ಧೋನಿ ನಿವೃತ್ತಿ ವದಂತಿ ಮಧ್ಯೆ ಮಹಿಯ ಬಾಲ್ಯದ ಕೋಚ್ ಮಹತ್ವದ ಹೇಳಿಕೆ

ಐಸಿಸಿ ವಿಶ್ವಕಪ್ 2019ರ ಸೆಮಿಫೈನಲ್ ಪಂದ್ಯದ ನಂತರ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇದುವರೆಗೆ ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ.

Last Updated : May 29, 2020, 11:25 AM IST
ಧೋನಿ ನಿವೃತ್ತಿ ವದಂತಿ ಮಧ್ಯೆ ಮಹಿಯ ಬಾಲ್ಯದ ಕೋಚ್ ಮಹತ್ವದ ಹೇಳಿಕೆ title=

ನವದೆಹಲಿ: ಭಾರತದ ಮಾಜಿ ನಾಯಕ ಎಂ.ಎಸ್.ಧೋನಿ  (MS Dhoni) ಅವರು ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಬಗ್ಗೆ ಆಗಾಗ್ಗೆ ಚರ್ಚೆ ನಡೆಯುತ್ತಲೇ ಇದೆ. ಧೋನಿ ನಿವೃತ್ತಿಯ ಸುದ್ದಿ ಕಳೆದ 2 ದಿನಗಳಿಂದ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ. ಧೋನಿ ಅವರ ಪತ್ನಿ ಸಾಕ್ಷಿ ಈ ವರದಿಗಳ ಬಗ್ಗೆ ಮೊದಲು ಕೋಪಗೊಂಡರು ಮತ್ತು ಧೋನಿಯ ವಿಮರ್ಶಕರಿಗೆ ಸೂಕ್ತ ಉತ್ತರ ನೀಡಿದರು ಮತ್ತು ಇದು ಕೇವಲ ವದಂತಿಯಷ್ಟೇ ಸತ್ಯವಲ್ಲ ಎಂದು ಗುಡುಗಿದರು. ಸಾಕ್ಷಿ ನಂತರ ಧೋನಿಯ ಬಾಲ್ಯದ ತರಬೇತುದಾರ ಕೇಶವ್ ಬ್ಯಾನರ್ಜಿ ಕೂಡ ಈ ವಿಷಯದ ಬಗ್ಗೆ ಮೌನ ಮುರಿದಿದ್ದಾರೆ. ಅವರ ನಿವೃತ್ತಿಯ ಬಗ್ಗೆ ತಮ್ಮ ಆಪ್ತರಿಗೆ ಕರೆ ಮಾಡಿ ಮಾತುನಾಡುವವರ ಪಟ್ಟಿಯಲ್ಲಿ ಧೋನಿ ಇಲ್ಲ ಎಂದು ಅವರು ಹೇಳಿದ್ದಾರೆ.

ಜನರು ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಹಿಂದೆ ಏಕೆ ಬಿದ್ದಿದ್ದಾರೆ ಎಂದು ನನಗೆ ತಿಳಿಯುತ್ತಿಲ್ಲ ಎಂದು ಹೇಳಿಕೆ ನೀಡಿರುವ ಕೋಚ್ ಬ್ಯಾನರ್ಜಿ ಧೋನಿ ಕ್ರಿಕೆಟ್‌ಗೆ ವಿದಾಯ ಹೇಳಬೇಕೆಂದು ಜನರು ಯಾಕೆ ಬಯಸುತ್ತಾರೆ. ಸರಿಯಾದ ಸಮಯದಲ್ಲಿ ತಮ್ಮ ನಿವೃತ್ತಿಯನ್ನು ನಿರ್ಧರಿಸುವ ಆಟಗಾರರಲ್ಲಿ ಧೋನಿ ಒಬ್ಬರು. ಆದ್ದರಿಂದ ನಿವೃತ್ತಿಯ ಸಮಯ ಬಂದಿದೆ ಎಂದು ಧೋನಿ ಭಾವಿಸಿದಾಗ, ಅದನ್ನು ಸ್ವತಃ ಘೋಷಿಸುತ್ತಾರೆ. ವಾಸ್ತವವಾಗಿ, ಧೋನಿ ಸ್ವತಃ ಈ ಮರೆಮಾಚುವಿಕೆಯನ್ನು ನಿಲ್ಲಿಸಿ ಆಟವಾಡುವ ತವಕದಲ್ಲಿದ್ದಾರೆ. ಒಂದೊಮ್ಮೆ ಧೋನಿ ನಿವೃತ್ತರಾಗ ಬಯಸಿದರೆ ಅದನ್ನು ಖುದ್ದಾಗಿ ತನ್ನ ಪ್ರೀತಿ ಪಾತ್ರರಿಗೆ ತಿಳಿಸುತ್ತಾರೆ ಎಂದಿದ್ದಾರೆ.

ಸುದ್ದಿಸಂಸ್ಥೆಯೊಂದಿಗಿನ ಸಂಭಾಷಣೆಯ ಸಮಯದಲ್ಲಿ ಧೋನಿ ನಿವೃತ್ತಿಗೆ ಸಂಬಂಧಿಸಿದಂತೆ ಅಸಮಾಧಾನಗೊಂಡ ಬ್ಯಾನರ್ಜಿ ಧೋನಿ ಜನರನ್ನು ಕರೆದು ನಾನು ನಿವೃತ್ತಿ ಹೊಂದಿದ್ದೇನೆ ಎಂದು ಹೇಳುವ ರೀತಿಯ ವ್ಯಕ್ತಿಯಲ್ಲ. ತನ್ನ ನಿವೃತ್ತಿಯನ್ನು ಹೇಗೆ ಮತ್ತು ಯಾವ ಸಂದರ್ಭದಲ್ಲಿ ಘೋಷಿಸಬೇಕು ಎಂಬ ಬಗ್ಗೆ ಅವರಿಗೆ ತಿಳಿದಿದೆ. ಸಮಯ ಬಂದಾಗ ಅವರು ಬಿಸಿಸಿಐಗೆ ಮಾಹಿತಿ ನೀಡುತ್ತಾರೆ. ಜೊತೆಗೆ ಅವರು ಟೆಸ್ಟ್ನಿಂದ ನಿವೃತ್ತರಾದಾಗ ಮಾಡಿದಂತೆ ಪತ್ರಿಕಾಗೋಷ್ಠಿಯನ್ನು ಕರೆದು ಮಾಡಬೇಕಾದ ಎಲ್ಲ ಕೆಲಸಗಳನ್ನು ಮಾಡುತ್ತಾರೆ ಎಂದರು.

ಧೋನಿ ಐಪಿಎಲ್‌ನಲ್ಲಿ ಎಷ್ಟು ಫಿಟ್ ಆಗಿದ್ದಾರೆಂದು ನಿಮಗೆ ತಿಳಿಯುತ್ತದೆ. ಟಿ 20 ವಿಶ್ವಕಪ್ ಮುಂದೂಡಲ್ಪಟ್ಟಿದ್ದರೆ ಮತ್ತು ಮುಂದಿನ ವರ್ಷ ನಡೆದರೂ ಕೂಡ ಅವರು ಕ್ರಿಕೆಟ್ ಆಡಬಹುದು ಎಂದು ಬ್ಯಾನರ್ಜಿ ಆಶಯ ವ್ಯಕ್ತಪಡಿಸಿದ್ದಾರೆ.

ಬ್ಯಾನರ್ಜಿಗೆ ಮುಂಚಿತವಾಗಿ ಧೋನಿಯ ಪತ್ನಿ ಸಾಕ್ಷಿ ಕೂಡ ನಿವೃತ್ತಿಯ ಸುದ್ದಿಯನ್ನು ನಿರಾಕರಿಸಿದ್ದರು ಮತ್ತು ತಮ್ಮ ಟ್ವೀಟ್ ನಲ್ಲಿ  'ಇದೆಲ್ಲವೂ ಕೇವಲ ವದಂತಿಯಾಗಿದೆ! ಲಾಕ್‌ಡೌನ್ ಜನರನ್ನು ಮಾನಸಿಕವಾಗಿ ಅಸ್ಥಿರಗೊಳಿಸಿದೆ ಎಂದು ನಾನು ಅರ್ಥಮಾಡಿಕೊಳ್ಳಬಲ್ಲೆ! #DhoniRetires ಟ್ವೀಟರ್‌ಗಳನ್ನು ಮಾಡುವವರು ನಿಮ್ಮ ಕೆಲಸವನ್ನು ಮಾಡಿ ಎಂದು ಬರೆದಿದ್ದರು.
 

Trending News