Sachin ಇರುವ ಎಲೀಟ್ ಗ್ರೂಪ್ ಗೆ Mithali Raj, ಇಲ್ಲಿದೆ ಮಿಥಾಲಿಯ ವಿಶಿಷ್ಟ ವಿಶ್ವ ದಾಖಲೆ

Mithali Raj: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಜೊತೆಗೆ ಮಿಥಾಲಿ ರಾಜ್ (Mithali Raj) ಕೂಡ ಎಲೈಟ್ ಕ್ಲಬ್ ಸೇರಿದ್ದಾರೆ. ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವ ಮಿಥಾಲಿ ಪ್ರಸ್ತುತ ಆರನೇ ವಿಶ್ವಕಪ್ ನಲ್ಲಿ ಆಡುತ್ತಿದ್ದಾರೆ.

Written by - Nitin Tabib | Last Updated : Mar 6, 2022, 02:36 PM IST
  • ಸಚಿನ್ ತೆಂಡೂಲ್ಕರ್ ಜೊತೆಗೆ ಎಲೀಟ್ ಕ್ಲಬ್ ಗೆ ಸೇರಿದ ಮಿಥಾಲಿ ರಾಜ್
  • ಆರನೇ ವಿಶ್ವಕಪ್ ಆಡುತ್ತಿರುವ ಮಿಥಾಲಿ ರಾಜ್
  • ಈ ದಾಖಲೆ ನಿರ್ಮಿಸಿರುವ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ
Sachin ಇರುವ ಎಲೀಟ್ ಗ್ರೂಪ್ ಗೆ Mithali Raj, ಇಲ್ಲಿದೆ ಮಿಥಾಲಿಯ ವಿಶಿಷ್ಟ ವಿಶ್ವ ದಾಖಲೆ title=
Mithali Raj (File Photo)

ಮೌಂಟ್ ಮೌಂಗನುಯಿ: Women's World Cup 2022 - ಐಸಿಸಿ ಮಹಿಳಾ ವಿಶ್ವಕಪ್-2022 (ICC Women's World Cup 2022) ರಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವ ನಾಯಕಿ ಮಿಥಾಲಿ ರಾಜ್ ಭಾನುವಾರ ಇತಿಹಾಸ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. 2022ರ ವಿಶ್ವಕಪ್‌ನಲ್ಲಿ ತನ್ನ ಸಾಂಪ್ರದಾಯಿಕ  ಎದುರಾಳಿ ಪಾಕಿಸ್ತಾನದ ವಿರುದ್ಧ ಟೀಮ್ ಇಂಡಿಯಾದ (Team India) ನಾಯಕತ್ವ ವಹಿಸಿರುವ ಮಿಥಾಲಿ, ಐಸಿಸಿ ಮಹಿಳಾ ವಿಶ್ವಕಪ್‌ನ ಆರು ಋತುಗಳಲ್ಲಿ ಕಾಣಿಸಿಕೊಂಡ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

22 ವರ್ಷಗಳ ಹಿಂದೆ ವಿಶ್ವಕಪ್‌ನಲ್ಲಿ ಮೊದಲ ಪಂದ್ಯ ಆಡಿದ್ದರು (Cricket World Cup)
ಮೌಂಟ್ ಮೌಂಗನುಯಿನ  ಬೇ ಓವಲ್‌ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ವಿಶ್ವಕಪ್‌ನ ಪಂದ್ಯ ನಂ. 4 ರಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದೊಂದಿಗೆ ಭಾರತ ತನ್ನ ಆಟ ಆರಂಭಿಸಿದಾಗ ಮಿಥಾಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಕ್ರೀಡಾ ಇತಿಹಾಸದ ಶ್ರೇಷ್ಠ ಆಟಗಾರ್ತಿಯರಲ್ಲಿ ಒಬ್ಬರಾದ ಮಿಥಾಲಿ 22 ವರ್ಷಗಳ ಹಿಂದೆ ಮೊದಲ ಬಾರಿಗೆ ಶೋಪೀಸ್ ಈವೆಂಟ್‌ನಲ್ಲಿ ಭಾಗವಹಿಸಿದ್ದರು. ಮಿಥಾಲಿ ನ್ಯೂಜಿಲೆಂಡ್ ಆಯೋಜಿಸಿದ್ದ ವಿಶ್ವಕಪ್‌ನ 2000 ಋತುವನ್ನು ಆಡಿದ ಭಾರತೀಯ ಕ್ರಿಕೆಟ್ ತಂಡದ ಭಾಗವಾಗಿದ್ದರು.

ಮಿಥಾಲಿ ತಮ್ಮ ವೃತ್ತಿಜೀವನದ ಆರನೇ ವಿಶ್ವಕಪ್ ಆಡುತ್ತಿದ್ದಾರೆ
ಮಿಥಾಲಿ ಟೀಮ್ ಇಂಡಿಯಾದ ನಾಯಕಿಯಾಗಿ ತನ್ನ ದಾಖಲೆಯ ಆರನೇ ವಿಶ್ವಕಪ್ ಅಭಿಯಾನಕ್ಕಾಗಿ ನ್ಯೂಜಿಲೆಂಡ್‌ಗೆ ತೆರಳಿದ್ದಾರೆ. ತನ್ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಜೊತೆಗೆ ಮಿಥಾಲಿ ಕೂಡ ಗಣ್ಯರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಕ್ರಿಕೆಟ್ ದಂತಕಥೆ ತೆಂಡೂಲ್ಕರ್ ಅವರು ಟೀಮ್ ಇಂಡಿಯಾಗಾಗಿ ತಮ್ಮ ಅಧ್ಭುತ  ವೃತ್ತಿಜೀವನದಲ್ಲಿ ಆರು ವಿಶ್ವಕಪ್ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದರು. ಏಷ್ಯಾದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಕೊನೆಯ ವಿಶ್ವಕಪ್ ಆಗಿದ್ದ  2011 ರ ಋತುವಿನಲ್ಲಿ ಟೀಮ್ ಇಂಡಿಯಾ ವಿಶ್ವಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

ಇದನ್ನೂ ಓದಿ-women's world cup 2022 : ಪಾಕ್ ವಿರುದ್ಧ ಗೆದ್ದು ಬೀಗಿದ ಭಾರತದ ಮಹಿಳಾ ಮಣಿಗಳು!

ವಿಶ್ವಕಪ್‌ನಲ್ಲಿ ಸುಧೀರ್ಘ ಪ್ರಯಾಣ
ಎಲ್ಲ  ಶ್ರೇಷ್ಠ ಹಂತಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಕುರಿತು ಮಾತನಾಡಿರುವ  ಭಾರತೀಯ ತಂಡದ ನಾಯಕಿ ಮಿಥಾಲಿ, ತಮ್ಮ ವೃತ್ತಿಜೀವನವು ಪೂರ್ಣ ವಲಯಕ್ಕೆ ಬಂದಿದೆ ಎಂದು ಹೇಳಿದ್ದಾರೆ. ನ್ಯೂಜಿಲೆಂಡ್‌ನಲ್ಲಿ 2000 ರ ವಿಶ್ವಕಪ್‌ನಿಂದ ಹಿಡಿದು  ನಾನು ಸುಧೀರ್ಘ ಪಯಣ ನಡೆಸಿದ್ದೇನೆ ಎಂದು ಅವರು  ಹೇಳಿದ್ದಾರೆ. 2000 ರಲ್ಲಿ ನಡೆದ ವಿಶ್ವಕಪ್ ನಿಂದ ಟೈಫಾಯಿಡ್ ಕಾರಣ ವಂಚಿತಳಾಗಿದ್ದೆ ಎಂದು ಮಿಥಾಲಿ ಹೇಳಿದ್ದಾರೆ.

ಇದನ್ನೂ ಓದಿ-PF ಖಾತೆದಾರರೆ ಗಮನಿಸಿ : ಆದಷ್ಟೂ ಬೇಗ ಮಾಡಿ ಖಾತೆಗೆ ಸಂಬಂಧಿಸಿದ ಈ ಕೆಲಸ!

2005 ಮತ್ತು 2017ರಲ್ಲಿ ಭಾರತ ತಂಡ ರನ್ನರ್ ಅಪ್ ಆಗಿತ್ತು
ಮಹಿಳಾ ವಿಶ್ವಕಪ್ ಸೀಜನ್ ನಲ್ಲಿ   ವಿಶ್ವಕಪ್ ಪ್ರಶಸ್ತಿಗಾಗಿ ಟೀಮ್ ಇಂಡಿಯಾದ ದೀರ್ಘಾವಧಿಯ ಕಾಯುವಿಕೆಯನ್ನು ಕೊನೆಗೊಳಿಸಲು ಮಿಥಾಲಿ ಮತ್ತು ಆಕೆಯ ತಂಡ (Womens Cricket Team) ಬಯಸಿದೆ. 50 ಓವರ್‌ಗಳ ಫಾರ್ಮ್ಯಾಟ್ ನಲ್ಲಿ ಭಾರತ ಇದುವರೆಗೆ ಮಹಿಳಾ ವಿಶ್ವಕಪ್ ಗೆದ್ದಿಲ್ಲ. ಭಾರತ ಕ್ರಿಕೆಟ್ ತಂಡದ ಭಾಗವಾಗಿದ್ದ ಮಿಥಾಲಿ 2005 ಮತ್ತು 2017ರಲ್ಲಿ ರನ್ನರ್ ಅಪ್ ಆಗಿದ್ದರು. ಅನುಭವಿ ಬ್ಯಾಟ್ಸ್‌ಮನ್ ಮಿಥಾಲಿ ಮಹಿಳಾ ಏಕದಿನ ಕ್ರಿಕೆಟ್‌ನ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಎರಡನೇ ಕ್ರಿಕೆಟ್ ಆಟಗಾರ್ತಿಯಾಗಿದ್ದಾರೆ.

ಇದನ್ನೂ ಓದಿ-women's world cup 2022 : 25ನೇ ಅರ್ಧಶತಕ ಸಿಡಿಸಿದ ಸ್ಮ್ರತಿ ಮಂದನಾ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News