ಪ್ರೀತಿಯಲ್ಲಿ ಮೋಸ ಹೋಗಿಲ್ಲ.. ಬ್ರೇಕಪ್‌ನಿಂದಲ್ಲ.. ಸಲ್ಮಾನ್‌ ಖಾನ್‌ ಮದುವೆ ಆಗದೇ ಉಳಿದಿದ್ದು ʼಈʼ ಕಾರಣಕ್ಕೆ!! ಅಷ್ಟಕ್ಕೂ ಏನದು?

why salman khan Still not getting married: ನಟ ಸಲ್ಮಾನ್ ಖಾನ್ ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಒವರು ತಮ್ಮ ಸಿನಿಮಾಗಳಿಂದ ಮಾತ್ರವಲ್ಲದೇ ಇತರ ವಿಷಯಗಳಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. 

Written by - Savita M B | Last Updated : Sep 22, 2024, 04:34 PM IST
  • ಸಲ್ಮಾನ್ ಖಾನ್ ಅನೇಕ ಸ್ಥಳಗಳಲ್ಲಿ ಅಭಿಮಾನಿಗಳನ್ನು ಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ
  • 58ರಲ್ಲೂ ಭಾಯಿಜಾನ್ ಒಂಟಿ ಜೀವನ ನಡೆಸುತ್ತಿದ್ದಾರೆ..
ಪ್ರೀತಿಯಲ್ಲಿ ಮೋಸ ಹೋಗಿಲ್ಲ.. ಬ್ರೇಕಪ್‌ನಿಂದಲ್ಲ.. ಸಲ್ಮಾನ್‌ ಖಾನ್‌ ಮದುವೆ ಆಗದೇ ಉಳಿದಿದ್ದು ʼಈʼ ಕಾರಣಕ್ಕೆ!! ಅಷ್ಟಕ್ಕೂ ಏನದು?  title=

salman khan: ಸಲ್ಮಾನ್ ಖಾನ್ ಅನೇಕ ಸ್ಥಳಗಳಲ್ಲಿ ಅಭಿಮಾನಿಗಳನ್ನು ಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ. ಭಾಯಿಜಾನ್ ತನ್ನ ಪೋಷಕರನ್ನೂ ಗೌರವಿಸುತ್ತಾನೆ. ಸಲ್ಮಾನ್ ಖಾನ್ ಸಂಪೂರ್ಣ ಕುಟುಂಬದ ವ್ಯಕ್ತಿ. ಇದರ ಹೊರತಾಗಿಯೂ ಸಲ್ಮಾನ್ ಖಾನ್ ಇನ್ನೂ ಸಿಂಗಲ್ ಆಗಿದ್ದಾರೆ. 58ರಲ್ಲೂ ಭಾಯಿಜಾನ್ ಒಂಟಿ ಜೀವನ ನಡೆಸುತ್ತಿದ್ದಾರೆ.. 

ಸಲ್ಮಾನ್ ಖಾನ್ ಅನೇಕ ನಟಿಯರೊಂದಿಗೆ ಡೇಟಿಂಗ್ ಮಾಡಿದ್ದಾರೆ. ಆದರೆ ಯಾರೊಂದಿಗೂ ನಟನ ಸಂಬಂಧವು ಮದುವೆಯ ಹಂತವನ್ನು ತಲುಪಲಿಲ್ಲ. ಆದರೆ ಬ್ರೇಕಪ್, ಪ್ರೀತಿಯಲ್ಲಿ ಮೋಸ ಈ ಕಾರಣಗಳಿಂದಾಗಿ ಸಲ್ಮಾನ್ ಖಾನ್ ಸಿಂಗಲ್ ಆಗಿಲ್ಲ, ಆದರೆ ಅದರ ಹಿಂದಿದೆ ಬೇರೊಂದು ಅಸಲಿ ಸತ್ಯ.. ಅದೇನೆಂದು ಇಲ್ಲಿ ತಿಳಿಯೋಣ.. 

ಇದನ್ನೂ ಓದಿ- "ನಿಮಗೆ ನನ್ನನ್ನು ನೋಡಲೂ ಸಾಧ್ಯವಾಗಲ್ಲ, ನಾನು ಹೊರಡುತ್ತೇನೆ"- ಫ್ಯಾನ್ಸ್‌ ಟೆನ್ಶನ್‌ ಹೆಚ್ಚಿಸಿದ ವಿರಾಟ್ ಕೊಹ್ಲಿ ಹೇಳಿಕೆ! ಭಾರತ ತೊರೆದು ಹೊರಟೇಬಿಟ್ರಾ ವಿರುಷ್ಕಾ?
 
ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್ ಹಾಗೂ ಅವರ ತಂದೆ ಸಲೀಂ ಖಾನ್ ಕಾರ್ಯಕ್ರಮವೊಂದರಲ್ಲಿ ದೊಡ್ಡ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. 'ಅನೇಕ ಜನರು ಖಾನ್ ಕುಟುಂಬದ ಎಲ್ಲರೂ ಗ್ಯಾಲಕ್ಸಿನಲ್ಲಿ ವಾಸಿಸುತ್ತಾರೆ ಎಂದು ಭಾವಿಸುತ್ತಾರೆ. ಆದರೆ ಮದುವೆಯ ನಂತರ, ನಾನು, ಸೊಹೈಲ್ ತಮ್ಮ ಕುಟುಂಬದೊಂದಿಗೆ ಬೇರ್ಪಟ್ಟೆವು.. ಸಲ್ಮಾನ್ ಖಾನ್ ಇನ್ನೂ ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದಾರೆ.

ಇದನ್ನೂ ಓದಿ- "ನಿಮಗೆ ನನ್ನನ್ನು ನೋಡಲೂ ಸಾಧ್ಯವಾಗಲ್ಲ, ನಾನು ಹೊರಡುತ್ತೇನೆ"- ಫ್ಯಾನ್ಸ್‌ ಟೆನ್ಶನ್‌ ಹೆಚ್ಚಿಸಿದ ವಿರಾಟ್ ಕೊಹ್ಲಿ ಹೇಳಿಕೆ! ಭಾರತ ತೊರೆದು ಹೊರಟೇಬಿಟ್ರಾ ವಿರುಷ್ಕಾ?

ಸಲ್ಮಾನ್ ಖಾನ್ ತನ್ನ ಪೋಷಕರೊಂದಿಗೆ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಅರ್ಬಾಜ್‌ ಮತ್ತು ಸಲ್ಮಾನ್ ಅಪಾರ್ಟ್‌ಮೆಂಟ್ ಹಂಚಿಕೊಂಡಿದ್ದರೂ, ಪ್ರತ್ಯೇಕ ಮನೆಗಳಲ್ಲಿ ವಾಸಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.. ಈ ವಿಡಿಯೋ ಹೊರಬಿದ್ದ ನಂತರ ಅಭಿಮಾನಿಗಳು, 'ಸಲ್ಮಾನ್ ತನ್ನ ತಂದೆ-ತಾಯಿಯನ್ನು ತುಂಬಾ ಪ್ರೀತಿಸುವ ಕಾರಣಕ್ಕೆ ಮದುವೆಯಾಗಲಿಲ್ಲ' ಎಂದುಕೊಳ್ಳುತ್ತಿದ್ದಾರೆ... ಸದ್ಯ ಸಲೀಂ ಖಾನ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವೈರಲ್ ಆಗಿದೆ.

ಸಲ್ಮಾನ್ ಖಾನ್ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೇ ಅವರು ನಟಿ ಸಂಗೀತಾ ಬಿಜಲಾನಿ ಅವರನ್ನು ಮದುವೆಯಾಗ ಹೊರಟಿದ್ದರು.. ಆದರೆ ಸಂಬಂಧ ನಾನಾ ಕಾರಣಗಳಿಂದ ಮುರಿದುಬಿತ್ತು... ಅದರ ನಂತರ, ಐಶ್ವರ್ಯಾ ರೈ ನಟನ ಜೀವನಕ್ಕೆ ಪ್ರವೇಶಿಸಿದರು. ಆದರೆ ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಅದರ ನಂತರ, ಭಾಯಿಜಾನ್ ಹೆಸರು ಕತ್ರೀನಾ ಕೈಫ್ ಜೊತೆ ತಳುಕು ಹಾಕಿಕೊಂಡಿತು.. ಆದರೆ ಸಲ್ಮಾನ್ ಖಾನ್ ಯಾವುದೇ ನಟಿಯೊಂದಿಗಿನ ಸಂಬಂಧವು ಮದುವೆಯ ವರೆಗೂ ಹೋಗಲಿಲ್ಲ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News