ಭಾರತೀಯ ಕ್ರಿಕೆಟ್ ಲೋಕಕ್ಕೆ ಆಘಾತ! ಅಸೋಸಿಯೇಷನ್ ಅಧ್ಯಕ್ಷ ಅಕಾಲಿಕ ನಿಧನ

Amol Kale passed away: ಮಾಧ್ಯಮಗಳ ವರದಿ ಪ್ರಕಾರ, ಅಮೋಲ್ ಕಾಳೆ ಕೂಡ ಈ ಹೈ ವೋಲ್ಟೇಜ್ ಪಂದ್ಯವನ್ನು ಆನಂದಿಸಲು ಬಂದಿದ್ದರು. ಪಂದ್ಯದ ನಂತರ ಅವರ ಆರೋಗ್ಯ ಹದಗೆಟ್ಟಿದ್ದು, ಹೃದಯಾಘಾತದಿಂದ ನಿಧನರಾಗಿದ್ದಾರೆ.

Written by - Bhavishya Shetty | Last Updated : Jun 10, 2024, 09:16 PM IST
    • ಮುಂಬೈ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಅಮೋಲ್ ಕಾಳೆ ನಿಧನ
    • ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯ
    • ಕಳೆದ ವರ್ಷವಷ್ಟೇ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಅಧ್ಯಕ್ಷರಾಗಿದ್ದರು
ಭಾರತೀಯ ಕ್ರಿಕೆಟ್ ಲೋಕಕ್ಕೆ ಆಘಾತ! ಅಸೋಸಿಯೇಷನ್ ಅಧ್ಯಕ್ಷ ಅಕಾಲಿಕ ನಿಧನ title=
Amol Kale

Amol Kale passed away: ಕಳೆದ ದಿನ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಅದ್ಭುತ ಗೆಲುವು ದಾಖಲಿಸಿದೆ. ಈ ಗೆಲುವಿನ ಸಂಭ್ರಮ ನ್ಯೂಯಾರ್ಕ್‌’ನಾದ್ಯಂತ ಪ್ರತಿಧ್ವನಿಸಿತು. ಆದರೆ ಈ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ, ಅಮೋಘ ಪಂದ್ಯದ ನಂತರ ಘಟನೆಯೊಂದು ನಡೆದಿದ್ದು, ಭಾರತೀಯ ಕ್ರಿಕೆಟ್ ಜಗತ್ತು ಶೋಕದಲ್ಲಿ ಮುಳುಗಿದೆ.

ಇದನ್ನೂ ಓದಿ: ವಿಚ್ಛೇದಿತೆಯನ್ನ ಪ್ರೀತಿಸಿ ಮದ್ವೆಯಾದ ಟೀಂ ಇಂಡಿಯಾದ ಈ ಸ್ಪಿನ್ ಮಾಂತ್ರಿಕ ಓದಿದ್ದು ಇಂಜಿನಿಯರಿಂಗ್, ಆಗಿದ್ದು ಕ್ರಿಕೆಟರ್! ಯಾರೆಂದು ತಿಳಿಯಿತೇ?

ಮುಂಬೈ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಅಮೋಲ್ ಕಾಳೆ ನಿಧನರಾಗಿದ್ದಾರೆ. ಅಮೋಲ್ ಕಳೆದ ವರ್ಷದಿಂದ ಈ ಹುದ್ದೆಯಲ್ಲಿದ್ದರು.

ಜೂನ್ 9 ರಂದು, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಿತು. ಈ ಶ್ರೇಷ್ಠ ಪಂದ್ಯವನ್ನು ಆನಂದಿಸಲು ಅನೇಕ ದಿಗ್ಗಜರು ನೆರೆದಿರುವುದು ಕಂಡುಬಂದಿತು. ಮಾಧ್ಯಮಗಳ ವರದಿ ಪ್ರಕಾರ, ಅಮೋಲ್ ಕಾಳೆ ಕೂಡ ಈ ಹೈ ವೋಲ್ಟೇಜ್ ಪಂದ್ಯವನ್ನು ಆನಂದಿಸಲು ಬಂದಿದ್ದರು. ಪಂದ್ಯದ ನಂತರ ಅವರ ಆರೋಗ್ಯ ಹದಗೆಟ್ಟಿದ್ದು, ಹೃದಯಾಘಾತದಿಂದ ನಿಧನರಾಗಿದ್ದಾರೆ.

ಇದನ್ನೂ ಓದಿ: ಯುವ ವಿಚ್ಛೇದನದ ಹಿಂದಿರುವ ಆ ಪ್ರಸಿದ್ಧ ನಟಿ ಬೇರಾರು ಅಲ್ಲ… ಸಪ್ತಮಿ ಗೌಡ!! ನೋಟಿಸ್’ನಲ್ಲಿ ಹೆಸರು ಉಲ್ಲೇಖಿಸಿದ ಶ್ರೀದೇವಿ

ಅಮೋಲ್ ಕಾಳೆ 1983 ರ ವಿಶ್ವಕಪ್ ಚಾಂಪಿಯನ್ ತಂಡದ ಆಟಗಾರ ಸಂದೀಪ್ ಪಾಟಿಕ್ ಅವರನ್ನು ಸೋಲಿಸುವ ಮೂಲಕ ಅಧ್ಯಕ್ಷ ಸ್ಥಾನವನ್ನು ಪಡೆದಿದ್ದರು. ಕಳೆದ ವರ್ಷವಷ್ಟೇ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಅಧ್ಯಕ್ಷರಾಗಿದ್ದರು. ಅಮೋಲ್ ಬಿಸಿಸಿಐ ಖಜಾಂಚಿ ಆಶಿಶ್ ಶೆಲಾರ್ ಮತ್ತು ದೇವೇಂದ್ರ ಫಡ್ನವಿಸ್‌;ಗೆ ನಿಕಟವಾಗಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News