Joginder Sharma Announces Retirement: ಶರ್ಮಾ ಅವರು ಭಾರತದ ಪರ ನಾಲ್ಕು ODIಗಳಲ್ಲಿ ಮತ್ತು 2004 ರಿಂದ 2007 ರವರೆಗೆ ಅನೇಕ T20I ಗಳಲ್ಲಿ ಆಟವಾಡಿದ್ದರು. ಎರಡೂ ಸ್ವರೂಪಗಳಲ್ಲಿ ಐದು ವಿಕೆಟ್ ಗಳನ್ನು ಪಡೆದಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿ, ಅವರು ಮೊದಲ ನಾಲ್ಕು ಋತುಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಪ್ರತಿನಿಧಿಸಿದ್ದು, 16 ಪಂದ್ಯಗಳಲ್ಲಿ 12 ವಿಕೆಟ್ಗಳನ್ನು ಕಬಳಿಸಿದ್ದಾರೆ.
2007 ರಲ್ಲಿ ನಡೆದ ಭಾರತದ ವಿಶ್ವ ಟಿ 20 ಗೆಲುವಿನಲ್ಲಿ ಅಂತಿಮ ಓವರ್ ಎಸೆದ ಜೋಗಿಂದರ್ ಶರ್ಮಾ ಅವರು ದೇಶಕ್ಕೆ ಸೇವೆ ಸಲ್ಲಿಸುತ್ತಲೇ ಇದ್ದಾರೆ, ಆದರೆ, ವಿಭಿನ್ನ ರೀತಿಯ ಪಿಚ್‌ನಲ್ಲಿ. ಪ್ರಸ್ತುತ ಹರಿಯಾಣದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ಜೋಗಿಂದರ್ ಶರ್ಮಾ ಈಗ ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಹಾಯ ಮಾಡುತ್ತಿದ್ದಾರೆ.
ಮಾಜಿ ಕ್ರಿಕೆಟಿಗ ಜೋಗಿಂದರ್ ಶರ್ಮಾ ಅವರನ್ನು ICC ಬೆನ್ನುತಟ್ಟಿದೆ. 2007 ರ ಟಿ-20 ವರ್ಲ್ಡ್ ಕಪ್ ಹಿರೋ ಆಗಿದ್ದ ಜೋಗಿಂದರ್, 2020ರಲ್ಲಿ ರಿಯಲ್ ವರ್ಲ್ಡ್ ಕಪ್ ಹಿರೋ ಆಗಿದ್ದಾರೆ ಎಂದು ಶ್ಲಾಘಿಸಿದ ICC.