Jemima Rodrigues dances: ಭಾನುವಾರ ನಡೆದ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ 2023 ಪಂದ್ಯದ ವೇಳೆ ಜೆಮಿಮಾ ರಾಡ್ರಿಗಸ್ ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ವಿಡಿಯೋವನ್ನು ಅನೇಕರು ಮೆಚ್ಚಿಕೊಂಡಿದ್ದು, ವಿಡಿಯೋವನ್ನು ಟ್ವಿಟರ್’ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ವಿರಾಟ್ ಹಾದಿ ತುಳಿದರೇ ಮಂಧಾನ? ಮಹಿಳಾ ಲೀಗ್’ನಲ್ಲೂ RCB ಹೀನಾಯ ಸೋಲು ಕಾಣಲು ಕಾರಣ ಇದುವೇ!
ಜೆಮಿಮಾ ರಾಡ್ರಿಗಸ್ ಅವರು ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡದ ಉಪನಾಯಕಿಯಾಗಿದ್ದಾರೆ. ಸ್ಟೇಡಿಯಂನಲ್ಲಿ ಮ್ಯೂಸಿಕ್ ಕೇಳಿಸಿಕೊಂಡಾಗ ಬೌಂಡರಿ ರೋಪ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಜೆಮಿಮಾ, ಯಾವುದೇ ಹಿಂಜರಿಕೆಯಿಲ್ಲದೆ ಭಾಂಗ್ರಾ ಸೇರಿದಂತೆ ವಿವಿಧ ಡ್ಯಾನ್ಸ್ ಮೂವ್ಮೆಂಟ್’ಗಳನ್ನು ಪ್ರದರ್ಶಿಸಲು ಮುಂದಾಗಿದ್ದಾರೆ.
ಇನ್ನು ಜೆಮಿಮಾ ಡ್ಯಾನ್ಸ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. 22ರ ಹರೆಯದ ಜೆಮಿಮಾ ರಾಡ್ರಿಗಸ್ ತನ್ನ ಮಹಿಳಾ ಪ್ರೀಮಿಯರ್ ಲೀಗ್ ಚೊಚ್ಚಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಸಂದರ್ಭದಲ್ಲಿ ಡ್ಯಾನ್ಸ್ ಮಾಡಿದ್ದಾರೆ.
@JemiRodrigues Here she goes again...😍 #WPL2023 #RCBvsDC @wplt20 @IPL pic.twitter.com/c9vmxXvJv0
— Ambika Kusum (@ambika_acharya) March 5, 2023
ಇನ್ನು ವಿಡಿಯೋವನ್ನು ರಿಟ್ವೀಟ್ ಮಾಡಿಕೊಂಡ ಅನೇಕರು ವಿಧವಿಧವಾದ ಕಮೆಂಟ್’ಗಳನ್ನು ಮಾಡಿದ್ದಾರೆ. “ಭಾಂಗ್ರಾ ಡ್ಯಾನ್ಸ್ ಮೂಲಕ ಧೂಳೆಬ್ಬಿಸಿದ್ದಾರೆ ಜೆಮಿಮಾ ರಾಡ್ರಿಗಸ್” ಕಮೆಂಟ್’ಗಳನ್ನು ಮಾಡಿದ್ದಾರೆ.
"ತುಂಬಾ ಮುದ್ದಾಗಿದೆ" ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರ "ಜೆಮಿ ಆನ್ ಫೈರ್" ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Butter Milk : 3 ವಾರಗಳಲ್ಲಿ ತೂಕವನ್ನು ಕಡಿಮೆಗೊಳಿಸುತ್ತೆ ಈ ಪಾನೀಯ
ಈ ಮಧ್ಯೆ ಭಾನುವಾರದ ಪಂದ್ಯವು ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆದಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವನ್ನು 60 ರನ್‌ಗಳಿಂದ ಗೆದ್ದುಕೊಂಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.