನಾಯಕರು ಶ್ರೀನಾಥ್ ಅವರನ್ನು ಈ ಸಂದರ್ಭದಲ್ಲಿ ತಮಾಷೆ ಮಾಡಿರುವುದನ್ನು ವಿಡಿಯೋದಲ್ಲಿ ನೋಡಬಹುದು.
🚨 Toss Update from Ranchi 🚨
South Africa have elected to bat against #TeamIndia in the second #INDvSA ODI.
Follow the match ▶️ https://t.co/6pFItKiAHZ @mastercardindia pic.twitter.com/NKjxZRPH4e
— BCCI (@BCCI) October 9, 2022
ಸದ್ಯ ಎರಡನೇ ಏಕದಿನ ಪಂದ್ಯ ಜೆಎಸ್ ಸಿಎ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಬ್ಯಾಟಿಂಗ್ ಮಾಡುತ್ತಿದೆ.
ಸರಣಿಯ 2ನೇ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ಎರಡು ಬದಲಾವಣೆಗಳೊಂದಿಗೆ ಆಗಮಿಸಿದೆ. ರುತುರಾಜ್ ಗಾಯಕ್ವಾಡ್ ಮತ್ತು ರವಿ ಬಿಷ್ಣೋಯ್ ಬದಲಿಗೆ ಶಹಬಾಜ್ ಅಹ್ಮದ್ ಮತ್ತು ವಾಷಿಂಗ್ಟನ್ ಸುಂದರ್ ತಂಡಕ್ಕೆ ಆಗಮಿಸಿದ್ದಾರೆ.
ಇನ್ನು ಟಾಸ್ ಸಮಯದಲ್ಲಿ ಮಾತನಾಡಿದ ಭಾರತದ ಸ್ಟ್ಯಾಂಡ್-ಇನ್ ನಾಯಕ ಧವನ್, "ನಾವು ಮೊದಲು ಬೌಲಿಂಗ್ ಮಾಡುತ್ತಿದ್ದೇವೆ. ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಇಬ್ಬನಿ ಬೀಳಲಿದ್ದು ನಾವು ಅದರ ಲಾಭವನ್ನು ಪಡೆಯಲಿದ್ದೇವೆ. ನಮಲ್ಲಿ ಎರಡು ಬದಲಾವಣೆಗಳನ್ನು ಮಾಡಿದ್ದು, ವಾಷಿಂಗ್ಟನ್ ಸುಂದರ್ ಮತ್ತು ಶಹಬಾಜ್ ಅಹ್ಮದ್ ತಂಡಕ್ಕೆ ಬರಲಿದ್ದಾರೆ. ಅದರಲ್ಲಿ ಶಹಬಾಜ್ ಅಹ್ಮದ್ ಪಾದಾರ್ಪಣೆ ಮಾಡುತ್ತಿದ್ದಾರೆ” ಎಂದರು.
ಇದನ್ನೂ ಓದಿ: 77 ಎಸೆತ, 22 ಸಿಕ್ಸರ್, 205 ರನ್..ಈ ದಾಖಲೆ ಮುರಿಯುವುದುಂಟೇ? ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆಯಿದು!
ಪ್ರವಾಸಿ ತಂಡವು ಮೊದಲ ODIನಲ್ಲಿ ಜಯಭೇರಿ ಬಾರಿಸಿದ ನಂತರ 3 ಪಂದ್ಯಗಳ ODI ಸರಣಿಯಲ್ಲಿ ಭಾರತ 1-0 ಹಿನ್ನಡೆಯಲ್ಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.