"ಯಾರೂ ಭಾರತಕ್ಕೆ ಇಲ್ಲಾ ಎಂದು ಹೇಳಲ್ಲ" -ಉಸ್ಮಾನ್ ಖವಾಜಾ

ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಉಸ್ಮಾನ್ ಖವಾಜಾ ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ಇತ್ತೀಚೆಗೆ ಪಾಕಿಸ್ತಾನ ಪ್ರವಾಸ ಕೈಬಿಟ್ಟಿದ್ದಕ್ಕೆ ನಿರಾಶೆ ವ್ಯಕ್ತಪಡಿಸಿದ್ದಾರೆ, ಹಣಕಾಸಿನ ಕಾರಣಗಳು ಆ ನಿರ್ಧಾರಗಳಲ್ಲಿರಬಹುದು ಎಂದು ಹೇಳಿದ್ದಾರೆ.

Written by - ZH Kannada Desk | Last Updated : Sep 24, 2021, 05:49 PM IST
  • ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಉಸ್ಮಾನ್ ಖವಾಜಾ ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ಇತ್ತೀಚೆಗೆ ಪಾಕಿಸ್ತಾನ ಪ್ರವಾಸ ಕೈಬಿಟ್ಟಿದ್ದಕ್ಕೆ ನಿರಾಶೆ ವ್ಯಕ್ತಪಡಿಸಿದ್ದಾರೆ, ಹಣಕಾಸಿನ ಕಾರಣಗಳು ಆ ನಿರ್ಧಾರಗಳಲ್ಲಿರಬಹುದು ಎಂದು ಹೇಳಿದ್ದಾರೆ.
  • 34 ವರ್ಷದ ಕ್ರಿಕೆಟಿಗ ಉಸ್ಮಾನ್ ಖವಾಜಾ ತಾನು ಹುಟ್ಟಿದ ದೇಶವಾದ ಪಾಕಿಸ್ತಾನಕ್ಕೆ ಪ್ರವಾಸ ಮಾಡುವುದರ ಬಗ್ಗೆ ಯಾವುದೇ ಆತಂಕವನ್ನು ಹೊಂದಿಲ್ಲ ಎಂದು ಹೇಳಿದರು.'
 "ಯಾರೂ ಭಾರತಕ್ಕೆ ಇಲ್ಲಾ ಎಂದು ಹೇಳಲ್ಲ" -ಉಸ್ಮಾನ್ ಖವಾಜಾ

ನವದೆಹಲಿ: ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಉಸ್ಮಾನ್ ಖವಾಜಾ ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ಇತ್ತೀಚೆಗೆ ಪಾಕಿಸ್ತಾನ ಪ್ರವಾಸ ಕೈಬಿಟ್ಟಿದ್ದಕ್ಕೆ ನಿರಾಶೆ ವ್ಯಕ್ತಪಡಿಸಿದ್ದಾರೆ, ಹಣಕಾಸಿನ ಕಾರಣಗಳು ಆ ನಿರ್ಧಾರಗಳಲ್ಲಿರಬಹುದು ಎಂದು ಹೇಳಿದ್ದಾರೆ.

34 ವರ್ಷದ ಕ್ರಿಕೆಟಿಗ ಉಸ್ಮಾನ್ ಖವಾಜಾ ತಾನು ಹುಟ್ಟಿದ ದೇಶವಾದ ಪಾಕಿಸ್ತಾನಕ್ಕೆ ಪ್ರವಾಸ ಮಾಡುವುದರ ಬಗ್ಗೆ ಯಾವುದೇ ಆತಂಕವನ್ನು ಹೊಂದಿಲ್ಲ ಎಂದು ಹೇಳಿದರು.'ಆಟಗಾರರು ಮತ್ತು ಸಂಘಟನೆಗಳು ಪಾಕಿಸ್ತಾನವನ್ನು ಬೇಡ ಎಂದು ಹೇಳುವುದು ತುಂಬಾ ಸುಲಭ ಎಂದು ನನಗೆ ಅನಿಸುತ್ತದೆ, ಏಕೆಂದರೆ ಅದು ಪಾಕಿಸ್ತಾನ (Pakistan)" ಎಂದು ಹೇಳಿರುವುದನ್ನು ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ವರದಿ ಮಾಡಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಯ ಈ ನಿರ್ಧಾರಕ್ಕೆ ಇಂಗ್ಲೆಂಡ್ ಕ್ರಿಕೆಟರ್ ಕೆವಿನ್ ಪಿಟರ್ಸನ್ ಮೆಚ್ಚುಗೆ..!

"ಬಾಂಗ್ಲಾದೇಶವಾಗಿದ್ದರೆ ಅದೇ ವಿಷಯವು ಅನ್ವಯಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಒಂದು ಭಾರತವಾದರೆ ಯಾರೂ ಕೂಡ ಅದಕ್ಕೆ ಇಲ್ಲಾ ಎಂದು ಹೇಳಲ್ಲ.ಇದು ಹಣಕಾಸಿನ ವಿಚಾರ, ನಮ್ಮೆಲ್ಲರಿಗೂ ಇದು ತಿಳಿದಿರುವ ಸಂಗತಿ, ಇದರ ಪಾತ್ರ ಬಹುಶಃ ದೊಡ್ಡದಾಗಿದೆ.ಅವರು ತಮ್ಮ ಪಂದ್ಯಾವಳಿಗಳ ಮೂಲಕ ಪದೇ ಪದೇ ಅವರು ಕ್ರಿಕೆಟ್ ಆಡಲು ಸುರಕ್ಷಿತ ಸ್ಥಳವೆಂದು ಸಾಬೀತುಪಡಿಸುತ್ತಲೇ ಇದ್ದಾರೆ' ಎಂದು ಖವಾಜ ವಿವರಿಸಿದರು.

ಇದನ್ನೂ ಓದಿ: 2007 T20 World Cup Champion : ಕ್ರಿಕೆಟ್ ನಲ್ಲಿ ಭಾರತ ಇಂದು ಪಾಕ್ ವಿರುದ್ಧ ಗೆದ್ದು ಇತಿಹಾಸ ಸೃಷ್ಟಿಸಿದ ದಿನ!

ಕಳೆದ ವಾರ ಭದ್ರತಾ ಕಾರಣಗಳಿಗಾಗಿ ನ್ಯೂಜಿಲೆಂಡ್ ತಮ್ಮ ಸೀಮಿತ ಓವರ್‌ಗಳ ಪಾಕಿಸ್ತಾನ ಪ್ರವಾಸದಿಂದ ಹಿಂದೆ ಸರಿದಿದೆ.ರಾವಲ್ಪಿಂಡಿಯಲ್ಲಿ ಏಕದಿನ ಪಂದ್ಯದ ಮೊದಲ ದಿನ ಅವರು ಪ್ರವಾಸದಿಂದ ಹೊರಬಂದರು.ಇಂಗ್ಲೆಂಡ್ ಕೆಲವು ದಿನಗಳ ನಂತರ ಇದೆ ನಡೆಯನ್ನು ಅನುಸರಿಸಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

More Stories

Trending News