ತಂದೆ-ತಾಯಿ ಕೊಂದು ಪರಾರಿಯಾಗಿದ್ದ ಪಾಪಿ ಮಗನ ಬಂಧನ

Bengaluru Parents Murder Case: ಬಳ್ಳಾರಿ ರಸ್ತೆಯ ಬ್ಯಾಟರಾಯನಪುರ ನಿವಾಸಿಗಳಾದ ಭಾಸ್ಕರ್(61) ಹಾಗೂ ಶಾಂತಾ (60)  ದಂಪತಿ ಮಗನಿಂದಲೇ‌ ಕೊಲೆಯಾದವರು. 

Written by - VISHWANATH HARIHARA | Edited by - Bhavishya Shetty | Last Updated : Jul 22, 2023, 09:52 AM IST
    • ತಂದೆ- ತಾಯಿಯನ್ನೇ ಕಬ್ಬಿಣದ ರಾಡ್‌’ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ ಮಗ
    • ಕೊಲೆ ಮಾಡಿ ಮಡಿಕೇರಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ
    • ಕೈಗೊಂಡಿದ್ದ ಪೊಲೀಸರು ನಾಲ್ಕು ದಿನದ ನಂತರ ಆರೋಪಿಯನ್ನು ಬಂಧಿಸಿದ್ದಾರೆ
ತಂದೆ-ತಾಯಿ ಕೊಂದು ಪರಾರಿಯಾಗಿದ್ದ ಪಾಪಿ ಮಗನ ಬಂಧನ  title=
Bengaluru News

Bengaluru Parents Murder Case: ಬೆಂಗಳೂರು: ತಂದೆ- ತಾಯಿಯನ್ನೇ ಕಬ್ಬಿಣದ ರಾಡ್‌’ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿ  ಪರಾರಿಯಾಗಿದ್ದ ಮಗನನ್ನು ಕೊಡಿಗೆಹಳ್ಳಿ  ಪೊಲೀಸರು ಬಂಧಿಸಿದ್ದಾರೆ. ಶರತ್(25) ಬಂಧಿತ ಆರೋಪಿ. ಕೊಲೆ ಮಾಡಿ ಮಡಿಕೇರಿಯಲ್ಲಿ ತಲೆಮರೆಸಿಕೊಂಡಿದ್ದ ಈತನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗಿದೆ.‌

ಇದನ್ನೂ ಓದಿ: 30 ವರ್ಷಗಳ ಬಳಿಕ ಈ ರಾಶಿಯವರ ಬಾಳಲ್ಲಿ ಶ್ರೀಮಂತಿಕೆ ಪ್ರವೇಶ: ಹಣದ ಮಳೆ ಗ್ಯಾರಂಟಿ: ಹೆಜ್ಜೆಹೆಜ್ಜೆಗೂ ನೆರಳಾಗುವನು ಶನಿ

ಬಳ್ಳಾರಿ ರಸ್ತೆಯ ಬ್ಯಾಟರಾಯನಪುರ ನಿವಾಸಿಗಳಾದ ಭಾಸ್ಕರ್(61) ಹಾಗೂ ಶಾಂತಾ (60)  ದಂಪತಿ ಮಗನಿಂದಲೇ‌ ಕೊಲೆಯಾದವರು.  ಆರೋಪಿ ಮಗ ಶರತ್ ಪದವೀಧರನಾಗಿದ್ದ.  ಆಗಾಗ ಕುಡಿದು ಬಂದು ತಂದೆ ತಾಯಿ ಮೇಲೆ  ಹಲ್ಲೆ ನಡೆಸುತ್ತಿದ್ದ. ಅಂತೆಯೇ ಸೋಮವಾರ ರಾತ್ರಿ ತಂದೆ ತಾಯಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದ ಪೊಲೀಸರು ನಾಲ್ಕು ದಿನದ ನಂತರ ಆರೋಪಿಯನ್ನು ಬಂಧಿಸಿದ್ದಾರೆ.

ಮಂಗಳೂರು ಮೂಲದ ಭಾಸ್ಕರ್ ದಂಪತಿ 13 ವರ್ಷಗಳಿಂದ ಬ್ಯಾಟರಾಯನಪುರದಲ್ಲಿ ಸ್ವಂತ ಮನೆಯಲ್ಲಿ ವಾಸವಾಗಿದ್ದರು. ಕೊಡಿಗೆಹಳ್ಳಿ ಸಮೀಪ ತಮ್ಮ ಸ್ನೇಹಿತರ ಕ್ಯಾಂಟೀನ್‌ನಲ್ಲಿ ಕ್ಯಾಶಿಯರ್ ಆಗಿದ್ದರು. ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಶಾಂತಾ ನಿವೃತ್ತರಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು ಮನೆಯ ಮಹಡಿ ಮೇಲಿನ ಕೊಠಡಿಯಲ್ಲಿ 2ನೇ ಮಗ ಶರತ್ ವಾಸವಿದ್ದ. ಮೊದಲನೇ ಮಗ ಸಜಿತ್ ವಿವಾಹವಾಗಿ ಪ್ರತ್ಯೇಕವಾಗಿ ಕೊಡಿಗೆಹಳ್ಳಿಯಲ್ಲಿ ನೆಲೆಸಿದ್ದ. ಇನ್ನೂ ಕೆಲಸದ ನಿಮಿತ್ತ ಭಾಸ್ಕರ್‌ಗೆ ಕ್ಯಾಂಟೀನ್ ಸಿಬ್ಬಂದಿ ಮಂಗಳವಾರ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸದೆ ಇದ್ದಾಗ ಕ್ಯಾಂಟೀನ್ ಸಿಬ್ಬಂದಿ, ಮೃತರ ಹಿರಿಯ ಪುತ್ರನಿಗೆ ಕಾಲ್ ಮಾಡಿ ತಂದೆ ಬಗ್ಗೆ ವಿಚಾರಿಸಿದ್ದಾರೆ. ಆತಂಕಗೊಂಡ ಸಜಿತ್ ತಾಯಿ ಮೊಬೈಲ್‌ಗೆ ಕರೆ ಮಾಡಿದಾಗಲೂ ಪ್ರತಿಕ್ರಿಯೆ ಬಂದಿಲ್ಲ. ಮತ್ತಷ್ಟು ಗಾಬರಿಗೊಂಡ ಸಜಿತ್ ತಕ್ಷಣ ಪಕ್ಕದ ಮನೆಯವರಿಗೆ ಕರೆ ಮಾಡಿ ಮನೆಗೆ ಹೋಗಿ ತಂದೆ-ತಾಯಿಗೆ ಏನಾಗಿದೆ ನೋಡುವಂತೆ ಹೇಳಿದ್ದಾರೆ.

ಇದನ್ನೂ ಓದಿ: ಶತಕ ಸಿಡಿಸಿ ವಿಶ್ವದಾಖಲೆ ಬರೆದರೂ ಟೆಸ್ಟ್’ನಲ್ಲಿ ಕೊಹ್ಲಿಗೆ ಆಘಾತ: ಫ್ಯಾನ್ಸ್ ಕಣ್ಣೀರಿಗೆ ಕಾರಣವಾಯ್ತು ಆ ಒಂದು ಎಸೆತ..!

ಭಾಸ್ಕರ್ ಅವರ ಮನೆಗೆ  ತೆರಳಿದಾಗ ಅವಳಿ ಕೊಲೆ ಕೃತ್ಯ ಬೆಳಕಿಗೆ ಬಂದಿತ್ತು. ಹೆತ್ತವರನ್ನು ತಮ್ಮನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಕೊಡಿಗೆಹಳ್ಳಿ ಠಾಣೆಗೆ ಅಣ್ಣ ಸಜಿತ್ ದೂರು ನೀಡಿದ್ದರು. ಈ ದೂರಿನನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News