IPL 2024ರಲ್ಲಿ ನಾಯಕತ್ವದ ಜೊತೆ ಧೋನಿಗೆ ಮತ್ತೊಂದು ಜವಾಬ್ದಾರಿ: ಕಡೆಗೂ ಸಸ್ಪೆನ್ಸ್ ರಿವೀಲ್ ಮಾಡಿದ ಮಾಹಿ

MS Dhoni new role features: ವೀಡಿಯೊ ಕ್ಲಿಪ್‌’ನಲ್ಲಿ ಕಾಣುವಂತೆ 42 ವರ್ಷ ವಯಸ್ಸಿನವರಾಗಿ ಧೋನಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಈ ಜಾಹಿರಾತು ವಿಡಿಯೋವನ್ನು ಧೋನಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

Written by - Bhavishya Shetty | Last Updated : Mar 6, 2024, 02:15 PM IST
    • ಎಂಎಸ್ ಧೋನಿ ತಮ್ಮ 'ಹೊಸ ಪಾತ್ರ'ದ ಬಗ್ಗೆ ಸೀಕ್ರೆಟ್ ರಿವೀಲ್ ಮಾಡಿದ್ದಾರೆ
    • ಜಾಹೀರಾತು ವೀಡಿಯೊದಲ್ಲಿ ಕಾಣಿಸಿಕೊಂಡ ಎಂಎಸ್ ಧೋನಿ
    • ಹೊಸ ಪಾತ್ರ ನಿರ್ವಹಿಸುವ ಬಗ್ಗೆ ಧೋನಿ ಕುತೂಹಲಕಾರಿ ಪೋಸ್ಟ್
IPL 2024ರಲ್ಲಿ ನಾಯಕತ್ವದ ಜೊತೆ ಧೋನಿಗೆ ಮತ್ತೊಂದು ಜವಾಬ್ದಾರಿ: ಕಡೆಗೂ ಸಸ್ಪೆನ್ಸ್ ರಿವೀಲ್ ಮಾಡಿದ ಮಾಹಿ title=
ms dhoni

MS Dhoni new role features: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಮೊದಲು ಜಿಯೋ ಸಿನಿಮಾದ ಜಾಹೀರಾತು ವೀಡಿಯೊದಲ್ಲಿ ಕಾಣಿಸಿಕೊಳ್ಳುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ (CSK) ನಾಯಕ ಎಂಎಸ್ ಧೋನಿ ತಮ್ಮ 'ಹೊಸ ಪಾತ್ರ'ದ ಬಗ್ಗೆ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.

ಇದನ್ನೂ ಓದಿ: IPL ಇತಿಹಾಸದಲ್ಲಿ ಈ 5 ದಾಖಲೆಗಳನ್ನು ಇದುವರೆಗೆ ಯಾರಿಂದಲೂ ಬ್ರೇಕ್ ಮಾಡಲು ಸಾಧ್ಯವೇ ಆಗಿಲ್ಲ: ಯಾವುವು ಗೊತ್ತಾ?

ಇತ್ತೀಚೆಗೆ, ಮುಂಬರುವ ಐಪಿಎಲ್ ಸೀಸನ್‌’ನಲ್ಲಿ ಹೊಸ ಪಾತ್ರ ನಿರ್ವಹಿಸುವ ಬಗ್ಗೆ ಧೋನಿ ಕುತೂಹಲಕಾರಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದರು.

ವೀಡಿಯೊ ಕ್ಲಿಪ್‌’ನಲ್ಲಿ ಕಾಣುವಂತೆ 42 ವರ್ಷ ವಯಸ್ಸಿನವರಾಗಿ ಧೋನಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಈ ಜಾಹಿರಾತು ವಿಡಿಯೋವನ್ನು ಧೋನಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಜಿಯೋ ಸಿನಿಮಾವನ್ನು ಟ್ಯಾಗ್ ಮಾಡಿ, “ಹೊಸ ಸೀಸನ್, ಡಬಲ್ ರೋಲ್! ಮಾರ್ಚ್ 22 ರಿಂದ ಪ್ರಾರಂಭವಾಗುವ ಐಪಿಎಲ್ ಸಂಪೂರ್ಣವಾಗಿ ಉಚಿತ” ಎಂದು ಬರೆದುಕೊಂಡಿದ್ದಾರೆ.

ಇದಕ್ಕೂ ಮುನ್ನ, ಧೋನಿ ತಮ್ಮ ಅಧಿಕೃತ ಫೇಸ್‌ಬುಕ್ ಪುಟದಲ್ಲಿ "ಹೊಸ ಸೀಸನ್ ಮತ್ತು ಹೊಸ 'ಪಾತ್ರ'ಕ್ಕಾಗಿ ಕಾಯುತ್ತಿದ್ದೇನೆ” ಎಂದು ಪೋಸ್ಟ್ ಮಾಡುವ ಮೂಲಕ ಸಂಚಲನ ಮೂಡಿಸಿದ್ದರು. ಪೋಸ್ಟ್ ತ್ವರಿತವಾಗಿ ವೈರಲ್ ಆಗಿದ್ದು, ಧೋನಿ ಏನನ್ನು ಹೇಳುತ್ತಿದ್ದಾರೆ ಎಂದು ಅಭಿಮಾನಿಗಳಲ್ಲಿ ಊಹಾಪೋಹ ಸೃಷ್ಟಿಯಾಗಿತ್ತು.

 

ಇದನ್ನೂ ಓದಿ:  most searched person on google : ಜನರು ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಿರುವುದು ಈ ವ್ಯಕ್ತಿಯ ಬಗ್ಗೆಯೇ !

ಮಾರ್ಚ್ 22 ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ನಡೆಯಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News