ಅಂದು ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟಿದ್ದ ಆ ಕ್ರಿಕೆಟಿಗ… ಇಂದು DSPಯಾಗಿ ನೆರೆಸಂತ್ರಸ್ತರ ಪಾಲಿಗೆ ದೇವರಾದ!

Joginder Sharma News: ಅಂದು ವೇಗದ ಬೌಲರ್ ಜೋಗಿಂದರ್ ಶರ್ಮಾ ಪ್ರಶಸ್ತಿ ಹಣಾಹಣಿಯಲ್ಲಿ ಅಂತಿಮ ಓವರ್ ಬೌಲ್ ಮಾಡಿದ್ದರು. ಭಾರತ ಯಶಸ್ವಿಯಾಗಿ ಒಟ್ಟು 157 ರನ್ ಗಳಿಸಿತ್ತು.

Written by - Bhavishya Shetty | Last Updated : Jul 18, 2023, 08:42 AM IST
    • ಬೌಲರ್ ಜೋಗಿಂದರ್ ಶರ್ಮಾ ಪ್ರಶಸ್ತಿ ಹಣಾಹಣಿಯಲ್ಲಿ ಅಂತಿಮ ಓವರ್ ಬೌಲ್ ಮಾಡಿದ್ದರು
    • ಭಾರತ ಫೈನಲ್‌ ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಟ್ರೋಫಿಯನ್ನು ತವರಿಗೆ ತಂದ ಐತಿಹಾಸಿಕ ಕ್ಷಣವದು.
    • ಕಳೆದ ತಿಂಗಳು ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ODI ವಿಶ್ವಕಪ್ 2023 ರ ವೇಳಾಪಟ್ಟಿಯನ್ನು ಪ್ರಕಟಿಸಿತು
ಅಂದು ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟಿದ್ದ ಆ ಕ್ರಿಕೆಟಿಗ… ಇಂದು DSPಯಾಗಿ ನೆರೆಸಂತ್ರಸ್ತರ ಪಾಲಿಗೆ ದೇವರಾದ!  title=
Joginder Sharma

Joginder Sharma News: 2007ರ T20 ವಿಶ್ವಕಪ್ ಗೆಲುವು ಪ್ರತಿಯೊಬ್ಬ ಭಾರತೀಯ ಕ್ರಿಕೆಟ್ ಅಭಿಮಾನಿಗಳ ನೆನಪಿನಲ್ಲಿ ಉಳಿಯುವಂತಹ ವಿಷಯ. ಮಾಜಿ ನಾಯಕ ಎಂಎಸ್ ಧೋನಿಯ ಶ್ರೇಷ್ಠ ಪಯಣದ ಆರಂಭವದು. ಭಾರತ ಫೈನಲ್‌ ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಟ್ರೋಫಿಯನ್ನು ತವರಿಗೆ ತಂದ ಐತಿಹಾಸಿಕ ಕ್ಷಣವದು.

ಇದನ್ನೂ ಓದಿ: ಕ್ರಿಕೆಟ್’ನ 3 ಸ್ವರೂಪದಲ್ಲೂ ಈ ಆಟಗಾರನೇ ಟೀಂ ಇಂಡಿಯಾದ ಮುಂದಿನ ಸೂಪರ್’ಸ್ಟಾರ್!

ಅಂದು ವೇಗದ ಬೌಲರ್ ಜೋಗಿಂದರ್ ಶರ್ಮಾ ಪ್ರಶಸ್ತಿ ಹಣಾಹಣಿಯಲ್ಲಿ ಅಂತಿಮ ಓವರ್ ಬೌಲ್ ಮಾಡಿದ್ದರು. ಭಾರತ ಯಶಸ್ವಿಯಾಗಿ ಒಟ್ಟು 157 ರನ್ ಗಳಿಸಿತ್ತು. ಧೋನಿ ಕೊನೆಯ ಓವರ್’ನಲ್ಲಿ ಜೋಗಿಂದರ್ ಕೈಗೆ ಬಾಲ್ ಕೊಟ್ಟರು. ಅದಾಗಲೇ 9 ವಿಕೆಟ್ ಕಳೆದುಕೊಂಡಿದ್ದ ಪಾಕಿಸ್ತಾನಕ್ಕೆ ಬೇಕಾಗಿದ್ದದ್ದು ಕೇವಲ 13 ರನ್. ಆದರೆ ಜೋಗಿಂದರ್ ಮ್ಯಾಜಿಕ್ ಬೌಲಿಂಗ್’ಗೆ ಮಿಸ್ಬಾ ಉಲ್ ಹಕ್ ವಿಕೆಟ್ ಹಾರಿ, ಭಾರತ ಅಂತಿಮವಾಗಿ 5 ರನ್ ಗಳ ಅಮೋಘ ಗೆಲುವು ಸಾಧಿಸಿತು.

ಅಂದು ಭಾರತ ವಿಶ್ವಕಪ್ ಗೆಲ್ಲಲು ಸಹಾಯ ಮಾಡಿದ್ದ ಜೋಗೀಂದರ್ ಶರ್ಮಾ ಇಂದು ಹರಿಯಾಣದಲ್ಲಿ ಡಿಎಸ್ಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಅಂಬಾಲಾದಲ್ಲಿ ಪ್ರವಾಹ ಪರಿಹಾರ ಕಾರ್ಯಗಳಲ್ಲಿ ಸಹಾಯ ಮಾಡುವ ಫೋಟೋಗಳನ್ನು ಜೋಗೀಂದರ್ ಟ್ವಿಟರ್’ನಲ್ಲಿ ಹಂಚಿಕೊಂಡಿದ್ದರು. ಉತ್ತರ ಭಾರತದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳು ಜಲಾವೃತವಾಗಿವೆ.

 

2007ರ ಟಿ20 ವಿಶ್ವಕಪ್ ಅಲ್ಲದೆ 2011ರ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಧೋನಿ ನಾಯಕತ್ವದಲ್ಲಿ ಗೆದ್ದುಕೊಂಡಿತ್ತು. ಅಂದಿನಿಂದ ಭಾರತಕ್ಕೆ ಯಾವುದೇ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ತವರಿನಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್ ಭಾರತ ಕ್ರಿಕೆಟ್ ತಂಡಕ್ಕೆ ಆ ಬರವನ್ನು ಕೊನೆಗಾಣಿಸುವ ಅವಕಾಶವಾಗಿದೆ.

ಇದನ್ನೂ ಓದಿ: ರೋಹಿತ್ ಬದಲಿಗೆ ಈ ಆಲ್’ರೌಂಡರ್ ಟೀಂ ಇಂಡಿಯಾದ ಹೊಸ ನಾಯಕನಾಗಿ ನೇಮಕ!

ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC), ಕಳೆದ ತಿಂಗಳು ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ODI ವಿಶ್ವಕಪ್ 2023 ರ ವೇಳಾಪಟ್ಟಿಯನ್ನು ಪ್ರಕಟಿಸಿತು. ವೇಳಾಪಟ್ಟಿಯಂತೆ ಅಕ್ಟೋಬರ್ 05 ರಂದು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯಾವಳಿ ಆರಂಭವಾಗಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ, ಸ್ಪರ್ಧೆಯ ಅತ್ಯಂತ ದೊಡ್ಡ ಪಂದ್ಯ ಎಂದೇ ಹೇಳಬಹುದು. ಅದು ಅಕ್ಟೋಬರ್ 15 ರಂದು ಅಹಮದಾಬಾದ್‌ನಲ್ಲಿಯೂ ನಡೆಯಲಿದೆ. ಭಾರತ ಕ್ರಿಕೆಟ್ ತಂಡವು ಅಕ್ಟೋಬರ್ 08 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಟೂರ್ನಿಯ ಫೈನಲ್ ನವೆಂಬರ್ 19 ರಂದು ಅಹಮದಾಬಾದ್‌ ನಲ್ಲಿ ನಡೆಯಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News