ಧೋನಿಯಂತೇ ವಿಕೆಟ್ ಕೀಪಿಂಗ್… DRS ತೆಗೆದುಕೊಳ್ಳವಲ್ಲೂ ಮಾಹಿಗೆ ಸರಿಸಮಾನ! ಇನ್ಮುಂದೆ ಈ ಆಟಗಾರ ODIಗೆ ಫಿಕ್ಸ್!

KS Bharat: ಡಬ್ಲ್ಯುಟಿಸಿ ಫೈನಲ್‌ ನಲ್ಲಿ ಟೀಮ್ ಇಂಡಿಯಾದ ವಿಕೆಟ್‌ ಕೀಪರ್‌ ಜವಾಬ್ದಾರಿಯನ್ನು ಕೆ.ಎಸ್. ಭರತ್ ಹೊತ್ತಿದ್ದಾರೆ. ಈ ಟೆಸ್ಟ್ ಪಂದ್ಯದಲ್ಲಿ ಭಾರತೀಯ ನಾಯಕ ರೋಹಿತ್ ಶರ್ಮಾ ಕೆ.ಎಸ್. ಭಾರತ್ ಅವರ ಮೇಲೆ ಕೂಡ ಅಪಾರವಾದ ನಂಬಿಕೆ ಇಟ್ಟಿದ್ದಾರೆ. ಭವಿಷ್ಯದಲ್ಲಿ ಟೀಮ್ ಇಂಡಿಯಾ ಗಾಗಿ ಇತರ ಸ್ವರೂಪಗಳಲ್ಲಿಯೂ ಕೂಡ ಇವರು ಆಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

Written by - Bhavishya Shetty | Last Updated : Jun 10, 2023, 06:35 PM IST
    • ಅಲ್ಲಿ ಭಾರತ ಕಠಿಣ ಸವಾಲನ್ನು ಎದುರಿಸುತ್ತಿರುವುದು ನಮಗೆಲ್ಲಾ ತಿಳಿದ ಸಂಗತಿ
    • ಟೀಮ್ ಇಂಡಿಯಾದ ವಿಕೆಟ್‌ ಕೀಪರ್‌ ಜವಾಬ್ದಾರಿಯನ್ನು ಕೆ.ಎಸ್. ಭರತ್ ಹೊರಬಹುದು
    • ಧೋನಿ ತರಹವೇ DRS ತೆಗೆದುಕೊಳ್ಳುವಲ್ಲಿ ತುಂಬಾ ಸರಿಯಾಗಿದ್ದಾರೆಂದು ಸಾಬೀತುಪಡಿಸುತ್ತಿದ್ದಾರೆ.
ಧೋನಿಯಂತೇ ವಿಕೆಟ್ ಕೀಪಿಂಗ್… DRS ತೆಗೆದುಕೊಳ್ಳವಲ್ಲೂ ಮಾಹಿಗೆ ಸರಿಸಮಾನ! ಇನ್ಮುಂದೆ ಈ ಆಟಗಾರ ODIಗೆ ಫಿಕ್ಸ್! title=
KS Bharat

KS Bharat: ಟೀಮ್ ಇಂಡಿಯಾ ಪ್ರಸ್ತುತ ಲಂಡನ್‌ ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ನ (ಡಬ್ಲ್ಯುಟಿಸಿ ಫೈನಲ್ -2023) ಅಂತಿಮ ಪಂದ್ಯವನ್ನು ಆಡುತ್ತಿದೆ. ಅಲ್ಲಿ ಭಾರತ ಕಠಿಣ ಸವಾಲನ್ನು ಎದುರಿಸುತ್ತಿರುವುದು ನಮಗೆಲ್ಲಾ ತಿಳಿದ ಸಂಗತಿ. ಆದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾದ ಆಟಗಾರೊಬ್ಬ ತನ್ನ ಶಕ್ತಿ ಪ್ರದರ್ಶನ ಮಾಡಿದ್ದು, ಮುಂಬರುವ ವಿಶ್ವಕಪ್‌ನಲ್ಲಿ ತಾನು ಆಡಬಹುದು ಎಂದು ಭರವಸೆಯನ್ನು ಮೂಡಿಸಿದ್ದಾನೆ.

ಇದನ್ನೂ ಓದಿ: ಅಹಮದಾಬಾದ್ ಅಲ್ಲ… ಈ ಮೈದಾನದಲ್ಲಿ ನಡೆಯಲಿದೆ IND vs PAK ಘರ್ಷಣೆ! ಹೊರಬಿತ್ತು ಬಿಗ್ ಅಪ್ಡೇಟ್

ಡಬ್ಲ್ಯುಟಿಸಿ ಫೈನಲ್‌ ನಲ್ಲಿ ಟೀಮ್ ಇಂಡಿಯಾದ ವಿಕೆಟ್‌ ಕೀಪರ್‌ ಜವಾಬ್ದಾರಿಯನ್ನು ಕೆ.ಎಸ್. ಭರತ್ ಹೊತ್ತಿದ್ದಾರೆ. ಈ ಟೆಸ್ಟ್ ಪಂದ್ಯದಲ್ಲಿ ಭಾರತೀಯ ನಾಯಕ ರೋಹಿತ್ ಶರ್ಮಾ ಕೆ.ಎಸ್. ಭಾರತ್ ಅವರ ಮೇಲೆ ಕೂಡ ಅಪಾರವಾದ ನಂಬಿಕೆ ಇಟ್ಟಿದ್ದಾರೆ. ಭವಿಷ್ಯದಲ್ಲಿ ಟೀಮ್ ಇಂಡಿಯಾ ಗಾಗಿ ಇತರ ಸ್ವರೂಪಗಳಲ್ಲಿಯೂ ಕೂಡ ಇವರು ಆಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಕುತೂಹಲಕಾರಿ ವಿಷಯವೆಂದರೆ ಧೋನಿ ತರಹವೇ DRS ತೆಗೆದುಕೊಳ್ಳುವಲ್ಲಿ ತುಂಬಾ ಸರಿಯಾಗಿದ್ದಾರೆಂದು ಸಾಬೀತುಪಡಿಸುತ್ತಿದ್ದಾರೆ.

ಆಂಧ್ರಪ್ರದೇಶದವರಾದ ಕೆ.ಎಸ್. ಭಾರತ್ ಅವರು ಟೆಸ್ಟ್ ಸ್ವರೂಪದಲ್ಲಿ ಮಾತ್ರ ಆಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಡಬ್ಲ್ಯುಟಿಸಿ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್‌ ನಲ್ಲಿ ಓಪನರ್ ಡೇವಿಡ್ ವಾರ್ನರ್ ಉಸ್ಮಾನ್ ಖ್ವಾಜಾ ಅವರ ಕ್ಯಾಚ್ ಪಡೆದಿದ್ದಾರೆ. ತಮ್ಮ ವೃತ್ತಿಜೀವನದ 5 ನೇ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ.

ಇದನ್ನೂ ಓದಿ: ವೈರಲ್ ವಿಡಿಯೋ..ಜಮಾಯಿ ಮೇಲೆ ಹಲ್ಲೆ! ಟಿವಿ ಶೋವೊಂದರಲ್ಲಿ ಮುಸ್ಲಿಂ ಮಹಿಳೆಯಿಂದಲೇ ತಪರಾಕಿ

29 ವರ್ಷದ ಶ್ರೀಕರ್ ಭಾರತ್ ಇನ್ನೂ ಏಕದಿನ ಮತ್ತು ಟಿ 20 ಅಂತರರಾಷ್ಟ್ರೀಯ ಸ್ವರೂಪದಲ್ಲಿ ಭಾರತವನ್ನು ಪ್ರತಿನಿಧಿಸಿಲ್ಲ, ಇನ್ನು ದೇಶೀಯ ಕ್ರಿಕೆಟ್‌ ನಲ್ಲಿ ಆಂಧ್ರವನ್ನು ಪ್ರತಿನಿಧಿಸುತ್ತಾರೆ. ಪ್ರಥಮ ದರ್ಜೆ ಕ್ರಿಕೆಟ್‌ ನಲ್ಲಿ 9 ಶತಕಗಳು ಮತ್ತು 27 ಅರ್ಧ -ಶತಕಗಳನ್ನು ಗಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News