ಕ್ರಿಕೆಟ್ ನಿಂದ ನಿವೃತ್ತಿ ಬಳಿಕ ಏನು ಮಾಡಲಿದ್ದಾರೆ ಕ್ಯಾಪ್ಟನ್ ಕೂಲ್ ? ಧೋನಿ ಬಿಚ್ಚಿಟ್ಟಿದ್ದಾರೆ ಅವರ ಮುಂದಿನ ಪ್ಲಾನ್ !

MS Dhoni Video:ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ಅಭಿಮಾನಿಯೊಬ್ಬ ಕ್ರಿಕೆಟ್ ಬಿಟ್ಟು ನಿಮ್ಮ ಮುಂದಿನ ಯೋಜನೆ ಏನು ಎಂದು ಪ್ರಶ್ನಿಸಿದ್ದಾರೆ.

Written by - Ranjitha R K | Last Updated : Dec 23, 2023, 01:39 PM IST
  • ಮಹೇಂದ್ರ ಸಿಂಗ್ ಧೋನಿ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್
  • ಧೋನಿ ಇನ್ನೂ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿದ್ದಾರೆ.
  • ಕ್ರಿಕೆಟ್ ಬಳಿಕ ಧೋನಿ ಮುಂದಿರುವ ಯೋಜನೆ
ಕ್ರಿಕೆಟ್ ನಿಂದ ನಿವೃತ್ತಿ ಬಳಿಕ ಏನು ಮಾಡಲಿದ್ದಾರೆ ಕ್ಯಾಪ್ಟನ್ ಕೂಲ್ ? ಧೋನಿ ಬಿಚ್ಚಿಟ್ಟಿದ್ದಾರೆ ಅವರ ಮುಂದಿನ ಪ್ಲಾನ್ ! title=

MS Dhoni Video : ಟೀಂ ಇಂಡಿಯಾಗೆ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದು ಕೊಟ್ಟ  ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಅವರು ತಮ್ಮ ನಿವೃತ್ತಿಯ ನಂತರದ ಯೋಜನೆಯ ಬಗ್ಗೆ ಮಾತನಾಡಿದ್ದಾರೆ. 2020ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಮಹೇಂದ್ರ ಸಿಂಗ್ ಧೋನಿ ಇನ್ನೂ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್  ಸಾರಥ್ಯ ವಹಿಸಿದ್ದ ಧೋನಿ, ಕಳೆದ ಋತುವಿನಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೆ ಏರಿಸಿದ್ದಾರೆ. ಮುಂಬರುವ ಋತುವಿನಲ್ಲಿ ಕೂಡಾ ಧೋನಿ ಸಿಎಸ್‌ಕೆ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.

ಕ್ರಿಕೆಟ್ ಬಳಿಕ ಧೋನಿ ಮುಂದಿರುವ ಯೋಜನೆ : 
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ಅಭಿಮಾನಿಯೊಬ್ಬ ಕ್ರಿಕೆಟ್ ಬಿಟ್ಟು ನಿಮ್ಮ ಮುಂದಿನ ಯೋಜನೆ ಏನು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಧೋನಿ, 'ನಾನು ಈ ಬಗ್ಗೆ ಯಾವತ್ತೂ ಯೋಚಿಸಿಲ್ಲ. ನಾನು ಇನ್ನೂ ಕ್ರಿಕೆಟ್ ಆಡುತ್ತಿದ್ದೇನೆ. ಐಪಿಎಲ್ ಆಡುತ್ತಿದ್ದೇನೆ. ಕ್ರಿಕೆಟ್ ನಂತರ ನಾನು ಏನು ಮಾಡುತ್ತೇನೆ ಎಂಬುದನ್ನು ಕಾದು ನೋಡಬೇಕಿದೆ ಎಂದಿದ್ದಾರೆ. ಇದೇ  ವೇಳೆ  ಕ್ರಿಕೆಟ್ ನಂತರ ನಾನು ಮಾಡಲು ಬಯಸುವ ಒಂದು ಕೆಲಸವೆಂದರೆ ಸೇನೆಯೊಂದಿಗೆ ಹೆಚ್ಚು ಸಮಯ ಕಳೆಯುವುದು ಎಂದು ಹೇಳಿದ್ದಾರೆ.  ಕಳೆದ ಕೆಲವು ವರ್ಷಗಳಿಂದ ಸೇನೆಯೊಂದಿಗೆ  ಸಮಯ ಕಳೆಯುವುದು ಸಾಧ್ಯವಾಗಿಲ್ಲ ಎಂದು ಕೂಡಾ ಹೇಳಿದ್ದಾರೆ. 

ಇದನ್ನೂ ಓದಿ : ಏಕದಿನ ಕ್ರಿಕೆಟ್‌ನಲ್ಲಿ ಈ ವರ್ಷ ಅತಿ ಹೆಚ್ಚು ಅರ್ಧಶತಕ ಗಳಿಸಿದವರು ಯಾರು?

ಲೆಫ್ಟಿನೆಂಟ್ ಕರ್ನಲ್  ಧೋನಿ : 
ಮಾಜಿ ನಾಯಕ ಧೋನಿ ಟೆರಿಟೋರಿಯಲ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಯಲ್ಲಿದ್ದಾರೆ. 2011 ರಲ್ಲಿ, ಅವರು ಪ್ಯಾರಾಚೂಟ್ ರೆಜಿಮೆಂಟ್‌ನೊಂದಿಗೆ ತರಬೇತಿ ಪಡೆಡಿದ್ದು, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 42 ವರ್ಷದ ಧೋನಿ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗಿದ್ದಾರೆ. ಮುಂಬರುವ ಋತುವಿನಲ್ಲಿಯೂ ಅವರು ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ನಾಯಕತ್ವದಲ್ಲಿ ಚೆನ್ನೈ 5 ಬಾರಿ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. 

 

ಮುಂಬರುವ ಋತುವಿನಲ್ಲಿ ಚೆನ್ನೈ ತಂಡ : 
ವಿಕೆಟ್ ಕೀಪರ್: ಎಂಎಸ್ ಧೋನಿ (ನಾಯಕ), ಡೆವೊನ್ ಕಾನ್ವೆ, ಅವನೀಶ್ ರಾವ್ ಅರಾವಳಿ, ರಿತುರಾಜ್ ಗಾಯಕ್ವಾಡ್, ಶೇಖ್ ರಶೀದ್, ಅಜಿಂಕ್ಯ ರಹಾನೆ, ಸಮೀರ್ ರಿಜ್ವಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗಾರ್ಕರ್, ರವೀಂದ್ರ ಜಡೇಜಾ, ಮಿಚೆಲ್ ಸೆಂಟ್ರನರ್, ಅಜಯ್ ಮಂಡಲ್, ನಿಶಾಂತ್ ಸಿಂಧೂ,  ರಚಿನ್ ರವೀಂದ್ರ,  ಡೇರಿಲ್ ಮಿಚೆಲ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮತಿಶ ಪತಿರಾನ, ಸಿಮರ್ಜೀತ್ ಸಿಂಗ್, ಪ್ರಶಾಂತ್ ಸೋಲಂಕಿ, ಮಹೇಶ್ ಟೀಕ್ಷನ್, ಮುಸ್ತಫಿಜುರ್ ರೆಹಮಾನ್, ಮುಖೇಶ್ ಚೌಧರಿ.

ಇದನ್ನೂ ಓದಿ : ಟೆಸ್ಟ್‌ ಪಂದ್ಯಕ್ಕೂ ಮುನ್ನ ತವರಿಗೆ ಮರಳಿದ "ವಿರಾಟ್‌ ಕೋಹ್ಲಿ"

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
.

Trending News