Watch: ಕಕ್ಕಾಬಿಕ್ಕಿಯಾಗಿ ನೋಡುತ್ತ ನಿಂತ ಕ್ರಿಸ್ ಗೇಲ್, ವಿಕೆಟ್ ಚಿಣಿ ಹಾರಿಸಿಕೊಂಡು ಹೋದ Ball Of Century!

Legends League Cricket 2023: ಕ್ರಿಸ್ ಗೇಲ್ ಅನ್ನು ಬೋಲ್ಡ್ ಮಾಡುವುದು ಎಲ್ಲಾ ಬೌಲರ್ಗಳಿಗೆ ಒಂದು ದೊಡ್ಡ ಸವಾಲಿನ ಪ್ರಶ್ನೆಯಾಗಿರುತ್ತದೆ. ಆದರೆ 42 ವರ್ಷದ ಓರ್ವ ಅನುಭವಿ ಭಾರತೀಯ ಬೌಲರ್ ಕ್ರಿಸ್ ಗೇಲ್ ವಿಕೆಟ್ ಚಿಣಿ ಹಾರಿಸಿದ್ದಾರೆ. ಆದರೆ ವಿಡಿಯೋ ತುಣುಕು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಇದನ್ನು ನೋಡಿ ನೀವೂ ಕೂಡ ಇದೊಂದು ಶತಮಾನದ ಬಾಲ್ ಆಗಿದೆ ಎನ್ನುವಿರಿ. 

Written by - Nitin Tabib | Last Updated : Mar 11, 2023, 09:47 PM IST
  • ಹರ್ಭಜನ್ ಸಿಂಗ್ ತಮ್ಮ ವೃತ್ತಿ ಜೀವನದಲ್ಲಿ 103 ಟೆಸ್ಟ್,
  • 236 ODI ಮತ್ತು 28 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
  • ಅವರು ಟೆಸ್ಟ್‌ನಲ್ಲಿ 417, ODIಗಳಲ್ಲಿ 269 ಮತ್ತು T20 ಅಂತರರಾಷ್ಟ್ರೀಯ ಸ್ವರೂಪದಲ್ಲಿ ಒಟ್ಟು 25 ವಿಕೆಟ್‌ಗಳನ್ನು ಪಡೆದಿದ್ದಾರೆ.
Watch: ಕಕ್ಕಾಬಿಕ್ಕಿಯಾಗಿ ನೋಡುತ್ತ ನಿಂತ ಕ್ರಿಸ್ ಗೇಲ್, ವಿಕೆಟ್ ಚಿಣಿ ಹಾರಿಸಿಕೊಂಡು ಹೋದ Ball Of Century! title=
ಶತಮಾನದ ಚೆಂಡು !

Harbhajan Singh Viral Video: ಭಾರತದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರನ್ನು ವಿಶ್ವದ ದಂತಕಥೆ ಬೌಲರ್‌ಗಳಲ್ಲಿ ಪರಿಗಣಿಸಲಾಗುತ್ತದೆ. ಹರ್ಭಜನ್ ಮೊದಲಿಗಿಂತಲೂ ಹೆಚ್ಚು ಫಿಟ್ ಆಗಿದ್ದಾರೆ ಮತ್ತು ಅವರ ಮಾರಕ ಬೌಲಿಂಗ್ ದಾಳಿಯಲ್ಲಿ ಇದುವರೆಗೆ ಯಾವುದೇ ರೀತಿಯ ಇಳಿಕೆ ಕಂಡುಬರುತ್ತಿಲ್ಲ. ಲೆಜೆಂಡ್ಸ್ ಲೀಗ್ ಕ್ರಿಕೆಟ್ (LLC2-2023) ನಲ್ಲಿ ಇದರ ಒಂದು ನೋಟವನ್ನು ಅವರು ತೋರಿಸಿದ್ದಾರೆ. ದೋಹಾದ ವೆಸ್ಟ್ ಎಂಡ್ ಪಾರ್ಕ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ವರ್ಲ್ಡ್ ಜೈಂಟ್ಸ್ ಮತ್ತು ಇಂಡಿಯಾ ಮಹಾರಾಜ ನಡುವಿನ ಪಂದ್ಯದಲ್ಲಿ 42 ವರ್ಷದ ಹರ್ಭಜನ್ ಅನುಭವಿ ಕ್ರಿಸ್ ಗೇಲ್ ಅವರನ್ನು ಬೌಲ್ಡ್ ಬೌಲ್ಡ್ ಮಾಡಿದ್ದಾರೆ.

ಗೇಲ್ ವಿಕೆಟ್ ಚಿಣಿ ಹಾರಿಸಿದ ಹರ್ಭಜನ್
ಯೂನಿವರ್ಸ್ ಬಾಸ್ ಎಂದೇ ಫೇಮಸ್ ಆಗಿರುವ ಕ್ರಿಸ್ ಗೇಲ್ ಅವರ ಎದುರು  ಹರ್ಭಜನ್ ಸಿಂಗ್ ಎಸೆದ ಇಂತಹ ಒಂದು ಚೆಂಡನ್ನು ಗೇಲ್ ಕಕ್ಕಾಬಿಕ್ಕಿಯಾಗಿ ನೋಡುತ್ತಲೇ ನಿಂತಿದ್ದಾರೆ. 'ದೂಸರಾ' ಖ್ಯಾತಿಯ ಹರ್ಭಜನ್ ಅವರ ಈ ಚೆಂಡು ಔಟ್ ಪಿಚ್ ಆಗಿ ಫಿರ್ಕಿ ಹೊಡೆದು ನೇರವಾಗಿ ಲೆಗ್ ಸ್ಟಂಪ್‌ಗೆ ಬಡಿದು ವಿಕೆಟ್ ಚಿಣಿಗಳನ್ನು ಹಾರಿಸಿದೇ. ಗೇಲ್ ಔಟಾದ ಬಳಿಕ ಪೆವಿಲಿಯನ್‌ಗೆ ಮರಳಿದ್ದಾರೆ. ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ, ಹರ್ಭಜನ್ ಬೌಲಿಂಗ್ ಮಾಡಲು ಇಳಿದಿದ್ದರು ಮತ್ತು ಸತತ 2 ವೈಡ್‌ಗಳನ್ನು ಎಸೆದ ನಂತರ, ಅವರು ಮೊದಲ ಎಸೆತದಲ್ಲಿಯೇ ಗೇಲ್ ಅವರನ್ನು ಬೌಲ್ಡ್ ಮಾಡಿದ್ದಾರೆ. ಗೇಲ್ 6 ಎಸೆತಗಳಲ್ಲಿ ಒಂದು ಬೌಂಡರಿ ನೆರವಿನಿಂದ 4 ರನ್ ಗಳಿಸಿ ಔಟಾಗಿದ್ದಾರೆ.

ಇದನ್ನೂ ಓದಿ-Viral Video: ಬೇಕಿದ್ರೆ ಬೆಟ್ ಕಟ್ಟಿ... ಇಂಥ ಸಾಹಸ ಭರಿತ ಪ್ರೀ-ವೇಡ್ಡಿಂಗ್ ಷೂಟ್ ನೀವು ನಿಮ್ಮ್ ಲೈಫಲ್ಲೆ ನೋಡಿರ್ಲಿಕ್ಕಿಲ್ಲ!

ನಂಬಲಸಾಧ್ಯ ಬೌಲಿಂಗ್
ಕುತೂಹಲಕಾರಿಯಾಗಿ, ಇದನ್ನು ನೋಡಿದ ಹರ್ಭಜನ್ ಕೂಡ ತಮ್ಮ ಬೌಲಿಂಗ್ ಅನ್ನು ನಂಬಿಲ್ಲ. ಮೊದಮೊದಲು ಗೇಲ್ ಬ್ಯಾಟ್‌ನಿಂದ ವಿಕೆಟ್ ಕೀಪರ್ ಸ್ಟಂಪ್ಸ್ ಬೀಳಿಸುತ್ತಿದ್ದಾರೆ ಎಂಬಂತೆ ಕಂಡುಬಂದಿದೆ. ಆದರೆ, ನಂತರ ಹರ್ಭಜನ್ ಎಸೆದ ಈ ಚೆಂಡು  ಸ್ಟ್ರೈಟ್ ಲೆಗ್ ಸ್ಟಂಪ್‌ಗೆ ಬಡಿದಿರುವುದು ರಿಪ್ಲೇಯಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಇದನ್ನು ‘ಶತಮಾನದ ಚೆಂಡು’ ಎಂದು ಕರೆದರೆ ತಪ್ಪಾಗಲಾರದು.

ಇದನ್ನೂ ಓದಿ-Weird News: 9 ತಿಂಗಳು ಅಲ್ಲ 9 ವರ್ಷಗಳವರೆಗೆ ಗರ್ಭ ಧರಿಸಿದ ಮಹಿಳೆ, ನಂತರ ಆಗಿದ್ದೇನು ನೀವೇ ಓದಿ!

ಹರ್ಭಜನ್ ಕ್ರಿಕೆಟ್ ವೃತ್ತಿ ಜೀವನ ಹೇಗಿದೆ?
ಹರ್ಭಜನ್ ಸಿಂಗ್ ತಮ್ಮ ವೃತ್ತಿ ಜೀವನದಲ್ಲಿ 103 ಟೆಸ್ಟ್, 236 ODI ಮತ್ತು 28 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರು ಟೆಸ್ಟ್‌ನಲ್ಲಿ 417, ODIಗಳಲ್ಲಿ 269 ಮತ್ತು T20 ಅಂತರರಾಷ್ಟ್ರೀಯ ಸ್ವರೂಪದಲ್ಲಿ ಒಟ್ಟು 25 ವಿಕೆಟ್‌ಗಳನ್ನು ಪಡೆದಿದ್ದಾರೆ. ಈಗ ಕ್ರಿಕೆಟ್ ಬಿಟ್ಟು ರಾಜಕೀಯದ ಪಿಚ್ ನಲ್ಲಿ ಅವರು 'ದೂಸರಾ' ಎಸೆಯುತ್ತಿದ್ದಾರೆ. ಇತ್ತೀಚೆಗೆ ಅವರನ್ನು ಪಂಜಾಬ್‌ನಿಂದ ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News