Bunty Sajdeh: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಡ್ಯಾಶಿಂಗ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ಫಿಟ್‌ನೆಸ್, ಬ್ಯಾಟಿಂಗ್ ಮತ್ತು ಅವರ ಜೀವನಶೈಲಿಯಿಂದಲೇ ಸಖತ್ ಫೇಮಸ್ ಆಗಿದ್ದಾರೆ. ಇನ್ನು ವಿರಾಟ್ ಆಸ್ತಿ ಮೌಲ್ತ 1,040 ಕೋಟಿ ರೂ. ಕ್ರಿಕೆಟ್ ನಂತರ, ಅವರ ಆದಾಯದ ಮೂಲವೆಂದರೆ ಜಾಹಿರಾತು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವುದು.
ಇದನ್ನೂ ಓದಿ: Team Indiaದ ಈ ಆಟಗಾರನ 13 ವರ್ಷಗಳ ಸುದೀರ್ಘ ವೃತ್ತಿಜೀವನ ಅಂತ್ಯ!
ವಿರಾಟ್ ಆಗಾಗ್ಗೆ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಫಿಟ್‌ನೆಸ್ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ, ಇದರಿಂದ ಅವರ ಅಭಿಮಾನಿಗಳು ಅವರೊಂದಿಗೆ ಸಂಪರ್ಕದಲ್ಲಿರುತ್ತಾರೆ ಮತ್ತು ಪ್ರತಿಯೊಬ್ಬರೂ ಅವರ ಕ್ರೀಡೆಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಬಯಸುತ್ತಾರೆ. ಆದರೆ ವಿರಾಟ್ ಅವರ ಈ ಎಲ್ಲಾ ನಿರ್ವಹಣೆಯ ಹಿಂದೆ ಅವರ ಮ್ಯಾನೇಜರ್ ಬಂಟಿ ಸಜ್ದೇಹ್ ಇದ್ದಾರೆ ಎಂಬುದು ಯಾರಿಗಾದರೂ ತಿಳಿದಿದೆಯೇ?
ಬಂಟಿ ಸಜ್ದೇಹ್ ವಿರಾಟ್ ಅವರ ಮ್ಯಾನೇಜರ್. ಮಾತ್ರವಲ್ಲದೆ ಸಲ್ಮಾನ್ ಖಾನ್ ಮತ್ತು ರೋಹಿತ್ ಶರ್ಮಾ ಅವರ ನೆಂಟ ಕೂಡ ಹೌದು.
ಬಂಟಿ ಸಜ್ದೇಹ್ ಕಾರ್ನರ್’ಸ್ಟೋನ್ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯ ಮಾಲೀಕರಾಗಿದ್ದಾರೆ. ಮುಂಬೈನ ಕ್ಯಾಂಪಿಯನ್ ಶಾಲೆಯಲ್ಲಿ ಓದಿದ ಬಂಟಿ, ಹೆಚ್ಚಿನ ಅಧ್ಯಯನಕ್ಕಾಗಿ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿರುವ ಬಾಂಡ್ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದರು. ಬಂಟಿ ತಮ್ಮ 25ನೇ ವಯಸ್ಸಿನಲ್ಲಿ ಮನರಂಜನಾ, ಮಾಧ್ಯಮ ಮತ್ತು ಸಂವಹನ ಕಂಪನಿಯಾದ ಪರ್ಸೆಪ್ಟ್ ಕಂಪನಿಯನ್ನು ಸೇರಿದರು. ನಂತರ ಎಂಟರ್ಟೈನ್ಮೆಂಟ್ ವಿಭಾಗದ ಮುಖ್ಯಸ್ಥರಾಗಿ ಗ್ಲೋಬೋ ಸ್ಪೋರ್ಟ್ ಸೇರಿದರು.
ಬಂಟಿ ಅವರು ಕ್ರೀಡೆಯಲ್ಲಿ ಬಹಳಷ್ಟು ಆಸಕ್ತಿ ಹೊಂದಿದ್ದ ಕಾರಣ, 2008 ರಲ್ಲಿ ತಮ್ಮ ಕಾರ್ನರ್‌ಸ್ಟೋನ್ ಕಂಪನಿಯನ್ನು ಸ್ಥಾಪಿಸಿದರು. ಇದರ ನಂತರ, ಬಂಟಿ ಖ್ಯಾತ ಬಾಲಿವುಡ್ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್ ಅವರೊಂದಿಗೆ 2020 ರಲ್ಲಿ ಧರ್ಮ ಕಾರ್ನರ್‌ಸ್ಟೋನ್ ಏಜೆನ್ಸಿ (ಡಿಸಿಎ) ಅನ್ನು ತೆರೆದರು. ಈ ಏಜೆನ್ಸಿಯ ಅವರ ಮೊದಲ ಗ್ರಾಹಕ ಸೌತ್ ಸೂಪರ್‌ಸ್ಟಾರ್ ವಿಜಯ್ ದೇವರಕೊಂಡ ಮತ್ತು ನಟಿ ಅನನ್ಯಾ ಪಾಂಡೆ.
ಬಂಟಿ ಸಜ್ದೇಹ್ ತನ್ನ ಏಜೆನ್ಸಿ ಮತ್ತು ಕಂಪನಿಯಿಂದ ಸಾಕಷ್ಟು ಹಣ ಸಂಪಾದನೆ ಮಾಡುತ್ತಿದ್ದಾರೆ. ಅವರ ನಿವ್ವಳ ಮೌಲ್ಯ ಸುಮಾರು 50 ಕೋಟಿ ರೂ. ಅವರ ನಿರ್ವಹಣಾ ಕಂಪನಿ ವಿರಾಟ್ ಕೊಹ್ಲಿಯಲ್ಲದೆ, ಕೆ.ಎಲ್. ರಾಹುಲ್ ಮತ್ತು ಸಾನಿಯಾ ಮಿರ್ಜಾ ಅವರಂತಹ ಕ್ರೀಡಾ ಪಟುಗಳನ್ನು ನಿಭಾಯಿಸುತ್ತಾರೆ.
ಬಂಟಿಯವರ ಈ ಕಂಪನಿಯಲ್ಲಿ, ಅವರ ಸಹೋದರಿ ರಿತಿಕಾ ಸಜ್ದೇಹ್ ಕ್ರೀಡಾ ವ್ಯವಸ್ಥಾಪಕರಾಗಿದ್ದರು. ರಿತಿಕಾ ಈಗ ಕ್ರಿಕೆಟಿಗ ರೋಹಿತ್ ಶರ್ಮಾ ಪತ್ನಿ. ಮದುವೆಗೂ ಮುನ್ನ ಬಂಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಮ್ಯಾನೇಜರ್ ಆಗಿದ್ದರು. ಇನ್ನು ಈ ಸಂಬಂಧದ ಅನುಸಾರ ರೋಹಿತ್, ಬಂಟಿ ಅವರಿಗೆ ಭಾವ ಆಗುತ್ತಾರೆ.
ಇನ್ನು ಬಂಟಿ ಅವರು ಸೊಹೈಲ್ ಖಾನ್ ಅವರ ಮಾಜಿ ಪತ್ನಿ ಸೀಮಾ ಸಜ್ದೇಹ್ ಅವರ ಸಹೋದರರಾಗಿರುವ ಕಾರಣ ಸಲ್ಮಾನ್ ಖಾನ್ ಅವರಿಗೂ ನೆಂಟನಾಗುತ್ತಾರೆ. ಆದರೆ 24 ವರ್ಷಗಳ ದಾಂಪತ್ಯ ನಂತರ 2022 ರಲ್ಲಿ ಸೋಹೈಲ್ ಖಾನ್ ತನ್ನ ಪತ್ನಿ ಸೀಮಾಗೆ ವಿಚ್ಛೇದನ ನೀಡಿದರು. ಬಂಟಿ ಸಜ್ದೇಹ್ ಅವರು 2012 ರಲ್ಲಿ ಮಾಡೆಲ್ ಅಂಬಿಕಾ ಚೌಹಾನ್ ಅವರನ್ನು ವಿವಾಹವಾದರು. ಇದೀಗ ಅವರೂ ಸಹ ವಿಚ್ಛೇದನ ನೀಡಿ ಬೇರ್ಪಟ್ಟಿದ್ದಾರೆ.
ಇದನ್ನೂ ಓದಿ: ಕೊಹ್ಲಿಯೂ ಮಾಡಲು ಅಸಾಧ್ಯ ಎಂದ ವಿವಿಎಸ್ ಲಕ್ಷ್ಮಣ್’ರ ಆ ಶ್ರೇಷ್ಠ ದಾಖಲೆ ಮುರಿದೇಬಿಟ್ಟರು ಆರ್. ಅಶ್ವಿನ್!
ಇನ್ನು ಸ್ಪೋರ್ಟ್ಸ್ ಕಂಪನಿ ಪೂಮಾ ಜೊತೆ ವಿರಾಟ್ ಕೊಹ್ಲಿ 100 ಕೋಟಿ ರೂಪಾಯಿಗಳ ಮೆಗಾ ಡೀಲ್ ಅನ್ನು ಬಂಟಿ ಸಜ್ದೇಹ್ ಮಾಡಿದ್ದಾರೆ. ಇದಲ್ಲದೇ ಕಾರ್ನರ್‌ಸ್ಟೋನ್ ಕಂಪನಿಯ ಕಾರಣದಿಂದ ವಿರಾಟ್ MRF, Tissot, Pepsi, Colgate, Samsonite, Valvoline, Audi ಮತ್ತು PNB ಗಳಿಂದ ಡೀಲ್‌ಗಳನ್ನು ಪಡೆದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.